ಸುದ್ದಿವಿಜಯ,ಜಗಳೂರು: ಸಮಾಜದ ಸೇವೆ ಮಾಡಲು ಯಾವುದೇ ಹುದ್ದೆ ಬೇಕಿಲ್ಲ ಒಳ್ಳೆಯ ಮನಸ್ಸು ಒಂದಿದ್ದರೆ ಸಾಕು ಎಂದು ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಬಡವರಿಗೆ ಆಹಾರ ಕಿಟ್ ಒದಗಿಸುವ ಮೂಲಕ ಹುಟ್ಟು ಹಬ್ಬವನ್ನ ಅರ್ಥಪೂರ್ಣ ವಾಗಿ ಆಚರಿಸಲಿರುವ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧೀ ಪಂಚಾಯತ್ ರಾಜ್ ಸಂಘಟನೆ ತಾಲ್ಲೂಕು ಅಧ್ಯಕ್ಷ ಮರೇನಹಳ್ಳಿ ಎಂ.ಎಸ್.ನಜೀರ್ ಅಹಮದ್ ಅವರಿಗೆ ಶುಭಕೋರಿ ಮಾತನಾಡಿದರು.
ಎಲ್ಲ ವರ್ಗದ ಜನರನ್ನು ಪ್ರೀತಿಸುವ ವ್ಯಕ್ತಿ. ದೇವಸ್ಥಾನ, ಮಸೀದಿ, ಚರ್ಚು ಎನ್ನುವ ಭೇದ ಮಾಡದ ನಜೀರ್ ಅಹಮದ್ ಅವರು ದೀನ, ದಲಿತ, ಬಡವರಿಗೆ ಆಸರೆಯಾಗುತ್ತಾರೆ. ಸಾಧನೆ ನಿರಂತರವಾಗಿರಲಿ ಅವರ ಎಲ್ಲಾ ಒಳ್ಳೆಯ ಕಾರ್ಯಕ್ಕೆ ನಮ್ಮ ಬೆಂಬಲವಿದೆ. ನೊಂದವರ ನೆರವಿಗೆ ಬರುವುದೇ ನಮ್ಮೆಲ್ಲರ ಉದ್ದೇಶ ಎಂದರು.
ಕೆಪಿಸಿಸಿ ಸದಸ್ಯರಾದ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಇತ್ತೀಚಿನ ಆಧುನಿಕ ದಿನಗಳಲ್ಲಿ ಹುಟ್ಟುಹಬ್ಬವನ್ನ ರಾತ್ರೀ ವೇಳೆ ಆಚರಿಸಿ ವೈಯುಕ್ತಿಕ ಸಂತೋಷ ಪಡುವ ದಿನಗಳಲ್ಲಿ ಸಮಾಜಕ್ಕೆ ಒಳ್ಳೆ ಕಾರ್ಯ ಮಾಡುವಂತಹ ಇಂತ ಆದರ್ಶ ವ್ಯಕ್ತಿಗಳನ್ನ ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ ಸುಮಾರು ವರ್ಷಗಳಿಂದ ಹಲವು ಸಮಾಜ ಸೇವೆ ಮಾಡುತ್ತಿರುವ ನಜೀರ್ ಅಗಮದ್ ಅವರಿಗೆ ಭವಿಷ್ಯದ ಜೀವನ ಉತ್ತಮ ವಾಗಿರಲಿ ಎಂದು ಹಾರೈಸಿದರು.
ನಜೀರ್ ಅಹಮದ್ ಮಾತನಾಡಿ, ತಮ್ಮ 47 ನೇ ಹುಟ್ಟುಹಬ್ಬದ ಪ್ರಯುಕ್ತ ಜೋಗಪ್ಪನಗುಡಿ ನಿರಾಶ್ರೀತರಿಗೆ ಸಿದ್ದ ಆಹಾರ ಪದಾರ್ಥ ವಿತರಿಸಿದ್ದೇನೆ. ಹುಟ್ಟುಹಬ್ಬದ ಸಂಭ್ರಮ ಕೇವಲ ನಮಗಷ್ಠೆ ಸಂತೋಷ ಪಡುವ ಸಂಭ್ರಮವಾಗಬಾರದು.
ನೊಂದವರ ಹಸಿದವರಿಗೆ ನೆರವಾಗಬೇಕು. ಈ ವರ್ಷದ ಬಡವರ ಜೊತೆ ಸೇರಿ ಜನ್ಮದಿನ ಆಚರಿಸುತ್ತಿರುವುದು ನನಗೆ ಸಂತೋಷ ಉಂಟುಮಾಡಿದೆ ಎಂದರು.
ಈ ಸಂದರ್ಭಗಳಲ್ಲಿ ಕಾಂಗ್ರೆಸ್ ಮುಖಂಡರಾದ ಸುದೀರ್ ರೆಡ್ಡಿ , ಜಗಳೂರಯ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ವೆಂಕಟೇಶ್, ತಮಲೇಹಳ್ಳಿ ಗುರುಮೂರ್ತಿ ಮಹಬೂಬ್ ಆಲಿ, ಕೋಳಿ ದುರುಗೇಶ್, ಮುಸ್ಟೂರು ಪ್ರಕಾಶ್, ದಾನಿ ಸಾಬ್,
ಪರುಶುರಾಮ್ ಎಚ್.ಎನ್. ತಿಪ್ಪೇಸ್ವಾಮಿ, ಮರೇನಹಳ್ಳಿ ಮಾಜಿ ಗ್ರಾ.ಪಂ.ಸದಸ್ಯ ನಾಗರಾಜ್, ಗೊಗುದ್ದು ಅನ್ವರ್ ಆಲಿ, ಪ್ರಹ್ಲಾದ, ಧನ್ಯಕುಮಾರ್, ಲೋಕೇಶ್ ಎಂ.ಐ.ಹೊಳೆ, ಸೋಮನಗೌಡ್ರು ಸೇರಿದಂತೆ ಅನೇಕರು ನಜೀರ್ ಅಹಮದ್ ಅವರಿಗೆ ಶುಭಕೋರಿದರು.