ಸುದ್ದಿವಿಜಯ, ಜಗಳೂರು: ಶ್ರಾವಣ ಮಾಸದ ನಾಲ್ಕನೇ ವಾರ ಹಿನ್ನೆಲೆ ಕಾಡು ಗೊಲ್ಲ ಸಮುದಾಯದ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಗೆ ಸೋಮವಾರ ತಾಲೂಕಿನ ಕಲ್ಲೇವರಪುರ ಸಮೀಪದ ಸಮಾದಿಯಲ್ಲಿ ವಿಜೃಂಭಣೆಯಿಂದ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ಪ್ರತಿ ವರ್ಷ ಶ್ರಾವಣ ಹಬ್ಬದ ಕೊನೆವಾರದಲ್ಲಿ ಕಾಡುಗೊಲ್ಲರ ಸಮುದಾಯದಿಂದ ವಿಶೇಷ ಪೂಜೆ ಸಲ್ಲಿಸುವುದು ಕಾಡುಗೊಲ್ಲ ಸಮುದಾಯದ ಸಂಪ್ರದಾಯ. ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಪ್ರದೇಶಗಳಿಂದಲೂ ಸಾವಿರಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ನೂರಾರು ವರ್ಷಗಳಿಂದಲೂ ಈ ಸಮಾದಿಗೆ ಪೂಜೆ ಸಲ್ಲಿಸುವ ಆಚರಣೆ ನಡೆದುಕೊಂಡು ಬಂದಿದೆ. ಪ್ರತಿ ಸಾರಿಗಿಂತ ಈ ವರ್ಷ ಜನ ಸಾಗರದಿಂದ ತುಂಬಿತ್ತು. ತಾಲೂಕಿನ ಬೆಣ್ಣೆಹಳ್ಳಿ ರಸ್ತೆ, ಕಲ್ಲೇದೇವರಪುರ ರಸ್ತೆಯುದ್ದಕ್ಕೂ ಜನರಿಂದ ಕಿಕ್ಕಿರಿದಿತ್ತು. ದಾರಿಯಲ್ಲಿ ಕಿ.ಮೀ ದೂರದವರೆಗೂ ಎತ್ತಿನಗಾಡಿ, ಕಾರು, ಟ್ರಾಕ್ಟರ್, ಬೈಕ್ ಸೇರಿದಂತೆ ವಿವಿಧ ವಾಹನಗಳಿಂದಲೂ ಸಾಲುಗಟ್ಟಿ ನಿಂತಿದ್ದವು.
ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಮಾಡುವಾಗ ಈ ಸಮಾಧಿಯನ್ನ ಬೆರೆ ಕಡೆ ಸ್ಥಾಳಾಂತರ ಮಾಡಲು ಪ್ರಯತ್ನ ಪಟ್ಟರು ಅದು ಸಾಧ್ಯವಾಗಲಿಲ್ಲ. ಅಷ್ಟು ಪಾವಾಡ ಪುರುಷ ಎನ್ನತಾರೆ ಊರಿನ ಯಜಮಾನ ಜಿ. ಈರಪ್ಪ.ಅಣಬೂರು ಗ್ರಾಮದ ಒಬ್ಬ ಯುವಕ ಕುರಿಕಾಯಲು ಎಂದು ಕಲ್ಲೇದೇವರಪುರಕ್ಕೆ ಬಂದಾಗ ಅಕಾಲಿಕ ಮರಣ ಹೊಂದಿದ. ಈ ಕಾಟಪ್ಪ ಎಂಬುವ ವ್ಯಕ್ತಿಯನ್ನ ಅಲ್ಲೆ ಸಮಾಧಿ ಮಾಡಲಾಗಿದೆ. ಇಂದು ನಮ್ಮ ಸಮುದಾಯದ ಬೊಮ್ಮಕಾಂಟಲಿಂಗೇಶ್ವರ ಎಂದು ನಾವು ನಮ್ಮ ಆರಾಧೈ ದೈವವಾಗಿ ಪೂಜೆ ಮಾಡುತ್ತಿದ್ದೆವೆ.
ಈ ಪೂಜೆಯನ್ನ ಮಾಡುವುದರಿಂದ ಸಕಲ ಪ್ರಾಣಿ, ಪಕ್ಷಿಗಳಿಗೂ ಒಳಿತಾಗುತ್ತದೆ ಎಂದು ಅಣಬೂರು ಗ್ರಾಮದ ಹಿರಿಯ ಮುಖಂಡ ಹೂವಿನ ಕಾಟಪ್ಪ ತಿಳಿಸಿದರು. ಬೊಮ್ಮಕಾಂಟಲಿಂಗೇಶ್ವರ ಸಮಾದಿಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಪಿ ರಾಜೇಶ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಕಾಡುಗೊಲ್ಲರ ಹಿರಿಯ ಮುಖಂಡ ಗೌಡ್ರು ಅಜ್ಜಪ್ಪ, ಮರಿಗುಡ್ಡಪ್ಪ , ಬಸ್ ವಿರೇಶ್, ಮಹಾಲಿಂಗಪ್ಪ, ಸೊಸೈಟಿ ಮಂಜುನಾಥ, ಲಾಯರ್ ಸಣ್ಣಕಾಟಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಚಿತ್ತಪ್ಪ, ದೊಡ್ಡ ಈರಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ. ಗುಡ್ಡಪ್ಪ ಯುವಕರಾದ ಪ್ರಶಾಂತ್ ಕುಮಾರ್, ಚೇತನ್, ಕಾಟಲಿಂಗಪ್ಪ ಸೇರಿದಂತೆ ಮತ್ತಿತರಿದ್ದರು.