ಸುದ್ದಿವಿಜಯ, ಜಗಳೂರು: ಶಿಕ್ಷಕರು ಎಂದರೆ ಸಭ್ಯತೆ, ಸೌಜನ್ಯತೆ, ವಿನಯ, ನಮ್ರತೆ ಹೆಸರುವಾಸಿಯಾದವರು. ಹೀಗಾಗಿ ರಾಷ್ಟ್ರಪತಿಯಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಿನೂತ ಭಾವ ಇಡೀ ವಿಶ್ವಕ್ಕೆ ಮಾದರಿ. ಹಾಗಾಗಿ ಅವರ ಹೆಸರು ಇತಿಹಾಸ ಪುಟದಲ್ಲಿ ಅಜರಾಮರವಾಗಿ ಉಳಿಯುವಂತೆ ಪ್ರತಿವರ್ಷ ಸೆ.5ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ.
ಸೋಮವಾರ ಜಗಳೂರು ಪಟ್ಟಣದ ಗುರುಭವನದಲ್ಲಿ ನಡೆದ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರ 134ನೇ ಜನ್ಮ ದಿನೋತ್ಸವದಲ್ಲಿ ಜಗಳೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಆಂಜನೇಯ ನಾಯ್ಕ ಅವರು ದುರಂಹಾರದ ವರ್ತನೆ ತೋರಿದ್ದಾರೆ ಎಂದು ಹೆಸರೇಳದ ಕೆಲ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ.ರಾಧಾಕೃಷ್ಣನ್ ಅವರ ಹೆಸರಿನಲ್ಲಿ ಆಚರಿಸಲಾಗುತ್ತಿರುವ ಶಿಕ್ಷಕರ ದಿನಾಚರಣೆ ಅತ್ಯಂತ ಗೌರವಯುತವಾದ ಕಾರ್ಯಕ್ರಮ. ವೇದಿಕೆಯ ಮೇಲೆ ಶಾಸಕ ಎಸ್.ವಿ.ರಾಮಚಂದ್ರ, ತಾಪಂ ಪ್ರಭಾರ ಇಒ ವೈ.ಎಚ್.ಚಂದ್ರಶೇಖರ್, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಬಿಇಒ ಉಮಾದೇವಿ ಅವರಂತಹ ದೊಡ್ಡ ದೊಡ್ಡ ಅಧಿಕಾರಿಗಳು ವಿನಯದಿಂದ ಎದುರಿಗೆ ಕುಳಿತಿದ್ದ ಶಿಕ್ಷಕರಿಗೆ ಗೌರವ ಸೂಚಕವಾಗಿ ವಿನಮ್ರವಾಗಿ ಕುಳಿತಿದ್ದ ಸಾಲಿನಲ್ಲಿ ಆಂಜನೇಯ ನಾಯ್ಕ ಅವರನ್ನು ಕೂರಿಸಲಾಗಿತ್ತು.
ವೇದಿಕೆಯ ಮೊದಲ ಸಾಲಿನಲ್ಲಿ ಕುಳಿತಿದ್ದ ಆಂಜನೇಯ ನಾಯ್ಕ ಅವರು ಪಕ್ಕದಲ್ಲೇ ಕುಳಿತಿದ್ದ ತಾಪಂ ಇಒ ಚಂದ್ರಶೇಖರ್ ಹಾಗೂ ಎದುರಿಗೆ ಕುಳಿತಿದ್ದ ಸಾವಿರಾರು ಶಿಕ್ಷಕರಿಗೂ ಗೌರವ ಕೊಡದೇ ಕಾಲ ಮೇಲೆ ಕಾಲು ಹಾಕಿಕೊಂಡು ಶಿಕ್ಷಕರ ದಿನಾಚರಣೆಯಲ್ಲಿ ಅಗೌರವ ಸೂಚಿಸಿದ್ದಾರೆ. ಇವರ ವರ್ತನೆಗೆ ನೂರಾರು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರಿಗೆ ಗೌರವ ಸೂಚಕವಾಗಿರುವ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆಂದೇ ಮೀಸಲಿಟ್ಟ ವೇದಿಕೆಯಲ್ಲಿ ಆಂಜನೇಯ ನಾಯ್ಕ ಅವರ ದರ್ಪ ಸೂಚಕ ನಡೆಯ ವಿರುದ್ಧ ಅನೇಕ ಶಿಕ್ಷಕರು, ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.