ಸುದ್ದಿವಿಜಯ, ಜಗಳೂರು: ಪಟ್ಟಣದ ತರಳಬಾಳು ಕೇಂದ್ರ ದ ಪಕ್ಕದಲ್ಲಿರುವ ಗೂಡಂಗಡಿಗೆ ಕಿಡಿಗೇಡಿಗಳು ಹಚ್ಷಿದ ಕಿಡಿಗೆ ಗೂಡಂಗಡಿ ಭಸ್ಮವಾಗಿದೆ.
ಗುರುವಾರ ಈ ಘಟನೆ ನಡೆದಿದ್ದು ಅಂಗಡಿ ಮಾಲೀಕರಾದ ರತ್ನಮ್ಮ ನ ಆಕ್ರಂದನ ಮುಗಿಲು ಮುಟ್ಟಿತ್ತು.
ಅಂಗಡಿಯ ಶೆಡ್ ಭಸ್ಮವಾಗಿದೆ. ಅದರಲ್ಲದ್ದ ಚಾಕಲೇಟು. ಚಕ್ಕಲಿ. ಜ್ಯೂಸ್ ಬಾಟಲ್. ಸೇರಿದಂತೆ ವಿವಿಧ ವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಕಿ ತಗುಲಿದ್ದರಿಂದ ಅಂದಾಜು 40 ಸಾವಿರ ರೂಪಾಯಿ ಯಷ್ಟು ನಷ್ಟವಾಗಿದೆ.
ಸಾರ್ವಜನಿಕರು ಗಮನಿಸಿ ತಕ್ಷಣ ಅಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಹೊರ ತೆಗೆದಿದ್ದರಿಂದ ಬಹು ದೊಡ್ಡ ಅಪಾಯ ತಪ್ಪದೆ.
ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.