ಸುದ್ದಿವಿಜಯ,ಜಗಳೂರು:ತಾಲೂಕಿನ ಯರಲಕಟ್ಟೆ ಗ್ರಾಮದ ಹಳೆಯ ಶಾಲೆಯ ಮುಂದೆ ಇಸ್ಪೀಟು ಆಡುತ್ತಿದ್ದ ಗುಂಪಿನ ಮೇಲೆ ಜಗಳೂರು ಪಟ್ಟಣದ ಪೊಲೀಸರು ಮಂಗಳವಾರ ಸಂಜೆ ದಾಳಿ ಮಾಡ 15 ಜನರನ್ನು ಬಂಧಿಸಿದ್ದಾರೆ.
ಪಿಎಸ್ಐ ಡಿ.ಸಾಗರ್ ನೇತೃತ್ವದಲ್ಲಿ ಪೊಲೀಸರು ಮಾಡಿದಾಗ ಅಂದರ್ ಬಹರ್ ಆಟವಾಡುತ್ತಿದ್ದ 15 ಜನರಿಂದ 4300 ರೂ. ವಶ ಪಡಿಸಿಕೊಂಡಿದ್ದಾರೆ ಹಾಗೂ ಜುಜಾಟಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳನ್ನು ಜಪ್ತ ಮಾಡಿ ಜಗಳೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 285/2022 ಕಲಂ 87 ಕೆಪಿ ಆಕ್ಟ್ ಅಡಿಯಲ್ಲಿ ಆರೋಪಿತರ ವಿರುದ್ಧ ಕ್ರಮ ಕೈಗೊಂಡಿದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.