ಸುದ್ದಿವಿಜಯ, ಜಗಳೂರು: ಪಟ್ಟಣದಲ್ಲಿ ಮಂಗಳವಾರ ನಾಡ ಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಬನ್ನಿ ಮಂಟಪದಲ್ಲಿ ಬಾಳೆ ಕಂಭ ಕತ್ತರಿಸಿ ಸಾಂಸ್ಕೃತಿಕ ಹಬ್ಬ ಬನ್ನಿ ಮುಡಿಯುವ ಉತ್ಸವಕ್ಕೆ ಚಾಲನೆ ನೀಡಿದರು.
ಪಟ್ಟಣದ ಹೊರವಲಯದ ಗವಿಮಠದ ಸಮೀಪದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ದಸರಾ ಅಂಭಿನೋತ್ಸವ ಅದ್ಧೂರಿಯಾಗಿ ನೆರವೇರಿತು. ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಬಾಳೆ ಕಂಭ ಕತ್ತರಿಸಿ ಅಂಬು ಛೇದಿಸಿದರು.
ಅದಕ್ಕೂ ಮೊದಲು ಕೊದಂಡ ರಾಮದೇವಸ್ಥಾನದಲ್ಲಿ ಶ್ರೀರಾಮ, ಸೀತೆ,ಲಕ್ಷ್ಮಣ, ಹನುಮಂತ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು. ಮೂರ್ತಿಗಳನ್ನು ಟ್ರಾಕ್ಟರ್ನಲ್ಲಿ ಮೆರವಣಿಗೆ ಮೂಲಕ ಬನ್ನಿ ಮಂಟಪದವರೆಗೂ ಕರೆ ತರಲಾಯಿತು. ಬನ್ನಿ ಮರದ ಕೆಳಗೆ ಇರುವ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂಜೆ ಆದ ನಂತರ ಸೇರಿದ್ದ ಭಕ್ತಾಧಿಗಳು ಬನ್ನಿ ಮರದಿಂದ ಬನ್ನಿ ಪತ್ರೆಗಳನ್ನು ಕಿತ್ತು ಪರಸ್ಪರ ವಿನಿಯಮ ಮಾಡಿಕೊಂಡು ಪ್ರೀತಿ-ಸ್ನೇಹ ವಿನಿಮಯ ಹೀಗೆ ಇರಲಿ. ಬನ್ನಿ ಕೊಟ್ಟು ನಿಮ್ಮ ಬಾಳು ಬಂಗಾರವಾಗಲಿ ಎಂದು ಶುಭಕೋರಿದರು.