ಸುದ್ದಿವಿಜಯ,ಜಗಳೂರು:ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ ಎಂದು ಅಂಬೇಡ್ಕರ್ ಸಮಾಜಕ್ಕೆ ತೋರಿಸಿಕೊಟ್ಟರು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ನಾಗಲಿಂಗಪ್ಪ ಹೇಳಿದರು.
ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸಂವಿಧಾನ ಯಾರೊಬ್ಬರ ಸ್ವತ್ತು ಅಲ್ಲ. ಸಂವಿಧಾನ ಇಲ್ಲದಿದ್ದರೆ ದೇಶ ಅಭಿವೃದ್ದಿ ಅಸಾದ್ಯವಾಗಿದೆ.
ಪ್ರತಿಯೊಬ್ಬ ಭಾರತೀಯನು ಅಂಬೇಡ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸುವುದು ತುಂಬ ಅವಶ್ಯಕವಾಗಿದೆ ಎಂದರು.
ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಪ್ರತಿ ವರ್ಷವು ಅಂಬೇಡ್ಕರ್ ಜಯಂತಿಯನ್ನು ಶಾಲಾ, ಕಾಲೇಜುಗಳು, ಸರ್ಕಾರಿ, ಖಾಸಗಿ ಕಚೇರಿಗಳಲ್ಲಿಯೂ ಆಚರಣೆ ಮಾಡಲಾಗುತ್ತದೆ ಎಂದರು.
ಉಪನ್ಯಾಸಕ ಬಿ.ಎನ್.ಎಂ ಸ್ವಾಮಿ ಮಾತನಾಡಿ, ಸಂವಿಧಾನ ರಚನೆ ನಿರ್ಮಾತೃ ಅಂಬೇಡ್ಕರ್, ಅವರ ಪಟ್ಟ ನೋವು, ವೇಧನೆ ಯಾರು ಉಂಡಿಲ್ಲ. ಅದರ ಶ್ರಮದ ಅರಿವು ಎಲ್ಲರಿಗೂ ತಿಳಿಯಬೇಕು ಎಂದರು.
ಹುಟ್ಟಿನಿಂದ ಸಾಯುವವರೆಗೂ ಅವಮಾನ ಅನುಭವಿಸಿ ಜನರಿಗೆ ಸುಖ, ಶಾಂತಿ ಕೊಟ್ಟ ಮಹಾನ್ ತ್ಯಾಗಿಯಾಗಿದ್ದಾರೆ.
140ಕೋಟಿ ಜನರು ಮೀಸಲಾತಿಯೊಳಗೆ ಬದುಕುತ್ತಿದ್ದಾರೆ. ಅದನ್ನು ವಿರೋಧ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದಸಂಸ ಸಂಚಾಲಕ ಮಾಚಿಕೆರೆ ಸತೀಶ್ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಇತರೆ ಪುಸ್ತಕಗಳನ್ನು ಓದುವಕ್ಕಿಂತಹ ಅಂಬೇಡ್ಕರ್ ಅವರು ಬರೆದ ಭಾರತ ಸಂವಿಧಾನವನ್ನು ಪ್ರತಿ ಮನೆ ಮನೆಯಲ್ಲೂ ಓದಬೇಕು ಮತ್ತು ಪೂಜಿಸಬೇಕು ಎಂದರು.
ಸಂವಿಧಾನದಡಿಯಲ್ಲಿ ಮೀಸಲಾತಿ ಪಡೆಯುತ್ತಿರುವ ಎಲ್ಲಾ ಸಮುದಾಯಗಳು ಆತನನ್ನು ಗೌರವಿಸಬೇಕು. ಕೆಲವರು ಅಂಬೇಡ್ಕರ್ ಅವತನ್ನು ಒಂದೇ ಸಮುದಾಯಕ್ಕೆ ಸಮೀತ ಮಾಡಿರುವುದು ಖಂಡನೀಯ ಎಂದರು.
ಕಣ್ವಕುಪ್ಪೆ ಮಾರಪ್ಪನಾಯಕ, 192 ದೇಶಗಳ ಸಂವಿಧಾನ ಓದಿ ಭಾರತ ಸಂವಿಧಾನ ಬರೆದ ಅಂಬೇಡ್ಕರ್ ಅಸಾಧಾರಣ ನಾಯಕರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ, ಮುಖಂಡ ಬಿಸ್ತುವಳ್ಳಿ ಬಾಬು, ಚಂದ್ರು, ರಾಜಶೇಖರ್, ಪರಶುರಾಮ, ನಿವೃತ್ತ ಶಿಕ್ಷಕ ಶಿವಣ್ಣ, ವಿಜಯ್ ಕೆಂಚೋಳ್, ಆರ್.ಓಬಳೇಶ್, ವಕೀಲ ಹನುಮಂತಪ್ಪ ಸೇರಿದಂತೆ ಮತ್ತಿತರಿದ್ದರು.