ಜಗಳೂರಿನಲ್ಲಿ ಬಿಜೆಪಿ ವಿಜಯೋತ್ಸವ

Suddivijaya
Suddivijaya February 2, 2023
Updated 2023/02/02 at 4:03 PM

ಸುದ್ದಿವಿಜಯ ಜಗಳೂರು.ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 5300 ಕೋಟಿ ಮೀಸಲಿಟ್ಟ ಹಿನ್ನೆಲೆ ಗುರುವಾರ ಇಲ್ಲಿನ ಹಳೇ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ ಮಾತನಾಡಿ, ತಾಲೂಕಿನ ಕನಸ್ಸಿನ ಯೋಜನೆಯಾದ ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸಿದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಂ 5300 ಕೋಟಿ ಅನುದಾನವನ್ನು ಮೀಸಲಿಟ್ಟಿರುವುದು ಶ್ಲಾಘನೀಯ ಎಂದರು.

ಕರ್ನಾಟಕದಲ್ಲಿ ಅತ್ಯಂತ ಮಹತ್ವ ಪಡೆದಿರುವ ನೀರಾವರಿ ಯೋಜನೆ ಈ ಭದ್ರಾ ಮೇಲ್ದಂಡೆ ಯೋಜನೆ. ಕರ್ನಾಟಕದ ಚಿಕ್ಕಮಗಳೂರು, ಚಿತ್ರಮಧ್ಯ ಕರ್ನಾಟಕದ ಬರೋಬ್ಬರಿ 5,57,022 ಎಕರೆ ಪ್ರದೇಶ ವಿಸ್ತಾರ ಹೊಂದಿರುವ ಭದ್ರಾ ಮೇಲ್ದಂಡೆ ಯೋಜನೆ ಬರೋಬ್ಬರಿ 367 ಕೆರೆಗಳಿಗೆ ಜೀವ ತುಂಬಿಸುತ್ತದೆ. ಹೀಗಾಗಿ ಈ ಪ್ರದೇಶಗಳ ನೀರಾವರಿಗೆ ಭದ್ರಾ ಮೇಲ್ದಂಡೆ ಯೋಜನೆ ಅತ್ಯಂತ ಮಹತ್ವದ್ದಾಗಿದೆ ಎಂದರು.

ಮಾಜಿ.ಪ.ಪಂ ಅಧ್ಯಕ್ಷ ಜೆ.ವಿ ನಾಗರಾಜ್ ಮಾತನಾಡಿ, ರೈತ ಪರವಾದ ಯೋಜನೆಗಳಿಗೆ ಒತ್ತು ನೀಡಿರುವ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಆದಷ್ಟು ಬೇಗ ಜಮೀನುಗಳಿಗೆ ನೀರುಣಿಸುವ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಹಣ ಮೀಸಲಿಟ್ಟಿದೆ ಎಂದರು.
ಕರ್ನಾಟಕದ ಒಟ್ಟು 787 ಗ್ರಾಮಗಳ 74.26 ಲಕ್ಷ ಜನರಿಗೆ ಈ ಯೋಜನೆಯಡಿ ಅನುಕೂಲವಾಗಲಿದೆ ಅನ್ನೋದು ಈ ಯೋಜನೆ ಮಹತ್ವ ಸಾರುತ್ತದೆ. ಸದ್ಯ ಭದ್ರಾ ಮೇಲ್ದಂಡೆ ಯೋಜನೆಯಡಿ 29.9 ಟಿಎಂಸಿ ನೀರನ್ನು ಬಳಸಲು ಸಮ್ಮತಿ ದೊರೆತಿದೆ. ಚಿತ್ರದುರ್ಗ, ತುಮಕೂರು ದಾವಣಗೆರೆಯ, ಜಗಳೂರು, ಚಿಕ್ಕಮಗಳೂರಿನ ವ್ಯಾಪ್ತಿಯ ನೂರಾರು ಹಳ್ಳಿಗಳು ಭದ್ರಾ ಮೇಲ್ದಂಡೆ ಯೋಜನೆಯ ನೇರ ಫಲಾನುಭವಿಗಳಾಗಲಿದ್ದಾರೆ. ಇದಕ್ಕೆ ಶಾಸಕ ಎಸ್.ವಿ ರಾಮಚಂದ್ರ, ಸಂಸದ ಜಿ.ಎಂ ಸಿದ್ದೇಶ್ವರ್, ಬಿಎಸ್‌ವೈ, ಸಿ.ಎಂ ಬಸವರಾಜ್ ಬೊಮ್ಮಾಯಿಯವರ ಪರಿಶ್ರಮವಾಗಿದೆ ಎಂದರು.

ಭದ್ರಾ ಮೇಲ್ದಂಡೆ ಮಹತ್ವದ ಯೋಜನೆಯಾಗಿದ್ದು ಸುಮಾರು 40 ವರ್ಷಗಳ ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ಚುನಾವಣೆ ವೇಳೆ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದೇ ಹಾಗೇಯೆ ಇದೀನ ನಮ್ಮ ಬಿಜೆಪಿ ಸರ್ಕಾರ ಘೋಷಣೆ ಮಾಡಿ ಸುಮಾರು 5300 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಫೆ.10 ರೊಳಗೆ ಸಿ.ಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಅವರ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುವುದು”
ಎಸ್.ವಿ ರಾಮಚಂದ್ರ. ಶಾಸಕರು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಣ್ಣ, ಸದಸ್ಯರಾದ ಆರ್. ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ಸಿದ್ದಪ್ಪ, ನವೀನ್‌ಕುಮಾರ್,ಬಿ.ಪಿ ಸುಭಾನ್, ರುದ್ರಮುನಿ ಮುಖಂಡರಾದ ಗೌರಿಪುರ ಶಿವಣ್ಣ, ಹನುಮಂತಪ್ಪ, ಮಹೇಶ್, ಸೂರ್ಯಕಿರಣ್, ಬಡಯ್ಯ, ಓಬಳೇಶ್,ಹುಲಿಕುಂಟ ಶ್ರೇಷ್ಠಿ, ರಮೇಶ್, ಲೋಕೆಶ್, ಬಿಜೆಪಿ ಎಸ್ಸಿ ಮಾರ್ಚಾ ಅಧ್ಯಕ್ಷ ರಾಜೇಶ್ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!