ಜಗಳೂರು:ಬಂಡವಾಳ ಶಾಹಿಗಳಿಂದ ಮಡಿವಾಳ ಸಮಾಜಕ್ಕೆ ಪೆಟ್ಟು: ಶ್ರೀ ಬಸವಮಾಚಿದೇವ ಸ್ವಾಮೀಜಿ

Suddivijaya
Suddivijaya March 4, 2023
Updated 2023/03/04 at 1:08 PM

ಸುದ್ದಿವಿಜಯ, ಜಗಳೂರು:ಬಂಡವಾಳಶಾಹಿ ಉದ್ಯಮಿಗಳ ಆಕ್ರಮಣದಿಂದ ಮಡಿವಾಳ ಸಮಾಜದ ಮೂಲ ಕುಲಕಸುಬಿಗೆ ಕೊಡಲಿಪೆಟ್ಟು ಬೀಳುತ್ತಿದೆ.

ಸಮಾಜದ ಬಾಂಧವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಪ್ರಜ್ಞಾವಂತರನ್ನಾಗಿ ಮಾಡಿ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾಮಠದ ಶ್ರೀ ಬಸವಮಾಚಿದೇವ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಭರಮಸಮುದ್ರ ಗೇಟ್ ಶನಿವಾರ ಬಳಿ ವಿನಾಯಕ ಲೇಔಟ್ ನಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಹಾಗೂ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಾಚನ ನೀಡಿದರು.

ಮಡಿವಾಳ ಸಮಾಜ ಸ್ವಾಭಿಮಾನಿಗಳಾಗಿ ಸಮಾಜದಲ್ಲಿ ಪ್ರಾಮಾಣಿಕ ಕಾಯಕ ಸೇವೆಗೈಯುತ್ತಿದ್ದಾರೆ. ತಂತ್ರ ಜ್ಞಾನದಿಂದ ವಾಷಿಂಗ್ ಮಿಷನ್ ಬಳಕೆಯಿಂದ ಮೂಲ ಕಸುಬು ಕ್ರಮೇಣ ನಶಿಸುತ್ತಿದೆ.

ಸಮಾಜದವರು ತಂತ್ರಜ್ಞಾನ ಅಳವಡಿಕೆಗೆ ಮುಂದಾಗಬೇಕು.ತಮ್ಮ ಕಾಯಕದ ಜೊತೆ ಗಳಿಕೆ ಮತ್ತು ಬಳಕೆಗಳ ಪ್ರಾಮಾಣಿಕವಾಗಿರಬೇಕು.

ದೇಶದಲ್ಲಿ ತಳಸಮುದಾಯದ ಕಾಯಕಗಳು ಇಲ್ಲದಿದ್ದರೆ ನರಕಮಯ ವಾತಾವರಣ ಸೃಷ್ಠಿಯಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಗಳೂರು ಪಟ್ಟಣದ ಭರಮಸಮುದ್ರ ಗೇಟ್‍ನಲ್ಲಿ ಮಡಿವಾಳ ಮಾಚೀದೇವ ಜಯಂತ್ಯುತ್ಸವ ನಡೆಯಿತು.
ಜಗಳೂರು ಪಟ್ಟಣದ ಭರಮಸಮುದ್ರ ಗೇಟ್‍ನಲ್ಲಿ ಮಡಿವಾಳ ಮಾಚೀದೇವ ಜಯಂತ್ಯುತ್ಸವ ನಡೆಯಿತು.

ತಳಸಮುದಾಯಗಳ ದಾರ್ಶನಿಕರ ಜಯಂತಿಗಳಲ್ಲಿ ಪಕ್ಷಾತೀತವಾಗಿ ಭಾಗವಹಿಸುವ ಔದಾರ್ಯತೆ ಮೈಗೂಡಿಸಿಕೊಂಡಿದ್ದು.

ಚುನಾವಣೆಯಲ್ಲಿ ಮಾತ್ರ ರಾಜಕಾರಣ ಉಳಿದಂತೆ ರಾಜಕಾರಣಮಾಡದೆ ಇರುವ ಸುಸಂಸ್ಕøತ ರಾಜಕಾರಣಿಗಳ ಸ್ಪಂದನೆಯಿಂದ ನಮಗೆ ಮಡಿವಾಳ ಸಮಾಜದ ಶಾಸಕರಿಲ್ಲ ಎಂಬ ಭಾವನೆಯೇ ಬರುವದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಮಡಿವಾಳ ಸಮುದಾಯಕ್ಕೆ ನೀಡಿದ ಭರವಸೆಯಂತೆ ನಿವೇಶನ ಒದಗಿಸಿರುವೆ. ಹೆದ್ದಾರಿ ಪಕ್ಕದಲ್ಲಿನ ಸುಸಜ್ಜಿತ ಸಮುದಾಯ ಭವನ ಜಿಲ್ಲೆಗೆ ಮಾದರಿಯಾಗಲಿದೆ. 50 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ಜಗಳೂರು ಪಟ್ಟಣದ ಭರಮಸಮುದ್ರ ಗೇಟ್‍ನಲ್ಲಿ ಮಡಿವಾಳ ಮಾಚೀದೇವ ಜಯಂತ್ಯುತ್ಸವ ನಡೆಯಿತು.
ಜಗಳೂರು ಪಟ್ಟಣದ ಭರಮಸಮುದ್ರ ಗೇಟ್‍ನಲ್ಲಿ ಮಡಿವಾಳ ಮಾಚೀದೇವ ಜಯಂತ್ಯುತ್ಸವ ನಡೆಯಿತು.

ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಜು ಎಂ ತಲ್ಲೂರು ಮಾತನಾಡಿ,ರಾಜ್ಯದಲ್ಲಿ ಚಿಕ್ಕ ಸಮುದಾಯವನ್ನು ಗುರುತಿಸಿ ದೇವರಾಜ್ ಅರಸ್ ಅಭಿವೃದ್ದಿ ನಿಗಮದಿಂದ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮ ಪ್ರತ್ಯೇಕವಾಗಿ 4 ವರ್ಷ ಕಳೆದರೂ ಸಮುದಾಯದ ಬಡಫಲಾನುಭವಿಗಳಿಗೆ ಸೌಲಭ್ಯಗಳು ಮಾತ್ರ ಕೈಗೆಟುಕತ್ತಿರಲಿಲ್ಲ.

ಕಳೆದ ಮೂರು ತಿಂಗಳ ಹಿಂದೆ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆಯ ನಂತರ ಶೈಕ್ಷಣಿಕ, ನೇರ, ಸ್ವಯಂ ಉದ್ಯೋಗ, ಗಂಗಾಕಲ್ಯಾಣ ಯೋಜನೆಗಳಡಿ ಸಾಲ ಸೌಲಭ್ಯಗಳಿಗೆ ಅವಕಾಶವಿದ್ದು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ನನ್ನ ಆಡಳಿತಾವಧಿಯಲ್ಲಿನ ಮಡಿವಾಳ ಸಮುದಾಯದ ಭವನದ ಬೇಡಿಕೆಗೆ ಇದೀಗ ನಿವೇಶನವನ್ನು ಕಲ್ಪಿಸಿರುವ ಭರವಸೆ ನೀಡಿರುವ ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಅಭಿನಂದನೆಗಳು.

ಸ್ವಾಭಿಮಾನದಲ್ಲಿ ಕಾಯಕ ಮಾಡುತ್ತಿರುವ ಮಡಿವಾಳ ಸಮಾಜ ಮುಖ್ಯವಾಹಿನಿಗೆ ಬರಬೇಕಿದೆ.ತಮ್ಮ ಸಮಾಜದಿಂದ ಮುಂದಿನ ಚುನಾವಣೆಯಲ್ಲಿ ಶಾಸಕರು ಆಯ್ಕೆಯಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆಪಿಸಿಸಿ ಎಸ್ ಟಿ ಘಟಕದ ಕೆಪಿ ಪಾಲಯ್ಯ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ತಿಮ್ಮಕ್ಕರಾಮಪ್ಪ, ಸದಸ್ಯರಾದ ರತ್ನಮ್ಮ, ನಾಗರಾಜ್, ಜೆ.ಟಿ. ಬಸವರಾಜ್,ತಿಪ್ಪೇಸ್ವಾಮಿ,ಲಕ್ಷ್ಮೀ, ಪ.ಪಂ ಸದಸ್ಯೆ ಮಂಜಮ್ಮ, ಮಡಿವಾಳ ಮಾಚಿದೇವ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ರೇವಣಸಿದ್ದಪ್ಪ,

ಜಿಲ್ಲೆಯ ವಿವಿಧ ತಾಲೂಕುಗಳ ಸಮಾಜದ ಅಧ್ಯಕ್ಷರಾದ ಎಂ.ಎನ್. ಬಸವರಾಜಪ್ಪ, ಮಹಾಂತೇಶ್, ರವಿದೊಡೇರಿ, ಭೀಮಣ್ಣ, ರಮೇಶ್, ನಾಗರಾಜ್, ಹರೀಶ್ ಸೇರಿದಂತೆ ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!