ಸುದ್ದಿವಿಜಯ,ಜಗಳೂರು: ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದ ಹಿಂದೆ ಮಟ್ಕ ಜೂಜಾಡಿಸುತ್ತಿದ್ದ ಚಳ್ಳಕೆರೆ ತಾಲೂಕಿನ ತೊರೆಕೊಲಮ್ಮನಹಳ್ಳಿ ಗ್ರಾಮದ ತಾತಣ್ಣ ಎನ್ನುವ ವ್ಯಕ್ತಿಯನ್ನು ಜಗಳೂರು ಪಟ್ಟಣದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪಟ್ಟಣದಲ್ಲಿ ಇತ್ತೀಚೆಗೆ ಮಟ್ಕ ದಂಧೆ ಹೆಚ್ಚಾಗುತ್ತಿದ್ದು ಕಡಿವಾಣಹಾಕಲು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮಫ್ತಿಯಲ್ಲಿ ತೆರಳಿದ್ದಾಗ ತಾತಣ್ಣ ಎಂಬ ವ್ಯಕ್ತಿ ಪ್ರವಾಸಿ ಮಂದಿರ ರಸ್ತೆಯಲ್ಲಿ ಮಟ್ಕ ಜೂಜು ಆಡಿಸುತ್ತಿದ್ದು ಪೊಲೀಸರ ದಾಳಿವೇಳೆ ಸಿಕ್ಕಿ ಬಿದ್ದಿದ್ದಾನೆ.

ಆತನಿಂದ 12 ಸಾವಿರ ಹಣ, ಒಂದು ಬೈಕ್ ಮತ್ತು ಮೊಬೈಲ್ ಫೋನ್ ಪೊಲೀಸ್ ಇನ್‍ಸ್ಪೆಕ್ಟರ್ ಮಹೇಶ್ ಹೊಸಪೇಟ ಜಪ್ತಿಮಾಡಿ ಬಂಧಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಮುಖ್ಯಪೇದೆ ಆನಂದ್, ಪಂಪಾನಾಯ್ಕ್, ಪ್ರೊಬೇಷನರಿ ಪಿಎಸ್‍ಐ ಶಿವಾನಂದ್, ಎಎಸ್‍ಐ ಚಂದ್ರಶೇಖರ್ ಹಾಗೂ ನಾಗರಾಜ್ ಉಪಸ್ಥಿತರಿದ್ದರು.