ಈರುಳ್ಳಿ ಸೇವನೆಯಿಂದ ನಮ್ಮ ದೇಹಕ್ಕೆ ಏನು ಪ್ರಯೋಜನ? ಆಯುರ್ವೇದಲ್ಲಿದೆ ಉತ್ತರ

Suddivijaya
Suddivijaya May 24, 2023
Updated 2023/05/24 at 2:41 PM

ಸುದ್ದಿವಿಜಯ, ಜಗಳೂರು: ಈರುಳ್ಳಿ ಅದೆಷ್ಟೋ ರೈತರ ಪಾಲಿಗೆ ಕಣ್ಣೀರುಳ್ಳಿಯಾಗಿದೆ. ದರ ಕುಸಿತದಿಂದ ರೈತ ರೋಸಿ ಹೋಗಿದ್ದಾನೆ. ಈರುಳ್ಳಿ ಕಟ್ ಮಾಡುವ ಮೊದಲು ರೈತನಿಗೆ ಕಣ್ಣೀರು ಬರುತ್ತಿದೆ. ಕಾರಣ ಬೆಳೆ ಕುಸಿತದಿಂದ ಆಗಿರುವ ನಷ್ಟ ಅಷ್ಟಿಷ್ಟಲ್ಲ. ಆದರೂ ಒಮ್ಮೊಮ್ಮೆ ಲಾಟರಿಯಿದ್ದಂತೆ ಈರುಳ್ಳಿ ಬೆಲೆ ಕೆಜಿಗೆ ₹100 ದಾಟಿದ್ದು ನೋಡಿದ್ದೇವೆ.

ಆದರೆ ಈಗ ಐದು ಕೆಜಿಗೆ ₹100 ಆಗಿದ್ದು ರೈತರು ಬೆಳೆದ ಈರಳ್ಳಿ ಕಣ್ಣೀರುಳ್ಳಿಯಾಗಿದೆ. ಆಯುರ್ವೇದಲ್ಲಿ ಈರುಳ್ಳಿ ಸೇವನೆಯಿಂದ ಆಗುವ ದೇಹಾರೋಗ್ಯದ ಬಗ್ಗೆ ಪ್ರಸ್ತಾಪಿಸಲಾಗಿದೆ.

ಈರುಳ್ಳಿ ಸೇವನೆಯಿಂದಾಗುವ ಪ್ರಯೋಜನಗಳೇನು?

ಕ್ಯಾನ್ಸರ್‍ಗೆ ರಾಮಬಾಣ ಈರುಳ್ಳಿ!

*ಈರುಳ್ಳಿ ಸೇವನೆಯಿಂದ ಕ್ಯಾನ್ಸರ್ ರೋಗವನ್ನು ಬರದಂತೆ ತಡೆಗಟ್ಟುತ್ತದೆ ಏಕೆಂದರೆ ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ. ಕ್ಯಾನ್ಸರ್‍ಗೆ ರಾಮಬಾಣವಂತೆ.

*ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ.

*ಈರುಳ್ಳಿಯನ್ನು ಜೆಗಿದು ತಿನ್ನುವುದರಿಂದ ಇದು ಅಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

*ಈರುಳ್ಳಿಯನ್ನು ಹೇರಳವಾಗಿ ತಿನ್ನುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲುಕೋಸ್ ಅನ್ನು ಕಡಿಮೆ ಮಾಡಿ ಇನ್ಸುಲಿನ್ ಹೆಚ್ಚಾಗುವಂತೆ ಮಾಡುತ್ತದೆ ಇದರಿಂದ ನಾವು ಸಕ್ಕರೆ ಕಾಯಿಲೆಯಿಂದ ದೂರ ಇರಬಹುದು.

*ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈರುಳ್ಳಿ ಒಳ್ಳೆಯ ಔಷಧಿ ರಾತ್ರಿ ಊಟಕ್ಕೂ ಮುನ್ನ ಈರುಳ್ಳಿ ಸೂಪ್ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.

*ಈರುಳ್ಳಿ ರಸಕ್ಕೆ ಜೇನುತುಪ್ಪ ಸೇರಿಸಿ ಸಮ ಪ್ರಮಾಣದಲ್ಲಿ ಸೇವಿಸುವುದರಿಂದ ಅಸ್ತಮಾದಿಂದ ದೂರ ಇರಬಹುದು.

*ಈರುಳ್ಳಿಯ ಔಷಧಿಯ ಗುಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಸಾಮರ್ಥ್ಯ ವನ್ನು ಹೊಂದಿದೆ ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಮಲಬದ್ಧತೆ ಸಮಸ್ಯೆ ಇಲ್ಲದಿದ್ದರೆ ಜೀಣಾರ್ಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತದೆ.

*ಅದಕ್ಕೂ ಮೊದಲು ಚೆನ್ನಾಗಿ ಅತಿ ವೇಗವಾಗಿ ಬೆಳೆಯಲು ಈರುಳ್ಳಿ ರಸವನ್ನು ವಾರದಲ್ಲಿ ಮೂರು ಸಾರಿ ಬಳಸಿ ಖಂಡಿತ ಕೂದಲು ಬೆಳೆಯುತ್ತದೆ ಜೊತೆಗೆ ಕೂದಲು ಉದುರುವುದು ನಿಲ್ಲುತ್ತದೆ ಆರೋಗ್ಯವಾಗಿರುತ್ತದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!