ಸುದ್ದಿವಿಜಯ, ಜಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 76ನೇ ಜನದಿನಾಚರಣೆ ಅಂಗವಾಗಿ ಕ್ಯಾನ್ಸರ್‍ನಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಪಟ್ಟಣದ ಸುಹೇಲ್ ಅಹಮದ್ ಎನ್ನುವ ವ್ಯಕ್ತಿಗೆ 18,300 ರೂ ಆರ್ಥಿಕ ನೆರವು ಸಂಗ್ರಹಿಸಿ ಅವರಿಗೆ ನೀಡುವ ಮೂಲಕ ವಿಶೇಷವಾಗಿ ಶಾಸಕ ಬಿ.ದೇವೇಂದ್ರಪ್ಪ ಹುಟ್ಟುಹಬ್ಬ ಆಚರಿಸಿದರು.
ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ಸಿಎಂ ಹುಟ್ಟು ಹಬ್ಬ ಹಿನ್ನೆಲೆ ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ಸಹಿ ಹಂಚಿದ ನಂತರ ಮಾತನಾಡಿದ ಅವರು, ಕಳೆದ ಬಾರಿ ಇದೇ ದಿನ ಇಡೀ ರಾಜ್ಯದ ಜನರೇ ಸೇರಿ ದಾವಣಗೆರೆಯಲ್ಲಿ ಸಿದ್ದರಾಮಯ್ಯನವರ ಜನ್ಮದಿನಾಚರಣೆ ಆಚರಿಸಿದ್ದರು.
ಈ ಭಾರಿ ಅವರು ಜನರ ಆಶೀರ್ವಾದಿಂದ ಸಿಎಂ ಆಗಿದ್ದಾರೆ. ಐದು ಗ್ಯಾರಂಟಿಗಳನ್ನು ಕೊಟ್ಟ ಸಹೃದಯಿ ಸಿಎಂ ಎಂದರೆ ಅದು ಸಿದ್ದರಾಮಯ್ಯನವರು. ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಆದರೆ ಕನಸೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲು ಸಾಧ್ಯ’ ಎಂದು ಬಜೆಟ್‍ನ ಮುಖಪುಟದಲ್ಲಿ ಮುದ್ರಿಸಿ 14 ಬಜೆಟ್ ಮಂಡಿಸುವ ಮೂಲಕ ರಾಮಕೃಷ್ಣ ಹೆಗಡೆ ಅವರ ದಾಖಲೆ ಮುರಿದವರು ಸಿದ್ದರಾಮಯ್ಯನವರು ಎಂದು ಬಣ್ಣಿಸಿದರು.
ಇದೇ ವೇಳೆ ಸಿಎಂ ಬರ್ತಡೆ ಹಿನ್ನೆಲೆ ವಿವಿಧ ಫಲಾನುಭವಿಗಳಿಗೆ ಶಾಸಕ ಬಿ ದೇವೇಂದ್ರಪ್ಪ ಅವರು ಹಕ್ಕು ಪತ್ರ ವಿತರಿಸಿದರು.
ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಸಿದ್ದರಾಮಯ್ಯ ಅವರು ಕೇವಲ ರಾಜ್ಯಕ್ಕೆ ಅಷ್ಟೇ ಅಲ್ಲ ರಾಷ್ಟ್ರಮಟ್ಟಕ್ಕೆ ಬೆಳೆಯೆಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್ ಮಾತನಾಡಿ, ದೀನದಲಿತರು ಸೇರಿದಂತೆ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ವಿಶಾಲವಾದ ಹೃದಯ ಇರುವ ವ್ಯಕ್ತಿ ಎಂದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಾಗಟ್ಟೆ ಶೇಖರಪ್ಪ, ಮಾಜಿ ಅಧ್ಯಕ್ಷ ಸುರೇಶ್‍ಗೌಡ, ಓಮಣ್ಣ, ಮಹಮದ್‍ಗೌಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಪಪಂ ಸದಸ್ಯ ಅರಿಶಿಣಗುಂಡಿ ಮಂಜುನಾಥ್, ರಮೇಶ್‍ರೆಡ್ಡಿ, ತಿಮ್ಮಾರೆಡ್ಡಿ, ರವಿಕುಮಾರ್,
ಮಂಜುನಾಥ್, ಮಹಮದ್ ಅಲಿ, ಷಕೀಲ್ ಅಹಮದ್, ಯರಬಳ್ಳಿ ಉಮಾಪತಿ, ಕಾಂಗ್ರೆಸ್ ಎಸ್‍ಸಿ, ಎಸ್‍ಟಿ, ಒಬಿಸಿ,ಯುವ ಘಟಕ, ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿಧಿ ಸಂಗ್ರಹಕ್ಕೆ ನೆರವಾದ ರಮೇಶ್ ರೆಡ್ಡಿ
ಕ್ಯಾನ್ಸರ್ ಪೀಡಿತ ಸುಹೇಲ್ ಅಹಮದ್ ಅವರಿಗೆ ಪಪಂ ಸದಸ್ಯ ರಮೇಶ್‍ರೆಡ್ಡಿ ಅವರು ಸಿದ್ದರಾಮಯ್ಯ ಹುಟ್ಟು ಹಬ್ಬದ ಹಿನ್ನೆಲೆ ಅಸಾಯಕ ನಿಧಿ ಸಂಗ್ರಹಕ್ಕೆ ನೆರವಾಗಲು ಸಹಕಾರ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಆರ್ಥಿಕ ಸಹಕಾರ ನೀಡಿದರು. ಶಾಸಕ ದೇವೇಂದ್ರಪ್ಪ ಹತ್ತು ಸಾವಿರ ರೂ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು. ನಂತರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೆಡ್, ಹಣ್ಣುಗಳನ್ನು ಶಾಸಕರು ವಿತರಿಸಿದರು.