ಸುದ್ದಿವಿಜಯ, ಜಗಳೂರು: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ನಾಲ್ಕನೇ ಬಾರಿ ಚುನಾವಣಾ ಕಣಕ್ಕೆ ಇಳಿದಿರುವ ಅವರು ತಮ್ಮ ಆಸ್ತಿ ಎಷ್ಟು ಎಂಬುದರ ಬಗ್ಗೆ ಚುನಾವಣಾಧಿಕಾರಿಗಳಿಗೆ ದಾಖಲೆಯ ಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಕೈಯಲ್ಲಿರುವ ನಗದು 8,35,650, ಡಿಸಿಸಿ ಬ್ಯಾಂಕ್ನಲ್ಲಿ 23,874, ಕೆನರಾ ಬ್ಯಾಂಕ್ನಲ್ಲಿ 1,53,700, ಡಿಎಚ್ಯುಸಿ ಮುಖ್ಯ ಶಾಖೆ, ಉಳಿತಾಯ ಖಾತೆಯಲ್ಲಿ 16,879 ರೂ, ದಾವಣಗೆರೆಯ ಜೆಪಿ ಎಕ್ಸ್ಟೆಂಷನ್ ಶಾಖೆಯಲ್ಲಿ 15,74,013 ರೂ.
ದಾವಣಗೆರೆ ಬಾಪೂಜಿ ಕೋ ಆಪರೇಟಿವ್ ಬ್ಯಾಂಕ್ನಲ್ಲಿ31,713, ಬೆಂಗಳೂರಿನ ವಿಧಾನಸೌಧ ಎಸ್ಬಿಐ ಶಾಖೆಯ ಅಕೌಂಟ್ನಲ್ಲಿ 1,12,65,999, ಶ್ರೀ ಮುರುಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 10,480, ಜಗಳೂರಿನ ಕೆನರಾ ಬ್ಯಾಂಕ್ನಲ್ಲಿ 33949 ರೂ, ಎಲ್ಐಸಿ ಬಾಂಡ್ ಮೊತ್ತ 30 ಸಾವಿರ ಸೇರಿದಂತೆ ವಿವಿಧ ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆಯಲ್ಲಿ ಹಣ ಇರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ ಪತ್ನಿ ಇಂದಿರಾ ಅವರಿಂದ 78,23,500 ರೂ ಸಾಲಪಡೆದಿದ್ದಾರೆ. ಜೊತೆಗೆ ಕೊಟ್ರೇಶ್ ಮತ್ತು ನಿರ್ಮಲಾ ಅವರಿಂದ ಮೂರು ಲಕ್ಷ ರೂಗಳನ್ನು ಸಾಲ ಪಡೆದಿದ್ದಾರೆ. ಟೊಯೊಟಾ ಫಾರ್ಚಿನರ್ ಕಾರಿನ ಮೌಲ್ಯ 42,82,000 ರೂ ಎಂದು ನಮೂದಿಸಿದಿದ್ದಾರೆ.
ಚಿನ್ನ-ಬೆಳ್ಳಿ ಎಷ್ಟು?
ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಬಳಿ 82.50 ಲಕ್ಷ ರೂ ಮೌಲ್ಯದ 2600 ಗ್ರಾಂ ಚಿನ್ನವಿದೆ. 19.67 ಕೆಜಿ ಬೆಳ್ಳಿ ಸಾಮಾನುಗಳಿವೆ ಅವುಗಳ ಒಟ್ಟು ಮೌಲ್ಯ 4,02,70,999 ಕೋಟಿ ರೂಗಳು.
ಜಮೀನಿನ ವಿವರ:
ಕಡಬಗೆರೆ, ಅರಸಿಕೆರೆ, ದೊಡ್ಡಬಾತಿಯಲ್ಲಿ 26 ಎಕರೆಯಷ್ಟು ಜಮೀನು ಹೊಂದಿದ್ದಾರೆ. ಚರಾಸ್ತಿ ಮೌಲ್ಯ 4,02,70,999, ಸ್ವಯಾರ್ಜೀತವಾದ ಸ್ಥಿರಾಸ್ತಿಯ ಖರೀದಿ ಬೆಲೆ, 1,63,82,690, ವಿವಿಧ ಕಡೆ ನಿವೇಶನಗಳು ಇವೆ ಎಂದು ಮಾಹಿತಿ ನೀಡಿದ್ದಾರೆ.
ದಾವಣಗೆರೆಯ ಕೆ.ಬಿ.ಬಡಾವಣೆಯಲ್ಲಿ (40*44)ನಿವೇಶನ, ಬೆಂಗಳೂರಿನ ಆರ್ಎಂವಿ 2ನೇ ಹಂತದಲ್ಲಿ ಬಿಡಿಎ(80*50) ನಿವೇಶನ ಸೇರಿದಂತೆ ಒಟ್ಟು ಅವರ ಈಗಿನ ಆಸ್ತಿಯ ಮಾರುಕಟ್ಟೆಯ ಮೌಲ್ಯ 9,33,77,000 ರೂ ಎಂದು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಜೊತೆಗೆ ಅವರ ಪತ್ನಿ ಇಂದಿರಾ ರಾಮಚಂದ್ರ ಅವರ ಹೆಸರಿನಲ್ಲಿ ಜಮೀನು, ವಿವಿಧ ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆಗಳಲ್ಲಿ ಇಂತಿಷ್ಟು ಹಣವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.