ಸುದ್ದಿವಿಜಯ, ಜಗಳೂರು: ಹಿರಿಯ ಪೊಲೀಸ್ ಅಧಿಕಾರಿಗಳು ಅಂದರೆ ಅಧಿಕಾರ ಚಲಾಯಿಸುವ ಬಾಸ್ ಅಲ್ಲ. ಅವರು ಸಹೋದ್ಯೋಗಿ ಸ್ನೇಹಿ ಎಂಬುದನ್ನು ತೋರಿಸಿಕೊಡುವಲ್ಲಿ ಜಗಳೂರು ಠಾಣೆಯ CPI ಎಂ.ಶ್ರೀನಿವಾಸ್ ರಾವ್ ತೋರಿಸಿಕೊಟ್ಟಿದ್ದಾರೆ.
ಹೌದು, ಜಗಳೂರು ಪಟ್ಟಣದ ಪೊಲೀಸ್ ಠಾಣೆ ಸಹೋದ್ಯೋಗಿ ಸ್ನೇಹಿ ಎಂದರೆ ತಪ್ಪಾಗಲಿಕ್ಕಿಲ್ಲ. ಅದಕ್ಕೆ ಸಾಕ್ಷಿ ಎಂದರೆ ತಮ್ಮ ಅಂಡರ್‍ನಲ್ಲಿ ಬರುವ ಎಎಸ್‍ಐ ವೆಂಕಟೇಶ್ ಅವರ ಹುಟ್ಟುಹಬ್ಬವನ್ನು ಎಲ್ಲ ಸಹೋದ್ಯೋಗಿ ಮಿತ್ರರೊಂದಿಗೆ CPI ಎಂ.ಶ್ರೀನಿವಾಸ್ ರಾವ್ ಅವರು ಠಾಣೆಯಲ್ಲೇ ಸೋಮವಾರ ಕೇಕ್ ಕತ್ತರಿಸಿ, ಹೂವಿನ ಹಾಕಿ, ಶಾಲು ಹಾಕಿ ಅವರಿಗೆ ಅಭಿನಂದನೆ ಸಲ್ಲಿಸಿದ ಕ್ಷಣಕ್ಕೆ ಸಾಕ್ಷಿಯಾದರು.
ಸಂಭ್ರಮ ಸಡಗರದೊಂದಿಗೆ ಎಲ್ಲ ಪೊಲೀಸ್ ಸ್ನೇಹಿತರು ಕೇಕ್ ತಿನ್ನಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಪೊಲೀಸರು ಎಂದರೆ ಸಮಾಜ, ಜನ ಸೇವೆ, ಬಂದೋಬಸ್ತ್, ರಾಜಕಾರಣಿಗಳ ಭದ್ರತೆಯಲ್ಲೇ ತಮ್ಮ ಕರ್ತವ್ಯವನ್ನು ಮೀಸಲಿಡುತ್ತಾರೆ. ಅವರಿಗೆ ತಮ್ಮ ಖಾಸಗಿ ಜೀವನದ ಕಡೆ ಸಂತಸದ ಕ್ಷಣಕ್ಕೆ ಸಮಯ ಕೊಡುವುದು ಕಡಿಮೆ. ತಮ್ಮ ಎಲ್ಲ ಸಂತೋಷಗಳನ್ನು ಬದಿಗಿಡುತ್ತಾರೆ. ಅದೇ ರೀತಿ ವೆಂಕಟೇಶ್ ಅವರು ತಮ್ಮ ಜನ್ಮದಿನವಿದ್ದರೂ ಸಹ ಅದನ್ನು ಬದಿಗಿಟ್ಟು ಇಡೀ ದಿನ ಕರ್ತವ್ಯದಲ್ಲಿ ನಿರತರಾಗಿದ್ದರು.
ಹೀಗಾಗಿ ಅವರನ್ನು ಠಾಣೆಯಲ್ಲೇ ಕುಟುಂಬದವರ ರೀತಿ ಪ್ರೀತಿ ತೋರಿಸಿ ಕೇಕ್ ಕತ್ತರಿಸಿ ಸಂತೋಷ ಪಡಿಸಿದವರುCPI ಶ್ರೀನಿವಾಸ್ ರಾವ್ ಮತ್ತು ಪಿಎಸ್‍ಐ ಡಿ.ಸಾಗರ್, ಪಿಎಸ್‍ಐ ಗೀತಮ್ಮ ಸೇರಿ ಎಲ್ಲ ಪೊಲೀಸ್ ಸಹೋದ್ಯೋಗಿಗಳು ಸಂಭ್ರಮಿಸಿದರು.
ಈ ವೇಳೆ ಬಸವರಾಜ್, ಮಾರುತಿ, ನಾಗಭೂಷಣ್, ಹನುಮಂತ ಕವಾಡಿ, ಆನಂದ್ ಸೇರಿದಂತೆ ಎಲ್ಲರೂ ಶುಭಾಶಯ ಕೋರಿ ಸಂಭ್ರಮಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಎಂದರೆ ಕೇವಲ ಅಧಿಕಾರ ಚಲಾಯಿಸುವುದಲ್ಲ. ಠಾಣೆಯಲ್ಲಿ ಸ್ನೇಹಮಯ ವಾತಾವರಣ ಸೃಷ್ಟಿಮಾಡಿ ಪ್ರೀತಿಯಿಂದ ಗೌರವಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. CPI ಶ್ರೀನಿವಾಸ್ ರಾವ್ ಅವರ ಈ ಸೌಹಾರ್ಧತೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.