ಸುದ್ದಿವಿಜಯ, ಜಗಳೂರು: ಕಾರ್ ಮತ್ತು ಟ್ರ್ಯಾಕ್ಟರ್ ಕಂತು ಕಟ್ಟಿ ಉಳಿದ ಹಣವನ್ನು ಬೈಕ್ನ ಸೈಡ್ ಬ್ಯಾಗ್ನಲ್ಲಿ ಇರಿಸಿ 20 ಮೀ ಬರುವಷ್ಟರಲ್ಲೇ ಟ್ರಾಫಿಕ್ ಕೃತಕ ಟ್ರಾಫಕ್ ಸೃಷ್ಟಿಸಿ 5 ಲಕ್ಷ ರೂ ದರೋಡೆ ಮಾಡಿರುವ ಘಟನೆ ಪಟ್ಟಣದ ಎಸ್ಬಿಐ ಬ್ಯಾಂಕ್ ಆವರಣದಲ್ಲಿ ಸೋಮವಾರ ನಡೆದಿದೆ.
ಘಟನೆ ವಿವರ: ತಾಲೂಕಿನ ಗೋಡೆ ಗ್ರಾಮದ ಚನ್ನಪ್ಪ ಎಂಬುವವರು ಚಿತ್ರದುರ್ಗ ಜಿಲ್ಲೆಯ ಸೀಬಾರ ಗ್ರಾಮದ ವ್ಯಕ್ತಿಯೋರ್ವನಿಗೆ ಅಡಕೆ ಮಾರಾಟ ಮಾಡಿದ್ದರು. ವರ್ತಕನಿಂದ 7 ಲಕ್ಷ ರೂ ಹಣ ಪಡೆದು ಬೈಕ್ನ ಸೈಡ್ ಬ್ಯಾಗ್ನಲ್ಲಿ ಇರಿಸಿಕೊಂಡು ಸೀಬಾರದಿಂದ ಜಗಳೂರಿಗೆ ಬಂದಿದ್ದಾರೆ.
ಬಂದಿರುವ ಹಣದಲ್ಲಿ ಹೊಸ ಕಾರು ಖರೀದಿಗೆ ಮತ್ತು ಟ್ರ್ಯಾಕ್ಟರ್ ಕಂತು ಕಟ್ಟಲು 2 ಲಕ್ಷ ರೂಗಳನ್ನು ಬ್ಯಾಂಕ್ನಲ್ಲಿ ಕಟ್ಟಿದ್ದಾರೆ. ಉಳಿದ 5 ಲಕ್ಷ ರೂಗಳನ್ನು ಪುನಃ ಸೈಡ್ ಬ್ಯಾಗ್ನಲ್ಲಿ ಇರಿಸಿಕೊಂಡು ಅದರ ಮೇಲೆ ಜರ್ಕಿನ್ ಇಟ್ಟು ಮುಂದೆ ಸಾಗಿದ್ದಾರೆ.ಜಗಳೂರು ಪಟ್ಟಣದ ಎಸ್ಬಿಐ ಬ್ಯಾಂಕ್ ಆವರಣ
ಕೇವಲ 20 ಮೀಟರ್ ಸಾಗುವಷ್ಟರಲ್ಲಿ ಒಂದು ಬೈಕ್ ಅಡ್ಡ ಬಂದಿದೆ ಹೀಗಾಗಿ ಚನ್ನಪ್ಪ ಬೈಕ್ ನಿಲ್ಲಿಸಿದ್ದಾರೆ. ತಕ್ಷಣವೇ ಗಮನ ಬೇರೆಡೆ ಸೆಳೆದ ಕಳ್ಳರು, ಬ್ಯಾಗ್ನಲ್ಲಿದ್ದ 5 ಲಕ್ಷ ರೂ ಹಣವನ್ನು ಎಗರಿಸಿದ್ದಾರೆ.
ಇದನ್ನು ಗಮನಿಸದ ಚನ್ನಪ್ಪ ಔಷಧ ಅಂಗಡಿಗೆ ಹೋಗಿ ಮಾತ್ರೆ ಖರೀದಿಸಿ ಸೈಡ್ ಬ್ಯಾಗ್ನಲ್ಲಿ ಇಡಲು ಹೋದಾಗ ಜರ್ಕೀನ್ ಸಮೇತ ಹಣ ನಾಪತ್ತೆಯಾಗಿದ್ದನ್ನು ಗಮನಿಸಿ ಕುಸಿದು ಬಿದ್ದಿದ್ದಾರೆ.
ಸುತ್ತಲಿನ ಜನ ನೋಡಿ ಅವರನ್ನು ಸಮಾಧಾನಪಡಿಸಿ ತಕ್ಷಣವೇ ಬ್ಯಾಂಕ್ ಒಳಗೆ ಹೋಗಿ ಮ್ಯಾನೇಜರ್ ಬಳಿ ನಡೆದ ಘಟನೆ ವಿವರಿಸಿದ್ದಾರೆ. ಬ್ಯಾಂಕ್ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮೂರು ಜನ ವ್ಯಕ್ತಿಗಳು ಸೇರಿ ಹಾಡ ಹಗಲೇ ದರೋಡೆ ಮಾಡಿರುವ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ದರೋಡೆ ಘಟನೆ ಕೇವಲ 2 ನಿಮಿಷಗಳಲ್ಲಿ ನಡೆದಿದೆ. ಈ ಘಟನೆ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರು ಕಳ್ಳತನ ಮಾಡಿ ಸಾಗಿರುವ ಮಾರ್ಗಗಳಲ್ಲಿ ಸಾಗುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿದೆ.
ಸಿಸಿಟಿವಿ ಫುಟೇಜ್ನಲ್ಲಿ ದಾಖಲಾಗಿರುವ ದೃಶ್ಯಗಳನ್ನು ಆಧರಿಸಿ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಸಬ್ಇನ್ಸ್ಪೆಕ್ಟರ್ ಎಸ್.ಡಿ.ಸಾಗರ್ ಮತ್ತು ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಸಿದ್ದಾರೆ.