ಸುದ್ದಿವಿಜಯ, ಜಗಳೂರು: ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ಭಾಷಾಭಿಮಾನ ಇದ್ದಾಗ ಮಾತ್ರ ಕನ್ನಡ ನಾಡು, ನುಡಿ ಕಟ್ಟಲು ಸಾಧ್ಯ ಎಂದು ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಧನ್ಯಕುಮಾರ್ ಹೇಳಿದರು.
ತಾಲ್ಲೂಕಿನ ಗುರುಸಿದ್ದಾಪುರ ಸರ್ಕಾರಿ ಪ್ರೌಡ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶಾಲಾ ಕಾಲೇಜ್ ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಕನ್ನಡ ನಾಡು ನುಡಿಗಾಗಿ ಶತಮಾನಗಳ ಹಿಂದೆ ಅನೇಕ ಸಂತರು ಸಾಹಿತಿಗಳು ಕವಿಗಳು ಹೋರಾಟಗಾರರು ಚಳುವಳಿಗಾರ ಕೊಡುಗೆ ಅಪಾರವಾಗಿದೆ ಅವರ ನಿಸ್ವಾರ್ಥ ಸೇವೆಯಿಂದ ಇಂದು ಭಾರತ ದೇಶದಲ್ಲಿ ಕರ್ನಾಟಕ ಕಂಗೊಳಿಸುತ್ತಿದೆ.
ಮುಂದಿನ ಭವಿಷ್ಯದಲ್ಲಿ ಕನ್ನಡ ನಾಡು ನುಡಿಯ ಸೇವೆ ಮಾಡುವ ಜವಾಬ್ದಾರಿ ಮಕ್ಕಳ ಮೇಲಿದೆ ಅದಕ್ಕಾಗಿ ಶಾಲಾ ಅಂಗಳದಲ್ಲಿಯೇ ಕನ್ನಡ ನಾಡು, ನುಡಿ ಮತ್ತು ಭಾಷಾಭಿಮಾನ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್ ಗೆ ತನ್ನದೇ ಇತಿಹಾಸ ಇದೆ ಸಾಹಿತ್ಯ ಕಲೆ ಸಂಸ್ಕೃತಿ ಅನಾವರಣಕ್ಕೆ ಸದಾ ಕಾರ್ಯ ಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ಸಾಹಿತ್ಯ ಬಳಗವು ಶಾಲೆಗಳಲ್ಲಿ ಅಲ್ಲದೆ ಪ್ರತಿ ಹಳ್ಳಿ ಕೇರಿ ಬೀದಿಗಳಲ್ಲಿ ಕನ್ನಡ ಜಾಗೃತಿ ಮಾಡಿಸಬೇಕೆಂದರು.
ಡಿ.ಎಸ್.ಎಸ್. ಸಂಚಾಲಕ ಬಿ.ಸತೀಶ್ ಮಾತನಾಡಿ ಎನ್ನಡ ಎಕ್ಕಡ ಮದ್ಯೆ ಕನ್ನಡ ಭಾಷೆ ಸಿಲುಕಿದೆ ಗ್ರಾಮೀಣ ಭಾಗದಿಂದಲೇ ಭಾಷೆ ಶುದ್ದಿಯಾಗಬೇಕು. ಭಾಷೆ ಬೆಳವಣಿಗೆಗೆ ಯುವಕರು ಮತ್ತು ಪ್ರೋಷಕರು ಕೈಜೋಡಿಸಬೇಕಿದೆ ಸರ್ಕಾರ ಕನ್ನಡ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯ ಶಿಕ್ಷಕ ಮಂಜಪ್ಪ ದಿದ್ದಿಗಿ ಮಾತನಾಡಿ, ಶಾಲಾ ಅಂಗಳದಲ್ಲಿ ಸಾಹಿತ್ಯ ಅಭಿರುಚಿ ಮೂಡಿಸುತ್ತಿರುವುದು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಶಾಲೆಗಳು ಕನ್ನಡ ಭಾಷೆ ನಾಡುನುಡಿ ಸಂರಕ್ಷಿಸುವ ಕೇಂದ್ರವಾಗಬೇಕು ಅದಕ್ಕಾಗಿ ಕನ್ನಡದ ತೇರು ಎಳಿಯಲು ಸಮಾಜ ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಸಾಹಿತಿಗಳು, ಪತ್ರಕರ್ತರು, ಕವಿಗಳು, ಚಿಂತಕರು ಚಿಂತನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೊಕ್ಕೆ ಹೋಬಳಿ ಘಟಕ ಕಸಾಪ ಅಧ್ಯಕ್ಷರು ಶಿಕ್ಷಕರು ಬಸವನಕೋಟೆ ಸಿದ್ದೇಶ್, ಸಾಹಿತಿ ಹಾಗು ಶಿಕ್ಷಕ ಸಂಗಮೇಶ್ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಕರಾದ ಮಂಜುನಾಥ್, ವಿಶ್ವನಾಥ್ ಜಂಬಗಿ, ಮಹಮದ್ ಸಮದ್, ಎಲ್.ಸಿ.ಆಶಾ, ಎಂ.ಎಂ.ಗೌರಮ್ಮ, ಅಶ್ರಪ್ ಹುದ್ದೀನ್, ಚಂದ್ರಕಲಾ, ಚನ್ನಬಸಪ್ಪ ಇದ್ದರು.