ಸುದ್ದಿವಿಜಯ, ಜಗಳೂರು: ರೈತರೊಂದಿಗೆ ವಿಶ್ವಾಸಾರ್ಹ ವ್ಯವಹಾರ ಮಾಡಿದರೆ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಅಷ್ಟೇ ಅಲ್ಲ ಸಹಕಾರ ಸಂಘಗಳು ರೈತರಿಗೆ ವರದಾನವಾಗಲಿವೆ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಸಹಕಾರ ಇಲಾಖೆ ದಾವಣಗೆರೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ,ದಾವಗೆರೆ ಜಿಲ್ಲಾ ಸಹಕಾರ ಯೂನಿಯನ್ ನಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ,ಇಪೆÇ್ಕೀ ಸಂಸ್ಥೆ, ಜಗಳೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಹಾಯೋಗದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಲೂಕಿ ಸಹಕಾರ ಸಂಘಗಳು ಹೆಚ್ಚಾಗಿ ಬೆಳೆಸಿ ಉಳಿಸಬೇಕು, ಸಂಘದಿಂದ ಕೊಡುವ ಸಾಲ ಪಡೆದ ಸಾವಿರಾರು ರೈತ ಕುಟುಂಬಗಳು ಕೃಷಿ ಚಟುವಟಿಕೆಗಳಿಗೆ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ. ಸಂಘದ ಅಧಿಕಾರಿಗಳು ಇನ್ನು ಹೆಚ್ಚಿನ ಸಾಲ ಸೌಲಭ್ಯವನ್ನು ರೈತರಿಗೆ ಕಲ್ಪಿಸಿ ಕೈ ಹಿಡಿದು ನಡೆಸಬೇಕು ಎಂದರು.
ಡಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಜೆ.ಎಸ್ ವೇಣುಗೋಪಾಲರೆಡ್ಡಿ ಮಾತನಾಡಿ, ಸಹಕಾರ ಸಂಘ ಆರಂಭದಿಂದ ರೈತರಿಗೆ ಒಳಿತಾಗಿದೆ. ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಯಾರು ಸಾಲ ಕೊಡುವುದಿಲ್ಲ ನಮ್ಮ ಸೊಸೈಟಯಿಂದ ಲಕ್ಷಾಂತರ ರೂಗಳವರೆಗೂ ಸಾಲಸೌಲಭ್ಯವನ್ನು ನೀಡುತ್ತದೆ. 30 ವರ್ಷ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿದ್ದರಿಂದ ಈ ವರ್ಷ ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ಕೆಲಸ ಮಾಡುವ ಜವಾಬ್ದಾರಿ ಹೆಚ್ಚಾಗಿದೆ. ಆರಂಭದಲ್ಲಿ ಸಣ್ಣಪ್ರಮಾಣದಲ್ಲಿ ಆರಂಭವಾದ ಬ್ಯಾಂಕುಗಳು ಇಂದು ಬೃಹತ್ ಪ್ರಮಾಣದಲ್ಲಿ ರೈತರಿಗೆ ಸಾಲ ನೀಡತ್ತಿದ್ದು 700 ಕೋಟಿ ಸಾಲ ನೀಡಿದ್ದೇವೆ ಎಂದರು.
ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಮುರುಗೇಂದ್ರಪ್ಪ ಪ್ರಾಸ್ತವಿಕವಾಗಿ ಮಾತನಾಡಿ,ಭಾರತ ಹಳ್ಳಿಗಳ ದೇಶ ಗ್ರಾಮ ಪಂಚಾಯಿತಿ, ಶಾಲೆ, ಸಹಕಾರ ಸಂಘ ಇರಬೇಕು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಆಗ ಮಾತ್ರ ದೇಶ ಅಭಿವೃದ್ದಿಯಾಗಲು ಸಾದ್ಯ ಎಂದು ಮಹಾತ್ಮಗಾಂಧಿ ಹೇಳಿದ್ದರು ಎಂದರು.
ಇದೇ ವೇಳೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಡಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಜೆ.ಎಸ್ ವೇಣುಗೋಪಾಲರೆಡ್ಡಿ ಅವರಿಗೆ ಸನ್ಮಾನಿಸಲಾಯಿತು. ಡಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಶೇಖರಪ್ಪ, ಕ.ರಾ.ಸ.ಮಾ ಮಂಡಳ ನಿರ್ದೇಶಕ ಜೆ.ಆರ್ ಷಣ್ಮುಖಪ್ಪ, ಶಿ.ದಾ.ಚಿ ಸಹಕಾರಿ ಹಾಲು ಒಕ್ಕೂಟ ನಿರ್ದೇಶಕ ಜಗದೀಶಪ್ಪ ಬಣಕಾರ್,ಆಫೆಕ್ಸ್ ಬ್ಯಾಂಕ್ ನಿರ್ದೇಶಕ ಜಿ.ಎನ್ ಸ್ವಾಮಿ, ದಾ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಶಿಮೂಲ್ ಉಪಾಧ್ಯಕ್ಷ ಹೆಚ್.ಕೆ ಬಸಪ್ಪ, ನಿರ್ದೇಶಕ ಕೆ.ಎನ್ ಸೋಮಶೇಖರಪ್ಪ, ಜಿ.ಸ.ಯೂ. ನಿರ್ದೇಶಕ ಡಿ.ಎಂ ಮುರುಗೇಂದ್ರಯ್ಯ ನಬಾರ್ಡ್ ಡಿಡಿಎಂ ರಶ್ಮಿರೇಖಾ, ಪ.ಪಂ ಅಧ್ಯಕ್ಷ ಸಿ. ವಿಶಾಲಾಕ್ಷಿ, ಪಿಸಿಆರ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ ರಾಜು,ಹಿರಿಯ ಸಾಹಿತಿ ಎನ್.ಟಿ ಎರ್ರಿಸ್ವಾಮಿ, ರಾಮು, ಸೇರಿದಂತೆ ಮತ್ತಿತರಿದ್ದರು.
ಯಶಸ್ವಿನಿ ಕಾರ್ಡ್ ಪಡೆದುಕೊಳ್ಳಿ:
ಮುಖ್ಯಮಂತ್ರಿಗಳು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಯಶಸ್ವಿನಿ ಯೋಜನೆ ಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನವೆಂಬರ್ 1 ರಿಂದ ಸದಸ್ಯರ ನೋಂದಣಿ ಪ್ರಾರಂಭವಾಗಿದೆ. ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಸಹಕಾರ ಸಂಘದ ಸದಸ್ಯರು ಕನಿಷ್ಠ ಮೊತ್ತದ ಪ್ರಿಮಿಯಂ ಪಾವತಿಸಿ ತಮ್ಮ ಕುಟುಂಬದವರ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಆಗ ಹಲವು ವಿಧದ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆ ನೆರವಾಗಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.