Suddivijaya |Kannada News|03-05-2023
ಸುದ್ದಿವಿಜಯ ಜಗಳೂರು.ತಾಲೂಕಿನ ಕೆಳಗೋಟೆ ಗ್ರಾಮದ ಬಿಜೆಪಿ ಮುಖಂಡ ದೇವಿಕೆರೆ ಸುರೇಶ್ ಬುಧವಾರ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಇವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಮೂಲತಃ ಬಿಜೆಪಿ ಪಕ್ಷದ ಮುಖಂಡನಾಗಿ 2008ರಿಂದ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಚಂದ್ರ ಅವರ ಪರವಾಗಿ ನಿಂತು ಕೆಳಗೋಟೆ ಗ್ರಾಮದಲ್ಲಿ ಅತಿ ಮತಗಳನ್ನು ನೀಡುವಲ್ಲಿ ಶ್ರಮಿಸಿದ್ದರು. ಆದರೆ ಬಿಜೆಪಿ ಪಕ್ಷದ ಕಾರ್ಯಚಟುವಟಿಕೆಗಳಿಂದ ಬೇಸತ್ತು. ಪಕ್ಷದಿಂದ ಹೊರ ನಡೆದ ಅವರು ಇಂದು ನಡೆದ ವೀರಶೈವ ಲಿಂಗಾಯಿತರ ಸಭೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ, ಕ್ಷೇತ್ರ ಉಸ್ತುವಾರಿ ಕಲ್ಲೇಶ್‌ರಾಜ್ ಪಟೇಲ್, ಡಿ. ಬಸವರಾಜ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್‌ಗೌಡ, ಗೋಗುದ್ದು ರಾಜಣ್ಣ, ಮಧು ಸೇರಿದಂತೆ ಮತ್ತಿತರಿದ್ದರು.