ಸುದ್ದಿವಿಜಯ, ಜಗಳೂರು: ಮೇ.10 ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಹಿನ್ನೆಲೆ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶತಾಯ ಗೆಲ್ಲಲೇ ಬೇಕು ಎಂದು ಪಟ್ಟು ಹಿಡಿದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ದೇವೇಂದ್ರಪ್ಪ, ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಮತ್ತು ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಸಮ ಬಲದ ಹೋರಾಟ ಮಾಡುತ್ತಿದ್ದಾರೆ.
ಮನೆ ಮನೆ ಪ್ರಚಾರ, ಬೀದಿ ಬೀದಿ ಪ್ರಚಾರ, ಗ್ರಾಪಂ ಮಟ್ಟದಲ್ಲಿ ಪ್ರಚಾರ, ಹೋಬಳಿ ಮಟ್ಟದಲ್ಲಿ ಪ್ರಚಾರಗಳಲ್ಲಿ ಬ್ಯೂಸಿಯಾಗಿರುವ ಅಭ್ಯರ್ಥಿಗಳಿಗೆ ಜಂಪಿಂಗ್ ಕಾರ್ಯಕರ್ತರ ಸೇರ್ಪಡೆಯ ನಾಗಾಲೋಟ ಕಡಿಮೆಯಾಗಿಲ್ಲ.
ಇಂದು ಈ ಪಕ್ಷದಲ್ಲಿ ಗುರುತಿಸಿಕೊಂಡವರು ನಾಳೆ ಇನ್ನೊಂದು ಪಕ್ಷದ ಅಭ್ಯರ್ಥಿ ಜೈ ಎನ್ನುವ ಕಾರ್ಯಕರ್ತರ ಮಧ್ಯೆ ಚುನಾವಣೆ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಪ್ರಾಣ ಸಂಕಟ. ಖರ್ಚು ವೆಚ್ಚ ಎಲ್ಲವನ್ನೂ ನೋಡಿಕೊಂಡರೂ ಸಣ್ಣ ವ್ಯತ್ಯಾಸವಾದರೂ ಇದ್ದಕ್ಕಿದ್ದಂತೆ ಅಪಪ್ರಚಾರಗಳನ್ನು ಸೃಷ್ಟಿಸಿಕೊಂಡು ಇನ್ನೊಂದು ಪಕ್ಷದ ಅಭ್ಯರ್ಥಿಗೆ ಖೋ ಕೊಡುವ ಕಾರ್ಯಕರ್ತರ ಮಧ್ಯೆ ಚುನಾವಣೆಯಲ್ಲಿ ಗೆಲ್ಲುವುದು ಮೂರು ಅಭ್ಯರ್ಥಿಗಳಿಗೆ ತಲೆ ನೋವಾಗಿದೆ.
ಅಭಿವೃದ್ಧಿ ನೆಪಪಾತ್ರ: ಶಾಸಕನಾಗಿದ್ದ ಎಸ್.ವಿ.ರಾಮಚಂದ್ರ ಅವರು 3500 ಕೋಟಿ ರೂಗೂ ಅಧಿಕ ಹಣ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ ಎಂದು ಪ್ರಚಾರದ ವೇಳೆ ತಮ್ಮ ಫ್ಲೋ ಕಂಟೆಂಟ್ ಬಿತ್ತಿದರೂ ಕಾರ್ಯಕರ್ತರು, ಮತದಾರರಿಗೆ ಅದು ನಗಣ್ಯ. ಅಭಿವೃದ್ಧಿ ಚುನಾವಣೆಯ ಒಂದು ಭಾಗ ಮಾತ್ರ. ಆದರೆ ಹಿಂಬಾಲಕರಿಗೆ ಅದು ಅನಾವಶ್ಯಕ. ಕಟ್ಟಡಯೇದಾಗಿ ಬೇಕಾಗಿರುವುದು ಹಣ, ಜಾತಿಲೆಕ್ಕಾಚಾರ ಮಾತ್ರವೇ ವಿನಃ ಮತ್ತೇನು ಇಲ್ಲ.
ಕಾಂಗ್ರೆಸ್ ಸೇರ್ಪಡೆಯಾದ್ರು:
ಇಂದು ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಸಮ್ಮುಖದಲ್ಲಿ ಕೆಳಗೋಟೆ ಗ್ರಾಮದ ಬಿಜೆಪಿ ಮುಖಂಡ ದೇವಿಕೆರೆ ಸುರೇಶ್ ಕಾಂಗ್ರೆಸ್ ಸೇರ್ಪಡೆಯಾದರು. ಅಷ್ಟೇ ಅಲ್ಲ ಅರಸಿಕೆರೆ ಭಾಗದ ಅಂದಾಜು 300ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಿ ಬಿಜೆಪಿಗೆ ಗುಡ್ಬೈ ಹೇಳಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ಅನೆ ಬಲ ಬಂದಂತಾಗಿದೆ. ಇನ್ನು ಕ್ಯಾಸೇನಹಳ್ಳಿ ಗ್ರಾಪಂ ಅಧ್ಯಕ್ಷ ಟಿ.ನಾಗರಾಜ್ ಸೇರಿದಂತೆ ಅನೇಕ ಮುಖಂಡರು ಪಾಲಯ್ಯ ನೇತೃತ್ವದಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು.
ಕಾಂಗ್ರೆಸ್ನಲ್ಲಿದ್ದವರು ಬಿಜೆಪಿಗೆ:
ಜಮ್ಮಾಪುರ ಗ್ರಾಮದ 30ಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಲ್ಲಿ ಗುರುತಿಸಿಕೊಂಡವರು ಮೂಲ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿಗೆ ಸೇರ್ಪಡೆಯಾದರು. ಬಿದರಕೆರೆ ಗ್ರಾಮದ ತಾಪಂ ಮಾಜಿ ಸದಸ್ಯ ಯುವ ಮುಖಂಡ ಬಸವರಾಜ್ ಎಸ್ವಿಆರ್ ಸಮ್ಮುಖದಲ್ಲಿ ಉಚ್ಚಂಗಿದುರ್ಗದಲ್ಲಿ ಬಿಜೆಪಿ ಸೇರ್ಪಡೆಯಾದರು.
ಹಣಕೊಟ್ಟು ಗೆದ್ದು ಬನ್ನಿ ಎಂದು ಆಶೀರ್ವಾದ:
ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಗೆಲುವಿಗಾಗಿ ಸ್ವಾಭಿಮಾನದ ಪಣಕ್ಕಿಟ್ಟು ಮತಯಾಚನೆ ಮಾಡುತ್ತಿರುವ ಅವರಿಗೆ ತಿಮ್ಮಲಾಪುರ ಗ್ರಾಮದ ಶಾರದಮ್ಮ 25000, ಪಲ್ಲಾಗಟ್ಟೆ ಗ್ರಾಮದ ಸುರೇಶ್ 50 ಸಾವಿರ ಧನಸಹಾಯ ಮಾಡಿದರು. ಗುರುಸಿದ್ದಾಪುರ ಗ್ರಾಮದಲ್ಲಿ ಮತಯಾಚನೆ ವೇಳೆ ಚನ್ನಬಸಮ್ಮ ಎಂಬುವರು 2000 ರೂ ಹಣ ನೀಡಿ ಆಶೀರ್ವದಿಸಿದ್ದು ವಿಶೇಷವಾಗಿತ್ತು.