Suddivijaya|Kannada News|29-05-2023
ಸುದ್ದಿವಿಜಯ ಜಗಳೂರು.ಬೇಸಿಗೆ ರಜೆ ಮುಗಿಸಿ ಶಾಲೆಗೆ ತೆರಳಲು ಮಕ್ಕಳು ಅಣಿಯಾಗಿದ್ದಾರೆ. ಅತ್ತ ಶಾಲೆಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು, ಅಧಿಕಾರಿಗಳು ಭರ್ಜರಿ ಸಿದ್ದತೆ ಮಾಡಿಕೊಂಡಿದ್ದಾರೆ. ರಜೆಯ ನಂತರ ಮೇ.೨೯ ಶಾಲೆಗಳ ಬಾಗಿಲು ತೆರೆಯಲಿದ್ದು ಮಕ್ಕಳಲ್ಲಿ ಹರ್ಷ ತಂದಿದೆ.
ಅಜ್ಜ, ಅಜ್ಜಿ ಮನೆ ಪ್ರವಾಸ, ಮಿನಿ ಟೂರ್, ಬೆಂಗಳೂರು, ಮೈಸೂರು ಪ್ರವಾಸದೊಂದಿಗೆ ಧಾರ್ಮಿಕ ಕ್ಷೇತ್ರ ಸುತ್ತಾಡಿರುವ ಮಕ್ಕಳು ಕಳೆದ ಎರಡು ತಿಂಗಳು ಶಾಲೆ ಬಗ್ಗೆ ಅಲೋಚನೆ ಮಾಡಿರಲಿಲ್ಲ. ಈಗ ರಜೆಯ ಮಜೆ ಮುಗಿದಿದೆ. ಮಕ್ಕಳು ಬ್ಯಾಗ್ ಮೇಲಿನ ಧೂಳು ಕೊಡವಿಕೊಂಡು ಶಾಲೆಗೆ ಹೊರಡಲು ಅಣಿಯಾಗುತ್ತಿದ್ದಾರೆ.
ಪಾಲಕರು ತಮ್ಮ ಮಕ್ಕಳಿಗೆ ಅಗತ್ಯ ಇರುವ ಪಠ್ಯಪುಸ್ತಕ, ಬ್ಯಾಗ್, ಸಮವಸ್ತ್ರ, ಶೂ, ಸಾಕ್ಸ್‌ಗಳನ್ನು ಖರೀದಿಸಿ ಶಾಲೆಗೆ ಕಳಿಸಲು ಭರದ ಸಿದ್ದತೆಯಲ್ಲಿ ನಿರತರಾಗಿದ್ದಾರೆ.
ಪಟ್ಟಣದಲ್ಲಿ ಖಾಸಗಿ ಶಾಲೆಗಳು ಸೋಮವಾರದಿಂದ ಅಧಿಕೃತವಾಗಿ ಬಾಗಿಲು ತೆರದಿವೆ. ಮೇ. ೨೯ರಿಂದ ಸರ್ಕಾರಿ ಶಾಲೆ, ಅನುದಾನಿತ, ಅನುದಾನ ರಹಿತ ಶಾಲೆಗಳು ಪುನರಾರಂಭವಾಗುತ್ತಿವೆ.
ಏನೇನು ಗಮನಹರಿಸಬೇಕು:
ಶಾಲೆ ಆರಂಭಕ್ಕೂ ಎರಡು ದಿನ ಮುಂಚಿತವಾಗಿ ಶಿಕ್ಷಕರು ಶಾಲೆ ಬಾಗಿಲು ತೆಗೆದು ಆವರಣ ಗುಡಿಸಿ ಸಾರಿಸಬೇಕು, ಕೊಠಡಿ, ಶೌಚಗೃಹ, ಅಡುಗೆ ಕೋಣೆ, ಸ್ವಚ್ಛಗೊಳಿಸಬೇಕು, ಶಾಲೆಯಿಂದ ಹೊರಗುಳಿದ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತರಲು ಬೇಕಾದ ದಾಖಲಾತಿ ಆಂದೋಲನ ನಡೆಸಬೇಕು, ಶಾಲೆ ಆರಂಭ ದಿನದಿಂದಲೇ ಬಿಸಿಯೂಟದ ವ್ಯವಸ್ಥೆ ಮಾಡಬೇಕು, ಪಾಠ ಮಾಡುವ ವೇಳಾ ಪಟ್ಟಿ ತಯಾರಿಸಬೇಕು, ಶೈಕ್ಷಣಿಕ ಚಟುವಟಿಕೆ ಹಾಗೂದಾಖಲಾತಿ ಪ್ರಕ್ರಿಯೆ ನಡೆಸಬೇಕು ಸೇರಿದಂತೆ ಇನ್ನಿತರೆ ಅಂಶಗಳ ಬಗ್ಗೆ ಗನಹರಿಸಬೇಕಾಗಿದೆ.
ವೈವಿಧ್ಯಮಯ ಕಾರ್ಯಕ್ರಮಗಳು:
ಶಾಲೆಯತ್ತ ಮಕ್ಕಳನ್ನು ಸೆಲೆಯಲು ಶಿಕ್ಷಣ ಇಲಾಖೆಯೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿದೆ. ಮೇ.೨೮ರಂದು ಶಿಕ್ಷಣ ಇಲಾಖೆ ಅಧಿಕಾರಿಗಳು, ಆಯಾ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಿ ತಳಿರು, ತೋರಣ, ರಂಗೋಲಿಗಳಿಂದ ಸಿಂಗಾರಗೊಳಿಸಲಿದ್ದಾರೆ.
ಶಾಲಾ ಪ್ರರಂಭೋತ್ಸವದಂದು ಪಠ್ಯಪುಸ್ತಕ ವಿತರಣೆ ಜತೆಗೆ ಮಕ್ಕಳಿಗೆ ಸಿಹಿ ಊಟವನ್ನು ಉಣಬಡಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಹುತೇಕ ಪಠ್ಯ ಪುಸ್ತಕಗಳು ಪೂರೈಕೆಯಾಗಿದ್ದು, ಆಯಾ ಶಾಲೆಗಳಿಗೆ ಒದಗಿಸಲಾಗಿದೆ. ಶಾಲೆ ಆರಂಭದ ದಿನದಂದು ಜನಪ್ರತಿದಿಗಳು ಹಾಗೂ ಅಧಿಕಾರಿಗಳನ್ನು ಕರೆಯಿಸಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಿದ್ದಾರೆ.
ದಾಖಲಾತಿ ಸಂಖ್ಯೆ :
ಕಳೆದ ಸಾಲಿನಲ್ಲಿ ಒಂದರಿಂದ ಹತ್ತನೆಯ ತರಗತಿಯವರೆಗೂ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿನ ಶಾಲೆ, ಅನುದಾನಿತ ಶಾಲೆ, ಅಲ್ಪ ಸಂಖ್ಯಾತ ಹಿಂದುಳಿದ ಇಲಾಖೆಯ ಶಾಲೆ ಸೇರಿದಂತೆ ೨೭೭೮೨ ವಿದ್ಯಾರ್ಥಿಗಳ ದಾಖಲಾತಿ ಹೊಂದಿದ್ದು, ಇದರಲ್ಲಿ ೨೫೦೦ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಹೊರಗಡೆ ಹೋಗಿದ್ದಾರೆ. ಇನ್ನು ೨೫೨೮೨ ವಿದ್ಯಾರ್ಥಿಗಳಿದ್ದಾರೆ. ಪ್ರಸಕ್ತ ಸಾಲಿನ ದಾಖಲಾತಿ ಆರಂಭವಾಗಿದೆ ದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ತಿಳಿಸಿದ್ದಾರೆ.
ಶಾಲಾ ಪ್ರರಂಭೋತ್ಸವದಂದು ಪಠ್ಯಪುಸ್ತಕ ವಿತರಣೆ ಜತೆಗೆ ಮಕ್ಕಳಿಗೆ ಸಿಹಿ ಊಟವನ್ನು ಉಣಬಡಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಹುತೇಕ ಪಠ್ಯ ಪುಸ್ತಕಗಳು ಪೂರೈಕೆಯಾಗಿದ್ದು, ಆಯಾ ಶಾಲೆಗಳಿಗೆ ಒದಗಿಸಲಾಗಿದೆ. ಶಾಲೆ ಆರಂಭದ ದಿನದಂದು ಜನಪ್ರತಿದಿಗಳು ಹಾಗೂ ಅಧಿಕಾರಿಗಳನ್ನು ಕರೆಯಿಸಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಿದ್ದಾರೆ.ದಾಖಲಾತಿ ಸಂಖ್ಯೆ :ಕಳೆದ ಸಾಲಿನಲ್ಲಿ ಒಂದರಿಂದ ಹತ್ತನೆಯ ತರಗತಿಯವರೆಗೂ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿನ ಶಾಲೆ, ಅನುದಾನಿತ ಶಾಲೆ, ಅಲ್ಪ ಸಂಖ್ಯಾತ ಹಿಂದುಳಿದ ಇಲಾಖೆಯ ಶಾಲೆ ಸೇರಿದಂತೆ ೨೭೭೮೨ ವಿದ್ಯಾರ್ಥಿಗಳ ದಾಖಲಾತಿ ಹೊಂದಿದ್ದು, ಇದರಲ್ಲಿ ೨೫೦೦ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಹೊರಗಡೆ ಹೋಗಿದ್ದಾರೆ. ಇನ್ನು ೨೫೨೮೨ ವಿದ್ಯಾರ್ಥಿಗಳಿದ್ದಾರೆ. ಪ್ರಸಕ್ತ ಸಾಲಿನ ದಾಖಲಾತಿ ಆರಂಭವಾಗಿದೆ ದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ತಿಳಿಸಿದ್ದಾರೆ.