Suddivijaya|Kannada News|21-04-2023
ಸುದ್ದಿವಿಜಯ, ಜಗಳೂರು.ವಿದ್ಯಾವಂತ ನಿರುದ್ಯೋಗಿಗಳು ವಿವಿಧ ಇಲಾಖೆಗಳು ನೀಡುವ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತ ತರಬೇತಿಗಳ ಸಂಪೂರ್ಣ ಲಾಭ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಬೇಕು ಎಂದು ಸಿಡಾಕ್ ಸಂಸ್ಥೆ ಜಂಟಿ ನಿರ್ದೇಶಕ ಆರ್. ಪಿ. ಪಾಟೇಲ್ ಹೇಳಿದರು.
ಪಟ್ಟಣದ ಜೆ.ಎಂ ಇಮಾಂ ಸ್ಮಾರಕ ಪ್ರೌಢಶಾಲೆಯಲ್ಲಿ ಗುರುವಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ,ಕೌಶಲ್ಯ ಮಿಷನ್ ಹಾಗೂ ಅಲ್ ಫಾತೀಮಾ ಅಲ್ಪಸಂಖ್ಯಾತ ಮಹಿಳಾ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಶ್ರಯದಲ್ಲಿ 2022-23 ಸಾಲಿನ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಕಂಪ್ಯೂಟರ್, ಟೈಲರಿಂಗ್ ಸೇರಿದಂತೆ ಈ ಸಂಸ್ಥೆ ಅನೇಕ ಕೌಶಲ್ಯ ತರಬೇತಿ ಪಡೆದು ಯುವಕ, ಯುವತಿಯರು , ನಿರುದ್ಯೋಗಿ ಸ್ವ ಉದ್ಯೋಗ ಭರಿತರಾಗಿದ್ದರೆ ಇದರ ಸದುಪಯೋಗ ಪಡೆದು ನಿವು ಕೂಡ ಸ್ವ ಉದ್ಯೋಗಿಗಳಗಾಬೇಕು ಎಂದು ಸಲಹೆ ನೀಡಿದರು.
ಓದಿದವರಿಗೆಲ್ಲಾ ಸರ್ಕಾರ ಉದ್ಯೋಗ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಸ್ವಯಂಃ ಉದ್ಯೋಗ ಪಡೆಯಲು ಸಾಕಷ್ಟು ದಾರಿಗಳಿವೆ. ಅದರಲ್ಲಿ ಯಾವುದು ನಿಮಗೆ ಉತ್ತಮ ಅನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡು ಉದ್ಯೋಗ ಆರಂಭಿಸಿ ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ವಸಂತ್ ಕುಮಾರ್ , ತರಬೇತಿದಾರರು ಬಸವರಾಜ್ , ಅಲ್ ಫಾತೀಮಾ ಸಂಸ್ಥೆ ಕಾರ್ಯದರ್ಶಿ ಶಾಹೀನ ಬೇಗಂ , ಕೆನರಾ ಬ್ಯಾಂಕ್ ಅರ್ಥಿಕ ಸಲಹೆಗಾರರು ಇರ್ಫಾನ್ ಖಾನ್ ,ಪತ್ರಕರ್ತ ಎಂ.ಡಿ. ಅಬ್ದುಲ್ ರಖೀಬ್ ಸೇರಿದಂತೆ ಮತ್ತಿತರರಿದ್ದರು.
ಜಗಳೂರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ,ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮ, ಮಹಿಳೆರಿಗೆ ಮೂರು ದಿನ ತರಬೇತ