ಜಗಳೂರು: ಲೈನ್‍ಮನ್ ರುದ್ರೇಗೌಡನಿಂದ ಟ್ರಾನ್ಸ್ ಫಾರ್ಮರ್ ಗೋಲ್‍ಮಾಲ್

Suddivijaya
Suddivijaya July 3, 2024
Updated 2024/07/03 at 5:52 AM

suddivijayanews3/07/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಯಾವುದೇ ಗ್ರಾಮದಲ್ಲಿರುವ ರೈತರ ( ಟ್ರಾನ್ಸ್ ಫಾರ್ಮರ್ )ಟಿಸಿಗಳು ಸುಟ್ಟು ಹೋದರೆ 15 ರಿಂದ 20 ದಿನಗಳು ಹೊಸ ಟಿಸಿ ತೆಗೆದುಕೊಳ್ಳಲು ಸಮಯ ಬೇಕಾಗುತ್ತದೆ.

ಅದರೆ ಜಮ್ಮಾಪುರ ಗ್ರಾಮದಲ್ಲಿರುವ ಲೈನ್ ಮನ್ ರುದ್ರೇಗೌಡ ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರಿಂದ ಹಣಪಡೆದು ಒಂದೇ ದಿನದಲ್ಲಿ ಟ್ರಾನ್ಸ್ ಫಾರ್ಮರ್ ಳನ್ನು (ಟಿಸಿ) ಕೂರಿಸುವ ತಾಕತ್ತು ಇವರಿಗಿದೆ ಎಂದು ರೈತರು ಆರೋಪಿಸಿದ್ದಾರೆ.

ರೈತರಿಂದ ಸುಲಿಗೆ:

ರೈತರ ಜಮೀನುಗಳಲ್ಲಿ ಟ್ರ್ಯಾನ್ಸ್ ಫಾರ್ಮರ್(ಟಿಸಿ) ಸುಟ್ಟು ಹೋದರೆ ಬೆಸ್ಕಾಂ ನಿಯಮಗಳಿಗೆ ವಿರುದ್ಧವಾಗಿ ರೈತರಿಂದ 10 ರಿಂದ 20 ಸಾವಿರ ಹಣಪಡೆದು ಸ್ಥಳದಲ್ಲೇ ಟಿಸಿ ಕೊಟ್ಟು ರೈತರಿಗೆ ವಂಚನೆ ಮಾಡುತ್ತಿದ್ದಾರೆ.

ರೈತರು ನಿಯಮಗಳಂತೆ ಟಿಸಿ ಕೇಳಿದರೆ ತಡ ಮಾಡುತ್ತಾರೆ. ಈ ವ್ಯಕ್ತಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹಣ ಕೊಟ್ಟರೆ ಸಾಕು ದಿನದಲ್ಲೇ ಟಿಸಿಗಳು ರೈತರ ಜಮೀನಿಗೆ ಬರುತ್ತವೆ ಎಂದು ಜಮ್ಮಾಪುರ ಗ್ರಾಮದ ರೈತರಾದ ಈಶ್ವರಪ್ಪ ಆರೋಪಿಸಿದ್ದಾರೆ.

ಗ್ರಾಮದಲ್ಲಿ ಟಿಸಿಗಳು:

ಟಿಸಿಗಳು ಸುಟ್ಟರೆ 15 ರಿಂದ 20 ದಿನಗಳ ಕಾಲ ರೈತರನ್ನು ಸತಾಯಿಸುವ ಅಧಿಕಾರಿಗಳು ಟಿಸಿಗಳು ಇಲ್ಲ ಎಂದು ಸಬೂಬು ಹೇಳುತ್ತಾರೆ.

ಆದರೆ ಜಮ್ಮಾಪುರ ಗ್ರಾಮದಲ್ಲಿ ಲೈನ್‍ಮನ್ ರುದ್ರಗೌಡ ಕಕ್ಕಳಮೇಲಿ ಮೂರು ಟ್ರಾನ್ಸ್ ಫಾರ್ಮರ್ (ಟಿಸಿ ನಂಬರ್:370717, 321952, 341122)ಬಚ್ಚಿಟ್ಟಿದ್ದಾರೆ ಎಂದು ತಿಪ್ಪೇಸ್ವಾಮಿ ಮತ್ತು ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕರ ವಾರ್ನಿಂಗ್: ಕಳೆದ ವರ್ಷದ ಹಿಂದೆ ರುದ್ರಗೌಡ ಕಕ್ಕಳಮೇಲಿ ಮೇಲೆ ಗಂಭೀರ ಆರೋಪ ಕೇಳಿಬಂದಾಗ ಅವರನ್ನು ಬಿಳಿಚೋಡು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.

ರೈತರು ಶಾಸಕರಲ್ಲಿ ಬಂದು ಲೈನ್‍ಮನ್ ವಿರುದ್ಧ ದೂರು ನೀಡಿದಾಗ ಶಾಸಕ ಬಿ.ದೇವೇಂದ್ರಪ್ಪ ಅವರು ಲೈನ್‍ಮನ್‍ಗೆ ವಾರ್ನಿಂಗ್ ಮಾಡಿದ್ದರು. ಆದರೂ ಪ್ರಭಾವಿಗಳ್ನು ಬಳಸಿಕೊಂಡು ಮತ್ತೆ ಜಮ್ಮಾಪುರ ಗ್ರಾಮಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ.ವರ್ಗಾಣೆಯಾಗಿ ಬಂದರೂ ಮೊದಲಿನ ಚಾಳಿ ಮುಂದುವರೆಸಿದ್ದಾರೆ. 20 ವರ್ಷಗಳಲ್ಲಿ ಮುರು ಬಾರಿ ವರ್ಗವಾದರೂ ಪುನಃ ಇಲ್ಲಿಗೆ ಹಣ ಕೊಟ್ಟು ವರ್ಗಮಾಡಿಸಿಕೊಳ್ಳುತ್ತಾರೆ.

ಇವರಿಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಾಥ್ ನೀಡುತ್ತಾರೆ. ಇಷ್ಟೊಂದೆಲ್ಲಾ ಅಕ್ರಮಗಳು ಹೊರ ಬಂದರೂ ಸಂಬಂಧಪಟ್ಟ ಬೆಸ್ಕಾಂ ಎಕ್ಸಿಕಿಟ್ಯೂವ್ ಎಂಜಿನಿಯರ್ ಎಸ್.ಕೆ.ಪಾಟೀಲ್ ಆಗಲಿ ಎಇಇ ಸುಧಾಮಣಿ ಅವರಾಗಲಿ ಕ್ರಮ ಕೈಗೊಂಡಿಲ್ಲ.

ಲೈನ್‍ಮನ್ ರುದ್ರಗೌಡ ಕಕ್ಕಳಮೇಲಿ ಮಾಡಿರುವ ಅಕ್ರಮಗಳನ್ನು ತನಿಖೆ ಮಾಡಿಸಿ ತಕ್ಷಣವೇ ಅಮಾನತು ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ : 

ಪ್ರಕರಣ ಬಗ್ಗೆ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ. ಪತ್ರಿಕಾ ಮಾಧ್ಯಮಗಳಿಂದ ಲೈನ್‍ಮನ್ ಅಕ್ರಮಗಳು ಬೆಳಕಿಗೆ ಬಂದಿವೆ. ತಕ್ಷಣವೇ ಎಇಇ ಸುಧಾಮಣಿ ಅವರಿಗೆ ಸೂಚನೆ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡುತ್ತೇನೆ ಎಂದು ಎಕ್ಸಿಕಿಟ್ಯೂವ್ ಎಂಜಿನಿಯರ್ ಎಸ್.ಕೆ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!