ಜಗಳೂರು:ಭಗತ್‍ಸಿಂಗ್ ವಿಚಾರಧಾರೆ ಯುವಜನತೆ ಅಳವಡಿಸಿಕೊಳ್ಳಿ

Suddivijaya
Suddivijaya September 29, 2023
Updated 2023/09/29 at 1:45 PM

ಸುದ್ದಿವಿಜಯ,ಜಗಳೂರು: ಭಗತ್‍ಸಿಂಗ್ ಅವರ ಪ್ರಗತಿಪರ ವಿಚಾರಧಾರೆಯನ್ನು ವಿದ್ಯಾರ್ಥಿಗಳು, ಯುವಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರನುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಜೆ. ಮಹಾಲಿಂಗಪ್ಪ ಹೇಳಿದರು.

ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿಯಲ್ಲಿ ಗುರುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿ ಯುವಕರು ಏರ್ಪಡಿಸಿದ್ದ ಭಗತ್ ಸಿಂಗ್ ಅವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಗತ್‍ಸಿಂಗ್ ಅವರು 12 ವರ್ಷದ ಬಾಲಕನಾಗಿದ್ದಾಗ ಜಾಲಿಯಾನ ವಾಲಬಾಗ್‍ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ನಡೆದ ಹೃದಯ ವಿದ್ರಾವಕ ಘಟನೆ ಅವರ ಮನಸ್ಸಿಗೆ ತುಂಬಾ ಪರಿಣಾಮವನ್ನುಂಟು ಮಾಡಿತ್ತು. ಈ ಘಟನೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ತಿರುವು ನೀಡಿತ್ತು.

  ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿಯಲ್ಲಿ ಗುರುವಾರ ಸಂಜೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿ ಭಗತ್ ಸಿಂಗ್ ಅವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.
  ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿಯಲ್ಲಿ ಗುರುವಾರ ಸಂಜೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿ ಭಗತ್ ಸಿಂಗ್ ಅವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಇಂತಹ ಸಂದರ್ಭದಲ್ಲಿ ಬ್ರಿಟಿಷ್ ಸರಕಾರವು ಭಾರತೀಯರಿಗೆ ವಿರುದ್ಧವಾದ ಎರಡು ಕರಾಳ ಮಸೂದೆಗಳನ್ನು ಮಂಡಿಸಲು ಮುಂದಾದಾಗ ಅದನ್ನು ವಿರೋಧಿಸಿ ಭಗತ್‍ಸಿಂಗ್ ಅವರು ಅಸೆಂಬ್ಲಿಯಲ್ಲಿ ಬಾಂಬ್‍ನ್ನು ಸ್ಫೋಟಿಸುವುದು ಹಾಗೂ ಕರಪತ್ರ ಹಂಚುವುದರ ಮೂಲಕ ಪ್ರತಿಭಟಿಸಿ ಹೋರಾಟ ಆರಂಭಿಸಿದ್ದರು ಎಂದು ತಿಳಿಸಿದರು.

ತನ್ನ 23ನೇ ವಯಸ್ಸಿನಲ್ಲಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿ ಕೊನೆಗೆ ಮಾ. 23 1931 ರಲ್ಲಿ ತನ್ನ ಸಂಗಡಿಗರಾದ ರಾಜಗುರು ಸುಖದೇವ್ ಅವರ ಜತೆಗೆ ಗಲ್ಲಿಗೆ ಏರುವ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಯುವಕರಲ್ಲಿ ದೇಶಪ್ರೇಮ ಮೂಡಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಯುವಕರನ್ನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ನೆನೆದರು.

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಮಾರುತಿ ಆರ್ ಮಾರುತಿ ಪಿ ಮೋಹನ್ ಎಮ್ ಜೆ ಸಿ.ಪಿ ರಂಗಸ್ವಾಮಿ, ಗಿರೀಶ್, ಗೋವಿಂದರಾಜು, ನವೀನ್, ವಸತಿ ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!