ಸುದ್ದಿವಿಜಯ ಜಗಳೂರು.ಮಕ್ಕಳಿಗೆ ಜ್ಞಾನದ ಅರಿವು ಮೂಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವ ಶಕ್ತಿ ಶಿಕ್ಷಕ ವೃತ್ತಿಯಲ್ಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಂ ಹನುಮಂತೇಶ್ ಅಭಿಪ್ರಾಯಪಟ್ಟರು.
ಜಗಳೂರು ತಾಲೂಕಿನ ಸೂರಡ್ಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಿಕೆರೆ ಕ್ಲಸ್ಟರ್ ಮಟ್ಟದ ನಿವೃತ್ತ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ಮಕ್ಕಳ ಶ್ರೇಯೋಭಿವೃದ್ದಿಗೆ ಸೇವೆ ಮಾಡುವ ಶಿಕ್ಷಕರು ಅನೇಕಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಶಿಕ್ಷಣ ಇಲಾಖೆಯ ಅಭಿವೃದ್ದಿಗೆ ಒತ್ತು ನೀಡಬೇಕಾಗಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕ ಜಿ.ಆರ್ ದಿನಾಕರ್ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕರ ಪರಿಶ್ರಮವೇ ಗ್ರಾಮೀಣ ಪ್ರತಿಭೆಗಳು ಹೊರಬರುತ್ತಿವೆ ಆದರೆ ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಗಳಿಂದ ಮಕ್ಕಳ ಕಲಿಕೆಯಲ್ಲಿ ಹಿನ್ನಡೆಯಾಗುತ್ತದೆ ಎಂದರು.
ನಿವೃತ್ತ ಶಿಕ್ಷಕರಾದ ಟಿ.ತಿಪ್ಪಣ್ಣ, ದುರ್ಗಮ್ಮ,ಎಚ್ ಗೌಸ್ ಮನ್ಸೂರ್ ರವರಿಗೆ ಸನ್ಮಾನ ಮಾಡಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಕ್ಲಸ್ಟರ್ ನ ಶಿಕ್ಷಕರ ಬಳಗ ಶುಭ ಹಾರೈಸಿತು.
ಶಿಕ್ಷಣ ಸಾರಥಿ ಪ್ರಶಸ್ತಿ ಪಡೆದ ಸಿಆರ್ ಪಿ ಇ.ಆಂಜನೇಯ ಇವರನ್ನು ಸನ್ಮಾನಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ
ಸತೀಶ್,ನಿರ್ದೇಶಕಿ ಶಕುಂತಲಾ, ಬಿಆರ್ ಪಿ ಲತಾ, ಮುಖ್ಯ ಶಿಕ್ಷಕರಾದ ಓಬಯ್ಯ ನಾಯಕ, ಈರಪ್ಪ, ಬಸವರಾಜಪ್ಪ ನಾಯಕ, ಓಬಳೇಶಪ್ಪ, ರಾಜಪ್ಪ , ಬಸವರಾಜಪ್ಪ, ಮಾರುತಿ ಇದ್ದರು.
ಕಾರ್ಯಕ್ರಮ ನಿರೂಪಣೆ ರವಿ ಕುಮಾರ್ ಸ್ವಾಗತ ಮಾಡಿದರು. ದಿನಾಕರ್ ಪ್ರಾರ್ಥಿಸಿದರು.
ಶಿಕ್ಷಕ ವೃತ್ತಿ ಸಾರ್ಥಕತೆಯ ಬದುಕು: ಹನುಮಂತೇಶ್ ಹೇಳಿಕೆ
Leave a comment