ಸುದ್ದಿವಿಜಯ,ಜಗಳೂರು: ತಾಲೂಕಿನ ಕಲ್ಲೇದೇವರ ಗ್ರಾಮದ ಸಮೀಪ ಹೊಸದಾಗಿ ನಿರ್ಮಿಸಿದ್ದ ಚೆಕ್ ಡ್ಯಾಂನಲ್ಲಿ ಈಜಲು ಹೊಗಿ ಮುಳುಗಿದ್ದ ಯುವಕನ ಮೃತದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
ಗುರುವಾರ ಸಂಜೆ ಯುವಕ ವಿನಯ್ (32) ತನ್ನ ಸ್ನೇಹಿತರೊಂದಿಗೆ ಹೊಸ ಚಕ್ ಡ್ಯಾಮ್ ಗೆ ಈಜಲು ತೆರಳಿದ್ದಾಗ ನೀರಿಗೆ ಬಿದ್ದಿದ್ದಾನೆ. ಅರ್ಧ ಗಂಟೆಯಾದರೂ ಯುವಕ ಪತ್ತೆಯಾಗಲಿಲ್ಲ.
ಪೋಷಕರಿಗೆ ವಿಷಯ ಮುಟ್ಟಿದ ತಕ್ಷಣ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸತತ ಎರಡು ದಿನ (ಗುರುವಾರ, ಶುಕ್ರವಾರ) ಶೋಧ ನಡೆಸಿದರೂ ಯುವಕನ ಮೃತದೇಹ ಪತ್ತೆಯಾಗಲಿಲ್ಲ.
ಮುಳುಗು ತಜ್ಞರು ಮತ್ತು ಚಿತ್ರದುರ್ಗ ದಿಂದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರನ್ನು ಕರೆಸಿ ಶೋಧ ನಡೆಸಿದರೂ ಶವ ದೊರಕಲಿಲ್ಲ.
ಸ್ಥಳಕ್ಕೆ ದಾವಣಗೆರೆ ಐಪಿಎಸ್ ಅಧಿಕಾರಿ ಕನ್ನಿಕಾ ಸಕ್ರಿವಾಲ್, ತಹಶಿಲ್ದಾರ್ ಜಿ.ಸಂತೋಷ್ ಕುಮಾರ್ ಮತ್ತು ಪಿಎಸ್ಐ ಮಹೇಶ್ ಹೊಸಪೇಟ ಆಗಮಿಸಿ ಪರಿಶೀಲಿಸಿದ್ದರೂ ಮೃತದೇಹ. ಇಂದು (ಶನಿವಾರ) ಜಗಳೂರು ಅಗ್ನಿ ಶಾಮಕ ಠಾಣಾಧಿಕಾರಿ ಹನುಮಂತರಾಯ ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಯುವಕನ ಕಳೇಬರಹ ಪೊದೆಯೊಂದರಲ್ಲಿ ಪತ್ತೆಯಾಗಯಿತು. ತಕ್ಷಣ ಹೊರತೆಗೆದು ಜಗಳೂರು ಸರಕಾರಿ ಶವಾಗಾರಕ್ಕೆ ಶವಪರೀಕ್ಷೆ ಮಾಡಿಸಲಾಯಿತು.