ಸುದ್ದಿವಿಜಯ, ವಿಶೇಷ: ಕನ್ನಡ, ತೆಲುಗು, ಮಲೆಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ನಯನ ಮನೋಹರವಾಗಿ ನಟಿಸುತ್ತಿರುವ ನಟಿಸುತ್ತಿರುವ ಚಲುವೆ ನಿತ್ಯಾ ಮೆನನ್ ತನಗಾದ ದೌರ್ಜನ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಹೌದು, ‘ಮೈನಾ’ ಸಿನಿಮಾ ನಟಿ ನಿತ್ಯಾ ಮೆನನ್ ಅವರು 6 ವರ್ಷಗಳ ಕಾಲ ದೌರ್ಜನ್ಯಕ್ಕೆ ಒಳಗಾಗಿದ್ದರಂತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ನಿತ್ಯಾ ಬಾಯಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರ ಅಪ್ಪ ಅಮ್ಮ ಕೂಡ ಈ ವಿಚಾರವಾಗಿ ಸಾಕಷ್ಟು ಹಿಂಸೆ ಅನುಭವಿಸಿದ್ದರಂತೆ. ಅಷ್ಟೇ ಅಲ್ಲದೆ ಅವನು ಏನೇ ಹೇಳಿದರೂ ಅದನ್ನು ನಂಬುವವರು ನಿಜವಾದ ಮೂರ್ಖರು ಎಂದು ನಿತ್ಯಾ ಹೇಳಿಕೊಂಡಿದ್ದಾರೆ.
ನಿತ್ಯಾ ಮೆನನ್ ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 1998ರಲ್ಲಿ Hanuman ಎಂಬ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ನಿತ್ಯಾ ಅವರು, ಮಲಯಾಳಂ, ತೆಲುಗು, ತಮಿಳು ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ, ವೆಬ್ ಸಿರೀಸ್ ಜೊತೆಗೆ ನಿತ್ಯಾ, ರಿಯಾಲಿಟಿ ಶೋನಲ್ಲಿಯೂ ಜಡ್ಜ್ ಆಗಿ ಗುರುತಿಸಿಕೊಂಡಿದ್ದಾರೆ.
ಅಭಿನಯದ ವಿಚಾರವಾಗಿ ಸಕಾರಾತ್ಮಕ ಪ್ರತಿಕ್ರಿಯೆ ಜೊತೆಗೆ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ನಿತ್ಯಾರಿಗೆ 6 ವರ್ಷಗಳ ಕಾಲ ಸಿನಿಮಾ ವಿಮರ್ಶಕನೊಬ್ಬ ದೌರ್ಜನ್ಯ ಮಾಡಿದ್ದಾನಂತೆ, ಈ ಬಗ್ಗೆ ಸಂದರ್ಶನವೊಂದರಲ್ಲಿ ನಿತ್ಯಾ ಹೇಳಿಕೊಂಡಿದ್ದಾರೆ.
ಸಿನಿಮಾ ವಿಮರ್ಶಕ ಯಾರು ಎಂದು ನಿತ್ಯಾ ಹೇಳಿಲ್ಲ. ದೌರ್ಜನ್ಯದ ಬಗ್ಗೆ ಮಾತನಾಡಿರುವ ನಿತ್ಯಾ, ಸಾಕಷ್ಟು ಸಮಯದಿಂದ ಅವನು ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ವೈರಲ್ ಆಗುತ್ತಿದ್ದಂತೆ ಅವನು ನನ್ನ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಆರಂಭಿಸಿದ. 6 ವರ್ಷಗಳಿಗೂ ಅಧಿಕ ಕಾಲ ಅವನು ನನಗೆ ತಲೆನೋವು ಕೊಟ್ಟಿದ್ದಾನೆ” ಎಂದಿದ್ದಾರೆ.
ಅನೇಕರು ತಮಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ನೀಡಿ ಅಂತ ಹೇಳಿದರು. ಆದರೆ ನಾನು ಈ ಬಗ್ಗೆ ಪಾಲಕರ ಬಳಿ ಹೇಳಿದೆ, ಆಗ ಅವರು ಅವನ ಬಗ್ಗೆ ಮಾತನಾಡಲು ಆರಂಭಿಸಿದರು. ನನ್ನ ತಾಯಿ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿರುವಾಗ ಅವನು ನನಗೆ ಕಾಲ್ ಮಾಡುತ್ತಿದ್ದ.
ಯಾವಾಗಲೂ ಕೂಲ್ ಆಗಿರುತ್ತಿದ್ದ ನನ್ನ ತಂದೆ ತಾಯಿ ಅವನ ಜೊತೆ ಸಿಟ್ಟಾಗಿ ಮಾತನಾಡುತ್ತಿದ್ದರು. ತಂದೆ-ತಾಯಿಗೆ ಅವನ ನಂಬರ್ ಬ್ಲಾಕ್ ಮಾಡಿ ಅಂತ ಹೇಳಿದ್ದೆ. ಅವನ 30 ನಂಬರ್‌ನ್ನು ನಾನು ಬ್ಲಾಕ್ ಮಾಡಿದ್ದೇನೆ” ಎಂದಿದ್ದಾರೆ ನಿತ್ಯಾ ಮೆನನ್
‘ಮೇಜರ್’ ಸಿನಿಮಾದಲ್ಲಿ ಕೊನೆಯದಾಗಿ ನಿತ್ಯಾ ಕಾಣಿಸಿಕೊಂಡಿದ್ದರು. ಸಲಾಮ್ ವೆಂಕಿ, ಕಾಜಲ್, ವಿಶಾಲ್ ಜೆತ್ವ ನಟನೆಯ ಸಿನಿಮಾದಲ್ಲಿ ನಿತ್ಯಾ ಮೆನನ್ ಅವರು ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆದ ‘ಮಾಡರ್ನ್ ಲವ್’ ಸಿನಿಮಾದಲ್ಲಿ ನಿತ್ಯಾ ಕಾಣಿಸಿಕೊಂಡಿದ್ದರು. ಅದೇಕೋ ಏನೋ ಸಿನಿಮಾ ಇಂಡಸ್ಟ್ರೀಯಲ್ಲಿ ಕಾರ್ಯನಿರ್ವಹಿಸುವ ಅನೇಕರಿಗೆ ಈ ರೀತಿಯ ಟಾರ್ಚರ್ ಇದ್ದಿದ್ದೇ. ಆದರೆ ಅವನು ಯಾರು? ಅವನಿಂದ ಏನು ಟಾರ್ಚರ್ ಅನುಭವಸಿದ್ದ ಬಗ್ಗೆನಿತ್ಯಾ ರಿಂದಲೇ ಸತ್ಯ ಹೊರ ಬರಬೇಕಿದೆ.