ಸುದ್ದಿವಿಜಯ, ಜಗಳೂರು: ಏಷ್ಯಾ ಖಂಡದಲ್ಲೇ ವಿಶೇಷ ಪ್ರಭೇದದ ಕೊಂಡುಕುರಿಗಳಿರುವ ರಂಗಯ್ಯನದುರ್ಗ ವನ್ಯಜೀವಿ ಪ್ರದೇಶದಲ್ಲಿ ಅಳಿವನ ಅಂಚಿನಲ್ಲಿರುವ ನಾಲ್ಕು ಕೊಂಬಿನ ಜಿಂಕೆ ಪ್ರಭೇದದ ವನ್ಯಜೀವಿಗಳಿದ್ದು ಅವುಗಳ ಉಳಿವೆ ವಿದ್ಯಾರ್ಥಿಗಳು ಕಾಳಜಿ ವಹಿಸಬೇಕು ಮತ್ತು ಅವುಗಳ ಬಗ್ಗೆ ಅಧ್ಯಯನ ಮಾಡಿ ಎಂದು ರಂಗಯ್ಯನ ದುರ್ಗ ವಲಯ ಅರಣ್ಯಾಧಿಕಾರಿ ಬಿ.ಟಿ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಭಾನುವಾರ 68ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಗುರುಸಿದ್ದಾಪುರ ಸರಕಾರಿ ಶಾಲೆಯ 120ಕ್ಕೂ ಹೆಚ್ಚು ಮಕ್ಕಳನ್ನು ರಂಗಯ್ಯನ ದುರ್ಗ ಅರಣ್ಯ ಪ್ರದೇಶಕ್ಕೆ ಚಾರಣಕ್ಕೆ ಕರೆದೊಯ್ದು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಕೊಂಡುಕುರಿಗಳಿಗೆ ಕುರುಚಲು ಅರಣ್ಯವೇ ಅವುಗಳಿಗೆ ವಾಸಸ್ಥಾನ. ದಟ್ಟ ಕಾಡಿನಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಅವುಗಳ ಸಂತತಿ ವೃದ್ಧಿಯಾಗುವುದಿಲ್ಲ. ಕಾಡಿಗೆ ಬೆಂಕಿ ಹಚ್ಚುವುದು, ಉರುವಲಿಗಾಗಿ ಕಾಡು ಕಡಿಯುವುದು ಅರಣ್ಯ ಮತ್ತು ವನ್ಯಜೀವಿ ಕಾನೂನು ಉಲ್ಲಂಘನೆಯಾಗಿದ್ದು ಅಂತಹವರಿಗೆ ಕಠಿಣ ಶಿಕ್ಷೆಯಾಗುತ್ತದೆ.
ಅರಣ್ಯದ ನಾಶದಿಂದಾಗುವ ಪರಿಣಾಮಗಳ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.
ರಂಗಯ್ಯನ ದುರ್ಗ ಉಪವಲಯ ಅರಣಾಧಿಕಾರಿ ಎಚ್.ಎಸ್.ಚಂದ್ರಶೇಖರ್ ಮಾತನಾಡಿ, ಪಕ್ಷಿಗಳು ಮತ್ತು ವನ್ಯಜೀವಿಗಳ ತಾಣವಾಗಿರುವ ಕಾನನ ರಕ್ಷಣೆ ನಮ್ಮೆಲ್ಲರ ಹೊಣೆ. ಅವುಗಳ ಜೀವನ ಶೈಲಿಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡಬೇಕು.
ಆಸ್ಟ್ರೇಲಿಯಾದಲ್ಲಿ ಕಳೆದ ನಾಲ್ಕುವರ್ಷಗಳ ಹಿಂದೆ ಅಮೇಜಾನ್ ದಟ್ಟ ಕಾಡಿಗೆ ಕಾಡ್ಗಿಚ್ಚು ತಗಲು ಅರಪಾರ ನಷ್ಟವಾಯಿತು. ಕಾಡು ಪ್ರಾಣಿಗಳು, ಸಸ್ಯ ಸಂಪತ್ತು ನಶಿಸಿ ಹೋಯಿತು. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳುವುದು ಹೆಚ್ಚಾಗುತ್ತಿದ್ದು ಕಾಡಂಚಿನ ಜನರಿಗೆ ಕಾಡಿನ ಮಹತ್ವ ಮತ್ತು ಪ್ರಾಣಿ ಪಕ್ಷಗಳ ಪ್ರಪಂಚದ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಗುರುಸಿದ್ದಾಪರು ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕರಾದ ಸಂತೋಷ್ ಕೋವಿಕರ್, ಓ ಪ್ರವೀಣ್, ಗುರುಸಿದ್ದಾಪುರ ಗ್ರಾಪಂ ಅಧ್ಯಕ್ಷ ಬೊಮ್ಮಪ್ಪ ಸದಸ್ಯರಾದ ಸತೀಶ್ ನಾಯ್ಕ, ಸೇರಿದಂತೆ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಸಿರು ಟೀ ಶರ್ಟ್ ಧರಿಸಿ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.