ಸುದ್ದಿವಿಜಯ, ಜಗಳೂರು: ಇಡೀ ರಾಜ್ಯದಲ್ಲೇ ತೀವ್ರ ಬರದ ಕಾರ್ಮೋಡ ವ್ಯಾಪಿಸಿದ್ದು, ಜಿಲ್ಲೆಯ ಜಗಳೂರು ತಾಲೂಕಿಗೆ ಬಂದ ಕೇಂದ್ರ ಬರ ಅಧ್ಯಯನ ತಂಡಕ್ಕೆಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮತ್ತು ತಾಲೂಕು ಎಡಿಎ ಮಿಥುನ್ ಕಿಮಾವತ್ ಅವರ ತಂಡ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸಾಕಷ್ಟು ಶ್ರಮ ಎದ್ದುಕಾಣುತ್ತಿತ್ತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಾತ್ಯಕ್ಷತೆ ಆಯೋಜಿಸಲಾಗಿತ್ತು. ಮಳೆ ಬಂದಾಗ ಇರುವ ಬೆಳೆಗಳ ಪರಿಸ್ಥಿತಿ ಮತ್ತು ಪ್ರಸ್ತುತ ಬರದ ಪರಿಸ್ಥಿತಿಯಲ್ಲಿ ಒಣಗಿದ ಬೆಳೆಗಳ ಪರಿಸ್ಥಿತಿ ಬಗ್ಗೆ ಇ-ಪರದೆಯ ಮೇಲೆ ಫೋಟೋ ಮತ್ತು ಬೆಳೆಗಳಾದ ಸೂರ್ಯಕಾಂತಿ, ಶೇಂಗಾ, ಮೆಕ್ಕೆಜೋಳ, ಹತ್ತಿ ಸೇರಿದಂತೆ ಎಲ್ಲ ಬೆಳೆಗಳ ಬಗ್ಗೆ ಪ್ರಾತ್ಯಕ್ಷತೆ ಮೂಲಕ ವ್ಯತ್ಯಾಸ ತೋರಿಸಿದರು.ತಾಲೂಕಿನ ತೀವ್ರ ಬರ ಪರಿಸ್ಥಿತಿ ನೋಡಿದ ಅಧಿಕಾರಿಗಳಿಗೆ ಇಲ್ಲಿವ ವಾಸ್ತವ ಮನವರಿಕೆಯಾಯಿತು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಟಕೇಶ್, ಜಿಲ್ಲೆಯಲ್ಲಿ 2.27 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 1.57 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ವಿಮೆ ಕಂಪನಿಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಂಡು 47 ಸಾವಿರ ರೈತರಿಗೂ ಬೆಳೆ ವಿಮೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದರು.
ಕೃಷಿ ಅಧಿಕಾರಿಗಳಿಂದ ವಾಸ್ತವ ಚಿತ್ರಣ:
ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಬೆಳೆಗಳ ವಾಸ್ತವತೆ ಮತ್ತು ಮಳೆಯ ಕೊರತೆಯ ಬಗ್ಗೆ ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಜಗಳೂರು ತಾಲೂಕಿನ ಉದ್ದಗಟ್ಟ, ಮೂಡಲಮಾಚಿಕೆರೆ, ಹಿರಮೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ ಮತ್ತು ಮುಸ್ಟೂರು ಗ್ರಾಮದಲ್ಲಿ ಬೆಳೆ ನಷ್ಟದ ಬಗ್ಗೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮತ್ತು ಎಡಿಎ ಮಿಥುನ್ ಕಿಮಾವತ್ ಸಮಗ್ರವಾಗಿ ವಿವರಿಸಿದರು.
ನರೇಗಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಣೆ:
ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆಯಲ್ಲಿ ನರೇಗಾ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ತೋರಿಸಿದರು. ಅಲ್ಲಿಂದ ಸಿದ್ದಿಹಳ್ಳಿ ಗೋವಿಂದಪ್ಪ ಎಂಬ ರೈತನ ಹೊಳದಲ್ಲಿ ಮೆಕ್ಕೆಜೋಳ, ಶೇಂಗಾ ಬೆಳೆ ನಷ್ಟದ ಬಗ್ಗೆ ಅಧಿಕಾರಿಗಳಿಗೆ ಮನವಿರಿಕೆ ಮಾಡಿಕೊಟ್ಟರು. ಮುಷ್ಟೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಂದಕ ಬದು ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.ಬರ ಅಧ್ಯಯನ ತಂಡದ ಅಧಿಕಾರಿಗಳಾದ ಜಲ ಆಯೋಗದ ನಿರ್ದೇಶಕ ವಿ.ಅಶೋಕ್‍ಕುಮಾರ್, ಎಂಎನ್‍ಸಿಎಫ್‍ಸಿ ಉಪ ನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯ ಅಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀನಿವಾಸ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಟಿ.ಎನ್.ಲೋಕೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಎಡಿಎ ಮಿಥುನ್ ಕಿಮಾವತ್, ತೋಟಗಾರಿಕೆ ಇಲಾಖೆ ಡಿಡಿ ರಾಘವೇಂದ್ರ ಪ್ರಸಾದ್, ತಹಶೀಲ್ದಾರ್ ಅರುಣ್ ಕಾರಗಿ, ಇಓ ಕೆ.ಟಿ.ಕರಿಬಸಪ್ಪ
ಕೃಷಿ ಅಧಿಕಾರಿಗಳಾದ ಬಿ.ವಿ.ಶ್ರೀನಿವಾಸುಲು, ಬೀರಪ್ಪ ಕೊರವರ, ಗಿರೀಶ್, ಜೀವಿತಾ ತೋಟಗಾರಿಕೆ ಅಧಿಕಾರಿಗಳಾದ ಪ್ರಸನ್ನಕುಮಾರ್,ಸೇರಿದಂತೆ ಹಿರಿಯ ಅಧಿಕಾರಿಗಳು ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.