ಸುದ್ದಿವಿಜಯ, ಜಗಳೂರು: ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಳ್ಳಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧೀ ಅಗಮನದಿಂದ ರಾಜ್ಯದ ಮಹಿಳೆಯರಿಗೂ ನಾಯಕತ್ವದ ಅವಕಾಶ ಸಿಗಲಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ನಾ ನಾಯಕಿ’ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ನಾಯಕತ್ವಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಅವಿನಾಭಾವ ಸಂಬಂಧವಿದೆ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧೀ ಪಕ್ಷದ ನೇತೃತ್ವ ವಹಿಸಿದಾಗ ಅವರೇ ಅಧಿಕಾರ ಹಿಡಿದು ಸುದೀರ್ಘ ಆಡಳಿತ ನೆಡೆಸಿದ್ದರು.
ನಂತರ ಸೋನಿಯಾ ಗಾಂಧೀ ಅಧ್ಯಕ್ಷರಾದಾಗ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಪಕ್ಷವೂ ಮಹಿಳೆಯರನ್ನ ಸಮಾನವಾಗಿ ಕಂಡು ರಾಜಕೀಯ ಸ್ಥಾನಮಾನನೀಡಿದೆ. ಅದರಂತೆ ಭವಿಷ್ಯದಲ್ಲಿ ಪ್ರಿಯಾಂಕ ಗಾಂಧೀ ಅವರೂ ಸಹ ಹೆಚ್ಚಿನ ಆಸಕ್ತಿ ವಹಿಸಿ ನಾ ನಾಯಕಿ ಎಂಬ ವಿನೂತನ ಕಾರ್ಯಕ್ರಮಮಾಡಿ ಮಹಿಳೆಯರಿಗೆ ಶಕ್ತಿ ತುಂಬಲು ಬರುತ್ತಿದ್ದಾರೆ. ಇದೇ ಜನವರಿ 16 ರಂದು ಪ್ರತಿ ಬೂತ್ ಮಟ್ಟದಿಂದ ಮಹಿಳೆಯರನ್ನ ಸಮಾವೇಶಕ್ಕೆ ಕಳುಹಿಸಲಾಗುವುದು ಎಂದರು.
ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಹಿಳೆಯರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ ಅವರನ್ನ ಸ್ವಾವಲಂಬಿಗಳನ್ನಾಗಿ ಮಾಡಲಾಗಿತ್ತು. ಇಂದಿನ. ಬಿಜೆಪಿ ಸರಕಾರ ಯಾವುದೇ ವಿಶೇಷ ಯೋಜನೆ ನೀಡದೆ ಮಹಿಳೆಯರಿಗೆ ,ವಿದ್ಯಾರ್ಥಿನಿಯರಿಗೆ ವಂಚಿಸಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಹಿಳೆಯರು ಕೇವಲ ಮತಚಲಾಯಿಸಲು ಸೀಮಿತವಲ್ಲ. ರಾಜಕೀಯ ಚಟುವಟಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
ಪ್ರತಿ ಬೂತ್ ಮಟ್ಟದಲ್ಲಿ ಮಹಿಳಾ ಸಂಘಟನೆ ಬಲಗೊಳ್ಳಬೇಕಿದೆ. ಅದಕ್ಕಾಗಿ ಜನವರಿ 16ರ ನಂತರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಬೂತ್ ಗಳಲ್ಲಿ ಮಹಿಳೆಯರಿಗೆ ಅವಕಾಶಮಾಡಿಕೊಟ್ಟು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಹಿಳಾ ಅಧ್ಯಕ್ಷರಿಗೆ ಸೂಚಿಸಿದರು.
ಇದೇ ವೇಳೆ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ , ಉಪಾಧ್ಯಕ್ಷರು ಗೋಡೆ ಪ್ರಕಾಶ್, ಜಿಲ್ಲಾ ಎಸ್ಸಿ ಉಪಾಧ್ಯಕ್ಷರು ಶಂಭುಲಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ,
ಕೆಪಿಸಿಸಿ ಎಸ್ಸಿ ಸದಸ್ಯ ಸಿ.ತಿಪ್ಪೇಸ್ವಾಮಿ, ಮಾಜಿ ತಾ.ಪಂ.ಸದಸ್ಯ ಕುಬೇಂದ್ರಪ್ಪ, ಗ್ರಾ.ಪಂ.ಅಧ್ಯಕ್ಷೆ ಪಂಕಜಾ ಶಂಕರಪ್ಪ, ಗ್ರಾ.ಪಂ.ಸದಸ್ಯ ಬಂಗಾರಪ್ಪ, ಸಣ್ಣ ಓಬಯ್ಯ, ಮುಖಂಡರಾದ ಬಿ.ಲೋಕೇಶ್, ಸೊಕ್ಕೆ ರಾಜಣ್ಣ, ಗೌರಿಪುರ ಷಣ್ಮುಖಸ್ವಾಮಿ, ಮಹಿಳಾ ಕಾರ್ಯದರ್ಶಿ ಸಾವಿತ್ರಮ್ಮ, ಶರಣಮ್ಮ, ಯುವಮುಖಂಡ ಧನ್ಯಕುಮಾರ್ ಸೇರಿ ಹಲವರು ಇದ್ದರು.