ಸುದ್ದಿವಿಜಯ,ಜಗಳೂರು: ರಾಷ್ಟ್ರದ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನ ಮಾಡಿದ ದೇಶಭಕ್ತರನ್ನು ನೆನೆದು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ನ್ಯಾಯಾಂಗ ಇಲಾಖೆಯ ನಿವೃತ್ತ ಮುಖ್ಯ ಲಿಪಿಕ ಅಧಿಕಾರಿ ಜಿ.ಕೆ.ನಾಗರಾಜ್ ರಾವ್ ಹೇಳಿದರು.
ತಾಲೂಕಿನ ಕೊರಟಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶ್ಯಾನುಭೋಗ್ ಕೆ.ವೆಂಕಟರಾವ್ ಸೇವಾ ಟ್ರಸ್ಟ್ ಪ್ರತಿಷ್ಠಾನ ಗುತ್ತಿದುರ್ಗ ಇವರ ವತಿಯಿಂದ ಸರ್ಕಾರಿ ಶಾಲೆಗೆ ರಾಷ್ಟ್ರ ನಾಯಕರ ಭಾವಚಿತ್ರ ಹಾಗೂ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ ದೇಶದ ಭವಿಷ್ಯವನ್ನ ರೂಪಿಸುವಂತಹ ವಿದ್ಯಾರ್ಥಿಗಳಿಗೆ ದೇಶದ ಐಕ್ಯತೆ ಸಂಸ್ಕøತಿಯ ಪರಂಪರೆಯನ್ನ ಪರಿಚಯಿಸಿ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿ ನಮ್ಮೆಲ್ಲರ ಬದುಕಿಗೆ ಕಾರಣರಾದ ಮಹಾನ್ ನಾಯಕರ ಜೀವನ ಚರಿತ್ರೆ ತಿಳಿಯಬೇಕಾಗಿದೆ ಎಂದರು.
ಶಿಕ್ಷಣ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳಿಗೆ ನಮ್ಮ ಸೇವಾ ಟ್ರಸ್ಟ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನ ಮಾಡುತ್ತ ಬಂದಿದ್ದೇವೆ, ಮನುಷ್ಯ ಸ್ವಾರ್ಥಿಯಾಗುವ ಬದಲು ಇರುವಷ್ಟು ದಿನವೇ ನಾವೆಲ್ಲರೂ ಸಮಾಜಕ್ಕೆ ನಮ್ಮ ಕೈಲಾದ ಕೊಡುಗೆ ನೀಡುವ ಮೂಲಕ ಸಾರ್ಥಕ ಜೀವನ ನಡೆಸುವುದೇ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಭಾ ಅಧ್ಯಕ್ಷ ಧನಂಜಯ್ ಶಾಲಾ ಶಿಕ್ಷಕಿಯರಾದ ಕೆ.ಸಿ.ಶಿಲ್ಪ, ಪ್ರೇಮ ಸೇರಿದಂತೆ ಮತ್ತಿತರಿದ್ದರು.