ಸುದ್ದಿವಿಜಯ, ಜಗಳೂರು: ಚುನಾವಣಾ ಅಧಿಸೂಚನೆಯ ಪ್ರಕಾರ ನಾಮಪತ್ರ ಹಿಂತೆಗೆದುಕೊಳ್ಳಲು ಏ.24 ಸೋಮವಾರ ಕಡೇ ದಿನವಾಗಿದ್ದು ಜಗಳೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ 12 ಜನರಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಅವರ ಪತ್ನಿ ಇಂದಿರಾ ಎಸ್.ಆರ್. ನಾಮಪತ್ರವನ್ನು ವಾಪಾಸ್ ತೆಗೆದುಕೊಂಡಿದ್ದಾರೆ ಹೀಗಾಗಿ ಕಣದಲ್ಲಿ 11 ಮಂದಿ ಅಭ್ಯರ್ಥಿಗಳು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳಾರು?
ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಜೆಡಿಎಸ್ ಅಭ್ಯರ್ಥಿ ಮಲ್ಲಾಪುರ ದೇವರಾಜ್, ಬಿಜೆಒಇ ಅಭ್ಯರ್ಥಿ ಎಸ್.ವಿ.ರಾಮಚಂದ್ರ, ಸಮಾಜವಾದಿ ಪಕ್ಷದಿಂದ ಜೆ.ಸ್ವಾಮಿ, ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿರುವ ಎಚ್.ಪಿ.ರಾಜೇಶ್, ಪಿ.ಅಜ್ಜಯ್ಯ, ಡಿ.ತಿಪ್ಪೇಸ್ವಾಮಿ, ಓ.ದಿವಾಕರ್, ಎಂ.ನಾಗರಾಜ್, ಜಿ.ಎನ್.ಭೀಮಪ್ಪ, ಕೆ.ಆರ್.ರಾಘವೇಂದ್ರ ಅವರು ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.