ಸುದ್ದಿವಿಜಯ,ಜಗಳೂರು: ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಿದ್ದರಾಮಯ್ಯ ಅವರಿಗೆ ಯಾದವ ಸಮುದಾಯದ ಮುಖಂಡ ರಾಕೇಶ್ ಅವರ ಪುತ್ರ ಎಂಟು ವರ್ಷದ ಹುಡುಗ ಮಿಥುನ್ ತಾವು ಕೂಡಿಟ್ಟ 10 ಸಾವಿರ ಹಣವನ್ನು ನೀಡಿ ಗೆದ್ದುಬನ್ನಿ ಸಾರ್ ಎಂದು ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಯಾರು ಹಣ ಕೊಟ್ಟರು ಎಂದು ಸಿದ್ದರಾಮಯ್ಯ ಕೇಳುತ್ತಿದ್ದಂತೆ ನಾನು ಚಿಲ್ಲರೆ ನಾಣ್ಯಗಳನ್ನು ಡಬ್ಬಿಯಲ್ಲಿ ಹಾಕಿದ್ದೆ. ಅದನ್ನು ಅಪ್ಪ ನೋಟಾಗಿ ಪರಿವರ್ತಿಸಿ ಕೊಟ್ಟರು ಎಂದು ಬಾಲಕ ಮಿಥುನ್ ಉತ್ತರಿಸಿದ.
ತಾಂಡ, ಹಟ್ಟಿಗಳನ್ನು ಕಂದಾಯ ಗ್ರಾಮ ಮಾಡಿದವರು ಸಿದ್ದರಾಮಯ್ಯ
ಸುದ್ದಿವಿಜಯ, ಜಗಳೂರು: ತಾಂಡ, ಹಟ್ಟಿಗಳನ್ನು ನಮ್ಮ ಸರಕಾರ ಕಂದಾಯ ಗ್ರಾಮಗಳನ್ನಾಗಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬೀದರ್ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಪರಿಷತ್ ಮುಖ್ಯಸಚೇತಕ ಪ್ರಕಾಶ್ ರಾಠೋಡ್ ವಾಗ್ದಾಳಿ ನಡೆಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 2017ರಲ್ಲೇ ಲಂಬಾಣಿ ತಾಂಡ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದರು. ಬಿಜೆಪಿಯವರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಒಳ ಮೀಸಲಾತಿಯಲ್ಲಿ ಅನ್ಯಾಯ ಮಾಡಿದ್ದಾರೆ. ಅವರಿಗೆ ಮತಹಾಕಬೇಡಿ ಎಂದು ಮನವಿ ಮಾಡಿದರು.
ಜನ ಸಾಗರ:
ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಪರ ಪ್ರಚಾರಕ್ಕೆ ಕ್ಷೇತ್ರದ 22 ಗ್ರಾಪಂಗಳು ಸೇರಿದಂತೆ ಅರಸಿಕೆರೆ ಭಾಗದ ಏಳು ಗ್ರಾಪಂಗಳ ಅಂದಾಜು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಎಲ್ಲೆಲ್ಲೂ ಟಗರು, ಗುಟುರು, ಹೌದು ಹುಲಿಯಾ ಘೋಷಣೆಗಳೇ ಮೊಳಗಿದವು.