ಸುದ್ದಿವಿಜಯ,ಜಗಳೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬೀಗಜಡಿದು ರೈತರು ಶನಿವಾರ ಪ್ರತಿಭಟನೆ ನಡೆಸಿದರು.
ಕಳೆದ ಎರಡು ತಿಂಗಳ ಹಿಂದೆ ರಾಗಿ ಖರೀದಿಸಲಾಗಿದ್ದು, ರೈತರ ಖಾತೆಗಳಿಗೆ ಹಣಪಾವತಿಸದೆ ಅಧಿಕಾರಿಗಳು ವಿಳಂಬನೀತಿ ಅನುಸರಿಸುತ್ತಿದ್ದಾರೆ.
ಸರಕಾರ ಬಡ ರೈತರ ಅನುಕೂಲಕ್ಕಾಗಿ ರಾಗಿ ಖರೀದಿ ಕೇಂದ್ರ ತೆರೆದಿರುವುದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತೊಂದೆಡೆ ಮದ್ಯವರ್ತಿಗಳ ಹಾವಳಿಯಿಂದ ಸರಕಾರದ ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳುವಲ್ಲಿ ವಿಫಲವಾಗಿದೆ.
ಹೀಗಾಗಿ ರೈತರು ಕಂಗಾಲಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಎಪಿಎಂಸಿ ಬಗ್ಗೆ ಇರುವ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ.
ಕೂಡಲೇ ಹಣಪಾವತಿಸದಿದ್ದರೆ ಹೊರಾಟ ನಡೆಸಲಾಗುವುದು ಎಂದು ಗಡಿಮಾಕುಂಟೆ, ಚಿಕ್ಕಬನ್ನಿಹಟ್ಟಿ. ಕೆಚ್ಚೇನಹಳ್ಳಿ, ಮೆದಿಕೇರನಹಳ್ಳಿ. ಬಸಪ್ಪನಹಟ್ಟಿ ಗ್ರಾಮದ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್ ಭೇಟಿ ನೀಡಿ ಎಫ್‍ಐಡಿ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿ ಹಣಪಾವತಿಸಲು ಎಪಿಎಂಸಿ ಸಿಬ್ಬಂದಿಗಳಿಗೆ ಸೂಚಿಸಿ ಪ್ರತಿಭಟನಾ ನಿರತ ರೈತರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ಸಂದರ್ಭದಲ್ಲಿ ರೈತರಾದ ಬಸವರಾಜ, ರವಿಕುಮಾರ, ಹೊಸಕೆರೆ ಕಲ್ಲೇಶ್, ಗೌರಿಪುರ ಸುರೇಶ್, ಉದ್ದಘಟ್ಟ ಬಸವರಾಜ್ ಸೇರಿದಂತೆ ನೂರಾರು ಜನ ರೈತರು ಇದ್ದರು.