ಸುದ್ದಿವಿಜಯ,ಜಗಳೂರು: ತಾಲೂಕಿನ ಕೊಣಚಗಲ್ ಗುಡ್ಡದ ಕೆಳಗಿನ ಐತಿಹಾಸಿಕ ಪುಷ್ಕರಣಿಯಲ್ಲಿ ಶನಿವಾರ ದಾವಣಗೆರೆ ನಗರದ ಯುವಕ ಫಾರುಖ್ (18) ಮುಳುಗಿ ಸಾವನ್ನಪ್ಪಿದ್ದಾರೆ.
ದಾವಣಗೆರೆ ಮೂಲದ ದಾದಪೀರ್ ಎಂಬುವರ ಪುತ್ರ ಫಾರುಖ್ ಅವರು ಪಕ್ಕದ ಸಂತೆಮುದ್ದಾಪುರದಲ್ಲಿರುವ ಸಂಬಂಧಿಕರ ಮನೆಗೆ ಬಂದಿ.
ಹಳೆಯ ಸ್ನೇಹಿತರೊಂದಿಗೆ ಕೊಣಚಗಲ್ ಬೆಟ್ಟದ ತಪ್ಪಲಿನಲ್ಲಿರುವ ಪುಷ್ಕರಣಿಯಲ್ಲಿ ಈಜಾಡಲು ಹೋಗಾದ ಅವಘಡ ಸಂಭವಿಸಿದೆ.
ಮೃತ ದೇಹಕ್ಕಾಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಶೋಧನಾ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ.
ಬಿಳಿಚೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮತ್ತು ಮುಳುಗು ತಜ್ಞರು ಪ್ರಯತ್ನ ಪಟ್ಟರೂ ಫಾರುಖ್ ಪತ್ತೆಯಾಗಲಿಲ್ಲ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.