ಸುದ್ದಿವಿಜಯ, ಜಗಳೂರು: ಮಣಿಪಾಲ್ ಆರೋಗ್ಯ ಕಾರ್ಡ್ ಮಾಡಿಸಲು ನ.30ಕ್ಕೆ ಕೊನೆಯದಿನವಾಗಿದ್ದು ನೋಂದಣಿ ಮಾಡಿಸಿಕೊಳ್ಳದ ಸಾರ್ವಜನಿಕರು ತಕ್ಷಣವೇ ಹೆಸರು ರಿಜಿಸ್ಟರ್ ಮಾಡಿಕೊಳ್ಳಿ ಎಂದು ಮಣಿಪಾಲದ ಕಸ್ತೂರ ಬಾ ಆಸ್ಪತ್ರೆ ವ್ಯವಸ್ಥಾಪಕ ಮೋಹನ್ ಶೆಟ್ಟಿ ತಿಳಿಸಿದರು.
ಪಟ್ಟಣದ ಪತ್ರಿಕಾಭನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ಇದೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರು ಬೇಕಾದರೂ ಸದಸ್ಯತ್ವ ಪಡೆಯಬಹುದು.ತಾಲೂಕು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್.ಚಿದಾನಂದ, ಕಸ್ತೂರಬಾ ಆಸ್ಪತ್ರೆಯ ಎಂಡಿ ಮೋಹನ್ ಶೆಟ್ಟಿ, ಅನಿಲ್ ನಾಯ್ಕ್, ಕೆ.ಬಿ.ಕೆಂಚನಗೌಡ ಮಣಿಪಾಲ ಆಸ್ಪತ್ರೆ ಕಾರ್ಡ್ ಬಿಡುಗಡೆ ಮಾಡಿದರು.
ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯದೊಂದಿಗೆ ಎಲ್ಲರಿಗೂ ಆರೋಗ್ಯ, ಎಲ್ಲೆಡೆ ಆರೋಗ್ಯ ಒದಗಿಸುವ ನಾವು ಬದ್ಧವಾಗಿದ್ದೇವೆ. ಈ ಆರೋಗ್ಯ ಕಾರ್ಡ್ ಮಾಡಿಸಿಕೊಂಡರೆ ತಜ್ಞ ವೈದ್ಯರ ಸಮಾಲೋಚನೆಯಲ್ಲಿ ಶೇ.50 ರಷ್ಟು ರಿಯಾಯಿತಿ. ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.30ರಷ್ಟು ರಿಯಾಯಿತಿ,
ಸಿಟಿ, ಎಂಆರ್‍ಐ, ಆಲ್ಟ್ರಾಸೌಂಡ್ ಗಳಲ್ಲಿ ಶೇ.20 ರಷ್ಟು, ಹೊರ ರೋಗಿ, ಮಧು ಮೇಹ ತಪಾಸಣೆ, ಶೇ.20ರಷ್ಟು ಮತ್ತು ಔಷಧಿಗಳ ಮೇಲೆ 12ರಷ್ಟು ರಿಯಾಯಿತಿ ದೊರೆಯಲಿದೆ ಎಂದರು.
ಮಣಿಪಾಲ ಆರೋಗ್ಯ ಕಾರ್ಡ್ ಪಡೆಯಲು 9980854700/08202923748 ಸಂಪರ್ಕಿಸ ಬಹುದು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅನಿಲ್ ನಾಯ್ಕ್, ಸಂಯೋಜಕ ಕೆ.ಬಿ.ಕೆಂಚನಗೌಡ ಇದ್ದರು.