ಸುದ್ದಿವಿಜಯ,ಜಗಳೂರು: ಕ್ಷಯ ರೋಗ ಮತ್ತು ಮಕ್ಕಳಲ್ಲಿ ಕಾಡುವ ಅಪೌಷ್ಠಿಕತೆಯ ಬಗ್ಗೆ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಗ್ರಾ.ಪಂ ಅಧ್ಯಕ್ಷ ಸ್ವಾತಿ ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು.
ಬಹುತೇಕ ಗ್ರಾಮೀಣ ಭಾಗಗಳಲ್ಲಿ ಚಿಕ್ಕವರಿಂದ ದೊಡ್ಡವರವರೆಗೂ ಕೆಂಪು, ಶೀಥ, ತಲೆ ನೋವುಗಳು ಕಾಣಿಸಿಕೊಳ್ಳುತ್ತವೆ, ಇವುಗಳನ್ನು ನಿರ್ಲಕ್ಷೆ ಮಾಡುವುದರಿಂದ ಪ್ರಾಣಕ್ಕೆ ಕುತ್ತು ಬರುವ ಸಾದ್ಯತೆ ಇರುತ್ತದೆ, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆರಂದಲ್ಲಿ ಸೊಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗುವುದು, ನಂತರ ಹಂತ ಹಂತವಾಗಿ ಎಲ್ಲಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಹೈಟೆಕ್ ಗ್ರಂಥಾಲಯಗಳಂತೆ ಹೈಟೆಕ್ ಆರೋಗ್ಯ ಕೇಂದ್ರ ತೆರೆಯುವ ಉದ್ದೇಶವಿದೆ, ಇದರಿಂದ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿವಹಿಸಿದಂತಾಗುತ್ತದೆ. ರೋಗ ಮತ್ತು ಮರಣದ ಸಂಖ್ಯೆಯನ್ನು ಇಳಿಕೆ ಮಾಡಬಹುದು ಎಂದರು.
ಚಿಕ್ಕಬಂಟನಹಳ್ಳಿ ಗ್ರಾಮದಲ್ಲೂ 1991ರಲ್ಲಿ 150 ಮಂದಿಗೆ ನಿವೇಶನ ಹಕ್ಕು ಪತ್ರ ನೀಡಲಾಗಿದೆ. ಆದರೆ ನಿವೇಶನ ನೀಡಿಲ್ಲ, ಪಹಣಿ ಸರ್ಕಾರದ ಹೆಸರಿನಲ್ಲಿದ್ದು ಲೇಹೌಟ್ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಬೇಕಾಗಿದೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಒ ಶಿವಕುಮಾರ್, ಕಾರ್ಯದರ್ಶಿ ಅಂಜಿನಪ್ಪ, ಗ್ರಾ.ಪಂ ಉಪಾಧ್ಯಕ್ಷೆ ಕಾಳಮ್ಮ, ಗ್ರಾಪಂ ಸದಸ್ಯರಾದ ರಾಜಪ್ಪ, ಪಾಪನಾಯಕ, ತಿಂದಪ್ಪ, ತಿರುಮಲ, ಹನುಮಂತಪ್ಪ, ಶೈಲಾಕ್ಷಿ, ಆಶಾ, ರೇಣುಕಮ್ಮ, ಚೌಡಮ್ಮ, ಸರೋಜಮ್ಮ, ಭಾಗ್ಯಮ್ಮ, ನಿರ್ಮಲ ಇದ್ದರು.
ಅನಧಿಕೃತ ಶೆಡ್‌ಗಳ ತೆರವು:
“ಗ್ರಾಮದ ಸ.ನಂ 89 ರಲ್ಲಿ 11.11ಎಕರೆ ಜಮೀನಿದ್ದು, ಇದರಲ್ಲಿ 1 ಎಕರೆ ಭೂಮಿಯನ್ನು ಕೆಇಬಿಯವರಿಗೆ ನೀಡಲಾಗಿದೆ. ಉಳಿದ ಜಾಗದಲ್ಲಿ ಲೇಹೌಟ್ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲಾಗುವುದು. ಕಳೆದ ಇಪ್ಪತ್ತು ವರ್ಷಗಳಿಂದ ನಿವೇಶನ ಹಂಚಿಕೆ ಮಾಡಲು ಸಾದ್ಯವಾಗಿಲ್ಲ. ಈಗಾಗಲೇ ಈ ಜಾಗಾದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಶೆಡ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇನ್ನೊಂದು ನೋಟಿಸ್ ಜಾರಿ ಮಾಡಿ ಶೀಘ್ರವೇ ತೆರೆವುಗೊಳಿಸಲಾಗುವುದು”
– ಸ್ವಾತಿ ತಿಪ್ಪೇಸ್ವಾಮಿ, ಅಧ್ಯಕ್ಷೆ, ಗ್ರಾ.ಪಂ ಸೊಕ್ಕೆ.