ಸುದ್ದಿವಿಜಯ, ಜಗಳೂರು: ಜ.21ರಂದು ಶನಿವಾರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಜಿಲ್ಲಾ ಮಟ್ಟದ ಸಭೆ ಮತ್ತು ಬೈಕ್ ರ್ಯಾಲಿ ನಡೆಯಲಿದೆ ಎಂದು ಎಎಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಬಿ.ಕಲ್ಲೇಶ್ ತಿಳಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷದ ರಾಜ್ಯ ಸಮಿತಿ ಸೂಚನೆ ಮೇರೆಗೆ ಬೆಂಬಲಿಗರ ಸಭೆ ಕರೆಯಲಾಗಿದೆ. ಶನಿವಾರ ಬೆಳಿಗ್ಗೆ 10.30ರಿಂದ 11.30ರವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಕೆನರಾ ಬ್ಯಾಂಕ್ ಮೊದಲನೇ ಮಹಡಿಯ ಪಕ್ಷದ ಕಚೇರಿಯಲ್ಲಿ ಮುಖಂಡರ, ಕಾರ್ಯಕರ್ತರ ಸಭೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ಪಕ್ಷ ಅಭೂತಪೂರ್ವವಾಗಿ ಸಂಘಟನೆಯಾಗುತ್ತಿದೆ. ನಮ್ಮ ಪಕ್ಷದ ರಾಜ್ಯ ವೀಕ್ಷಕರಾದ ಗುರುಮೂರ್ತಿ, ಜಿಲ್ಲಾ ವೀಕ್ಷಕರಾದ ರವೀಂದ್ರ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಹರೀಶ್ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜಗಳೂರು ವಿಧಾನಸಭಾ ಕ್ಷೇತ್ರದ ಸಾಂಭವನೀಯ ಅಭ್ಯರ್ಥಿ ಗೋವಿಂದರಾಜು ಅವರ ಗೆಲುವಿಗಾಗಿ ಯುವ ಜನರು ಟೊಂಕಕಟ್ಟಿ ನಿಂತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಭ್ರಷ್ಟಾಚಾರದ ಕೂಪವಾಗಿವೆ. ಜನ ಜಾಗೃತಿಗಾಗಿ 150ಕ್ಕೂ ಹೆಚ್ಚು ಎಎಪಿ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ ಎಂದರು.
ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಪಕ್ಷಗಳ ದುರಾಡಳಿತವನ್ನು ಖಂಡಿಸುವುದು ನಮ್ಮ ಪಕ್ಷದ ಉದ್ದೇಶವಾಗಿದೆ. ಪಕ್ಷದ ಗೆಲುವಿವಾಗಿ ಬೂತ್ ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ರನ್ನೊಳಗೊಂಡ ಹತ್ತು ಜನರ ಕಮಿಟಿ ರಚಿಸಲಾಗಿದೆ.
ಸಮಯದ ಅಭಾವವಿರುವ ಕಾರಣ ನೇರವಾಗಿ ನಾವು ಚುನಾವಣೆಗೆ ಧುಮ್ಮುಕ್ಕುವ ಕಾರ್ಯಕತಂತ್ರ ಹೆಣೆದಿದ್ದೇವೆ. ಬಡವರ, ಶ್ರಮಿಕರ ಉದ್ದಾರದ ಹೆಸರೇಳಿ ಅಧಿಕಾರಕ್ಕೆ ಬಂದಿರುವ ಭ್ರಷ್ಟ ಪಕ್ಷಗಳ ಮುಖವಾಡ ಜನರ ಮುಂದೆ ಇಡುವ ಮೂಲಕ ಅಭಿವೃದ್ಧಿ ಆಧಾರಿತ ಮತ ಕೇಳಲು ನಮ್ಮ ಪಕ್ಷ ಸಿದ್ದವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ತಾಲೂಕು ಉಸ್ತುವಾರಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಎಚ್.ಎಂ.ನಾಗರಾಜ್, ಮಹಿಳಾ ಮೋರ್ಚಾದ ತಾಲೂಕು ಕಾರ್ಯದರ್ಶಿ ಶೋಭಾ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಬ್ರಾಹಿಂ, ಯುವ ಘಟಕದ ಅಧ್ಯಕ್ಷ ಸತೀಶ್, ಮುಖಂಡರಾದ ನಾಗರಾಜ್ ಇದ್ದರು.
19ಜೆಎಲ್‍ಆರ್‍ಚಿತ್ರ4ಎ: ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ಎಎಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.