ಹಿರೇಮಲ್ಲನಹೊಳೆ ಶಾಲಾ ಮುಖ್ಯ ಶಿಕ್ಷಕ ಬಿ.ಎಂ.ಪಾಲಯ್ಯ ನಿವೃತ್ತಿ, ಭಾವುಕರಾದ ವಿದ್ಯಾರ್ಥಿಗಳು!

Suddivijaya
Suddivijaya August 31, 2023
Updated 2023/08/31 at 12:06 PM

ಸುದ್ದಿವಿಜಯ, ಜಗಳೂರು: ಹಲವು ಸವಾಲಿನ ನಡುವೆ ಸುಮಾರು ಹತ್ತು ವರ್ಷಗಳ ಕಾಲ ಯಾವುದೇ ವೇತನವಿಲ್ಲದೆ ಶಿಕ್ಷಕರ ಸಮನ್ವತೆಯೊಂದಿಗೆ ನಿರಂತರ ಸೇವೆ ಮಾಡಿ ವಯೋನಿವೃತ್ತಿ ಹೊಂದುತ್ತಿರುವ ಮುಖ್ಯ ಶಿಕ್ಷಕರಾದ ಬಿ.ಎಂ.ಪಾಲಯ್ಯ ಅವರ ಸೇವೆ ಸದಾ ಸ್ಮರಿಸುವಂತದ್ದು ಎಂದು ತಾಲ್ಲೂಕು ನಾಯಕರ ಸಂಘದ ನಿರ್ದೆಶಕ, ತಾಪಂ ಮಾಜಿ ಸದಸ್ಯರು ಮರೇನಹಳ್ಳಿ ಬಸವರಾಜ್ ಹೇಳಿದರು.

ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಾಯಕರ ಸಂಘದ ವಿದ್ಯಾಸಂಸ್ಥೆಯ ಶ್ರೀ ತಿರುಮಲ್ಲೇಶ್ವರ ಪ್ರೌಡ ಶಾಲೆ ಮುಖ್ಯ ಶಿಕ್ಷಕರಾದ ಬಿ.ಎಂ.ಪಾಲಯ್ಯ ಅವರು ವಯೋನಿವೃತ್ತಿ ಹಿನ್ನಲೆ ಗುರುವಾರ ಸಂಸ್ಥೆ ಹಾಗು ಶಾಲೆ ಮತ್ತು ಗ್ರಾಮದ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಒಂದು ಶಾಲೆ ಬೆಳೆಯಬೇಕಾದರೆ ಶಿಕ್ಷಕರ ಪರಿಶ್ರಮ ಬಹಳ ಮುಖ್ಯವಾಗುತ್ತದೆ ಈ ನಿಟ್ಟಿನಲ್ಲಿ ಶಾಲೆ ಮತ್ತು ಸಮುದಾಯದ ಮಧ್ಯೆ ಉತ್ತಮ ಭಾಂದವ್ಯ ಹೊಂದಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಇವರೊಂದಿಗೆ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಎಲ್ಲಾ ಶಿಕ್ಷಕರು ಸಂಸ್ಥೆಗೆ ಉತ್ತಮ ಸೇವೆ ನೀಡಿದ್ದಾರೆ. ಎಲ್ಲಾರ ನಿವೃತ್ತಿ ಜೀವನ ಸುಖವಾಗಿರಲಿ ಎಂದರು.ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಿವೃತ್ತಿಯಾದ ಶಿಕ್ಷಕ ಬಿ.ಎಂ.ಪಾಲಯ್ಯ ಅವರನ್ನು ಸನ್ಮಾನಿಸಾಲಯಿತು.ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಿವೃತ್ತಿಯಾದ ಶಿಕ್ಷಕ ಬಿ.ಎಂ.ಪಾಲಯ್ಯ ಅವರನ್ನು ಸನ್ಮಾನಿಸಾಲಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಬಿ.ಎಂ.ಪಾಲಯ್ಯ, 1995 ರಲ್ಲಿ ಈ ಶಾಲೆಗೆ ಶಿಕ್ಷಕನಾಗಿ ವೃತ್ತಿ ಪ್ರಾರಂಬಿಸಿದೆ. ಅಂದು ಕಷ್ಟದ ದಿನಗಳು ಶಿಕ್ಷಕ ವೃತ್ತಿ ತುಂಬ ಸವಾಲಿನ ಕೆಸವಾಗಿತ್ತು. ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ.

ನಮಗೆ ವೇತನವೂ ಇಲ್ಲ. ಮಕ್ಕಳ ಸಂಖ್ಯೆಯೂ ಕಡಿಮೆ ಇತ್ತು. ಸಂಸ್ಥೆಯವರು ಸಹ ಅಷ್ಟೊಂದು ಆರ್ಥಿಕವಾಗಿ ಸದೃಢತೆ ಇರಲಿಲ್ಲ. ಆದ್ದರಿಂದ ಶಾಲೆ ಪದೇ ಪದೇ ಸ್ಥಳಾಂತರ ಗೊಳ್ಳುತ್ತಿತ್ತು. ಮನೆಯಲ್ಲಿ ವೇತನವಿಲ್ಲದ ಕೆಲಸ ಏತಕ್ಕೆ ಎಂದು ಬೇಸರ ಗೊಂಡಿದ್ದರು. ಆದರು ಸಹ ಈ ಹಿಂದೆ ಇದ್ದ ನಮ್ಮ ಸಹೋದ್ಯೋಗಿಗಳು ಸೇರಿ ಶಾಲೆಯನ್ನ ಕಟ್ಟಿ ಬೆಳೆಸಿದೆವು ಎಂದು ಭಾವುಕರಾದರು.

ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್, ಜೆ.ಮಹಾಲಿಂಗಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಶ್ರೀನಿವಾಸ್, ತಾ.ಪಂ.ಲೆಕ್ಕಾದಿಕಾರಿ ತಿಪ್ಪೇಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಜಯಶೀಲರೆಡ್ಡಿ.

ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷರು ಕೆ.ಟಿ.ಬಡಯ್ಯ, ಕಾರ್ಯದರ್ಶಿ ತಿಪ್ಪೇಸ್ವಾಮಿ, ನಿರ್ದೇಶಕರು ತಿಮ್ಮಣ್ಣ, ಗ್ರಾ.ಪಂ.ಆದ್ಯಕ್ಷ ಶ್ರೀನಿವಾಸ್, ಸದಸ್ಯರ ಪತಿ ಶಿವಣ್ಣ, ಎಸ್‍ಡಿಎಂಸಿ ಅಧ್ಯಕ್ಷ ರೇವಣ್ಣ ಸದಸ್ಯರಾದ ಕೃಷ್ಣಪ್ಪ, ಶಿವಣ್ಣ, ವಸಂತ್, ಎಚ್.ಟಿ.ಮಂಜಣ್ಣ, ಮಡಿವಾಳ ತಿಪ್ಪೇಸ್ವಾಮಿ, ಬಸವರಾಜಯ್ಯ,

ತಿಪ್ಪಣ್ಣ ಉಪನ್ಯಾಸಕರಾದ ಸತ್ಯನಾರಾಯಣ ರೆಡ್ಡಿ, ಜಗನ್ನಾಥ್, ಹಳೇ ವಿದ್ಯಾರ್ಥಿ ಸಂಘದ ಬಿ.ಆರ್.ಬಾಣೇಶ್, ಆರ್ ಪ್ರಭು, ಎನ್.ರಾಜಪ್ಪ, ಎನ್.ಸಿ.ವೆಂಕಟೇಶ್, ಎಸ್. ರವಿಕುಮಾರ್ ,ರಾಮಣ್ಣ, ಮಲ್ಲೇಶ್ ಸೇರಿದಂತೆ ಶಾಲಾ ಸಹ ಶಿಕ್ಷಕರು ಸಿಬ್ಬಂದ್ದಿಗಳು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!