ಸುದ್ದಿವಿಜಯ, ಜಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದು ಮತ್ತೋರ್ವ ಗಂಭೀರ ಗಾಯ ಗೊಂಡಿರುವ ಘಟನೆ ಜಗಳೂರು ತಾಲೂಕಿನ ಗೌಡಿಕಟ್ಟೆ ಗ್ರಾಮದ ಬಳಿ ಗುರುವಾರ ಸಂಜೆ ಜರುಗಿದೆ.
ಪುನಬಗಟ್ಟ ಗ್ರಾಮದ ಸುರೇಶ್(23) ಮೃತ ದುರ್ದೈವಿ. ಮತ್ತೋರ್ವ ಗಂಭೀರ ಗಾಯಗೊಂಡಿದ್ದು ಗಾಯಾಳುವನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಾಗಿದೆ.
ಬೆಲ್ಲದ ವ್ಯಾಪಾರಿಗಳಾಗಿದ್ದ ಇವರು ಅಂಗಡಿಗಳಿಗೆ ಬೆಲ್ಲ ಸರಬರಾಜು ಮಾಡಲು ಹೊಸಕೆರೆಯಿಂದ ಪುನಬಗಟ್ಟ ಗ್ರಾಮಕ್ಕೆ ವಾಪಸ್ ತೆರಳುತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಈ ಘಟನೆ ಸಂಬಂದ ಜಗಳೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಜಗಳೂರು ಪೆÇಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.