ಬಿಜೆಪಿ ಮುಖಂಡ ಪ್ರಭು ಕಾನನಕಟ್ಟೆ ಕಾಂಗ್ರೆಸ್ ಅಥವಾ ಪಕ್ಷೇತರನೋ, ಇವರ ನಡೆ ಯಾರ ಕಡೆ ನಾಳೆ ಕಾದು‌ನೋಡೋಣ.

Suddivijaya
Suddivijaya May 3, 2023
Updated 2023/05/03 at 6:35 AM

Suddivijaya|Kannada News|03-05-2023

ಸುದ್ದಿವಿಜಯ ಜಗಳೂರು.ತಾಲೂಕಿನ  ಬಿಜೆಪಿ ‌ಮುಖಂಡರಾದ ಕಾನನಕಟ್ಟೆ ಕೆ.ಎಸ್.ಪ್ರಭು ಅವರು ಬಿಜೆಪಿ ತೊರೆಯುವುದು ನಿಶ್ಚಿತವಾಗಿದ್ದು ,ಅವರ ನೆಡೆ ಕಾಂಗ್ರೆಸ್ ಕಡೆಗೋ ಪಕ್ಷೇತರ ಅಭ್ಯರ್ಥಿ ಕಡೆಗೋ ಎಂಬ ವಿಷಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೌದು ಜಗಳೂರು ತಾಲೂಕಿನ ರಾಣಕಾರಣದಲ್ಲಿ ತನ್ನದೇ ಚಾಪು ಮೂಡಿಸಿರುವ ವರ್ಣ ರಂಜಿತ ರಾಜಕಾರಣಿ ಕಾನನಕಟ್ಟೆ ಕೆ.ಎಸ್.ಪ್ರಭು ಅವರು ತಾಲೂಕು  ರಾಜಕಾರಣದಲ್ಲಿ ತನ್ನದೇ ಸೇವೆ ಮಾಡುತ್ತಾ ಅಪಾರ ಅಭಿಮಾನ ಬಳಗವನ್ನ ಹೊಂದಿದ್ದು, ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಶಾಸಕರ ರಾಮಚಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.ಅಲ್ಲಿಂದ ಇಲ್ಲಿವರಿಗೂ ಶಾಸಕರಾದ ಎಸ್.ವಿ.ರಾಮಚಂದ್ರ ಅವರ ಹೆಗಲಿಗೆ ಹೆಗಲು ಕೊಟ್ಟು ಬಿಜೆಪಿ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.

ಇಂದಿನ 2023 ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಅಷ್ಟೇನು ಸಕ್ರಿಯವಾಗಿ ಗುರುತಿಸಿಕೊಳ್ಳದೆ ಅಂತರ ಕಾಪಾಡಿಕೊಂಡಿದ್ದಾರೆ.

ಜಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರ ಪರವಾಗಿ 2008 ರಲ್ಲಿ ನಂತರ 2010 ರಲ್ಲಿ ಪಕ್ಷೇತರ ವಾಗಿ ಸ್ಪರ್ದಿಸಿದ್ದ ರಾಜೇಶ್ ಪರವಾಗಿ ಚುನಾವಣೆ ಮಾಡಿ ಹಾಗು 2013 ರಲ್ಲಿ ಅವರ ಪರವಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಅವರ ಗೆಲುವಿಗೆ ಸಹಕರಿಸಿದ್ದರು.

ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಗೆಲುವಿಗೆ ಶ್ರಮ ಹಾಕಿದ್ದರು. ಇದುವರಿಗೂ ಬಿಜೆಪಿಯಲ್ಲಿ ಇದ್ದು ಶಾಸಕ ಎಸ್.ವಿ. ರಾಮಚಂದ್ರ ಪರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿ ಇತ್ತೀಚಿಗೆ ನೆಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರ ಸೂಚನೆಯಂತೆ ಬಿಜೆಪಿ ಗೆಲುವಿಗೆ ಶ್ರಮಿಸಿದ್ದಾರೆ.

ಪ್ರಸ್ತಯ 2023 ಚುನಾವಣೆಯಲ್ಲಿ ಸಕ್ರೀಯ ವಾಗಿ ಭಾಗವಹಿಸದೆ ಅಂತರ ಕಾಪಾಡಿಕೊಂಡಿದ್ದು ಅವರ ಮುಂದಿನ ನೆಡೆ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರ ಪರವಾಗೋ ಅಥವಾ ಪಕ್ಷೇತರ ಅಭ್ಯರ್ಥಿ ಪರವಾಗೋ ಎಂಬುದು ಕುತೂಹಲ ಮೂಡಿಸಿದೆ.

ಶೀಘ್ರವೇ ಅಣಬೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅಪಾರ ಬೆಂಬಲಿಗರೊಂದಿಗೆ ಯಾರ ಪರವಾಗಿ ಸೇರಲಿದ್ದಾರೆ ಎಂಬುವುದು  ನಾಳೆ ಕಾದು ನೋಡ ಬೇಕಿದೆ.

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!