ಸುದ್ದಿವಿಜಯ,ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಗ್ರಾಪಂ ವ್ಯಾಪ್ತಿಯ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕುರಿಗಾಯಿ ಯುವಕರು ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಭವಿಸಿದೆ.
ಮೃತಪಟ್ಟ ಯುವಕರನ್ನು ವಿಜಯನಗರ ಜಿಲ್ಲೆಯ ಆಲೂರು ಗ್ರಾಮದ ನಿಂಗಣ್ಣನ ಪುತ್ರ ರಾಜು (19), ಚಿಕ್ಕಮಲ್ಲನಹೊಳೆ ಗ್ರಾಮದ ಈರಣ್ಣನ ಪುತ್ರ ವಿಜಯ್ (19) ಎಂದು ತಿಳಿದು ಬಂದಿದೆ.
ಘಟನೆವಿವರ: ಮೃತಪಟ್ಟ ಇಬ್ಬರು ಯುವಕರು ಅಕ್ಕತಂಗಿಯ ಮಕ್ಕಳಗಾಗಿದ್ದು ಆಲೂರಿನ ರಾಜು ಮತ್ತು ಚಿಕ್ಕಮಲ್ಲನಹೊಳೆ ವಿಜಯ್ ಬೇಸಿಗೆ ರಜೆ ಇರುವ ಕಾರಣ ಕುರಿಗಳನ್ನು ಮೇಯಿಸಲು ಗೊಲ್ಲರಹಟ್ಟಿ ಕೆರೆಯ ಸುತ್ತಮುತ್ತ ಬಂದಿದ್ದರು.
ಬಿಸಿಲಿನ ತಾಪಕ್ಕೆ ಈಜಾಡಲು ಹೋದ ರಾಜು ಆಳವಾದ ಗುಂಡಿಯಲ್ಲಿ ಮುಳುಗಿದ್ದಾನೆ. ರಾಜು ಮುಳುಗುತ್ತಿದ್ದಂತೆ ಆತನನ್ನು ರಕ್ಷಿಸಲು ಹೋದ ವಿಜಯ್ ಕೂಡಾ ಮುಳುಗಿದ್ದಾನೆ. ಮತ್ತೊಬ್ಬ ಯುವಕ ಇಬ್ಬರನ್ನು ರಕ್ಷಿಸಲು ಲುಂಗಿ, ಬನಿಯನ್ಗಳನ್ನು ಹಗ್ಗವಾಗಿ ಮಾಡಿ ನೀರಿನಲ್ಲಿ ಬಿಟ್ಟರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ತಕ್ಷಣ ನೀರಿನಿಂದ ಹೊರ ಬಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯರು ತಕ್ಷಣ ನೀರಿಗೆ ಇಳಿದು ಮೃತಪಟ್ಟ ಯುವಕರನ್ನು ಹೊರತೆಗೆದಿದ್ದಾರೆ ಜಗಳೂರು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಯುಸಿ ಪರೀಕ್ಷೆ ಬರೆದಿದ್ದ:
ನೀರಿನಲ್ಲಿ ಮುಳುಗಿ ಮೃತಪಟ್ಟ ವಿಜಯನಗರ ಜಿಲ್ಲೆಯ ರಾಜು ಇತ್ತೀಚೆಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದ. ಮನೆಯಲ್ಲಿ ಕುಳಿತುಕೊಳ್ಳುವ ಕುರಿಗಳ್ನು ಮೇಯಿಸಲು ಹೋದಾಗ ಈ ದುರ್ಗಟನೆ ನಡೆದಿದೆ. ಕೆರೆಯ ಸುತ್ತಮುತ್ತಲ ಸಾವಿರಾರು ಜನ ಗ್ರಾಮಸ್ಥರು ಘಟನೆ ನಡೆಯುತ್ತಿದ್ದಂತೆ ಆಗಮಿಸಿ ಕಣ್ಣೀರಿಟ್ಟರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.