ಸುದ್ದಿವಿಜಯ, ದಾವಣಗೆರೆ: ಸ್ನೇಹಿತರ ಮದುವೆ ಮುಗಿಸಿಕೊಂಡು ಮನೆಗೆ ತೆರಳುತ್ತಿರುವಾಗ ರಸ್ತೆ ಅಪಘಾತದಲ್ಲಿ ಜಗಳೂರು ತಾಲೂಕಿನ ಹಲವು ಗ್ರಾಪಂಗಳಲ್ಲಿ ನರೇಗಾದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಚ್.ಎಂ.ಮಿಥುನ್ (34) ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.
ಜಗಳೂರು ತಾಲೂಕಿನ ಹಾಲೇಕಲ್ಲು, ಬಿಳಿಚೋಡು, ದೇವೀಕರೆ, ಹನುಮಂತಾಪುರ, ಅಣಬೂರು ಗ್ರಾಪಂಗಳಲ್ಲಿ ಹೊರಗುತ್ತಿಗೆ ಸಹಾಯಕ ತಾಂತ್ರಿಕ ಅಭಿಯಂತರ (ಟೆಕ್ನಿಕಲ್ ಎಂಜಿಯರ್) ಆಗಿ 2017 ರಿಂದ ಕಾರ್ಯನಿರ್ವಹಿಸುತ್ತಿದ್ದರು.
ಘಟನೆ ವಿವರ: ಮಂಗಳವಾರ ರಾತ್ರಿ ಸಹೋದ್ಯೋಗಿ ಹಾಗೂ ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ದಾವಣಗೆರೆ ಹೊರವಲಯದ ಶಾಮನೂರು ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರೆಡ್‍ಫೋರ್ಟ್ ಹೋಟೆಲ್ ಸಮೀಪ ನಿಂತಿದ್ದ ಲಾರಿಗೆ ಹಿಂಬದಿಯಿಂದ ಮಿಥುನ್ ಅವರು ಸವಾರಿ ಮಾಡುತ್ತಿದ್ದ ಬೈಕ್ ಡಿಕ್ಕಿಯಾಗಿ ತಲೆಗೆ ಬಲವಾದ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರಿಗೆ ಪತ್ನಿ ಮತ್ತು ಮಗು ಇದ್ದು ಮೂಲತಃ ದಾಣವಗೆರೆ ಸಮೀಪದ ಹದಡಿ ಸಮೀಪ ಹೊಸನಾಯನಕನಹಳ್ಳಿ ಗ್ರಾಮದವರು. ದಾವಣಗೆರೆ ನಗರದಲ್ಲಿ ಸಂಸಾರ ಸಮೇತವಾಸವಾಗಿದ್ದ ನೆಲಸಿದ್ದರು. ನಿತ್ಯ ದಾವಣಗೆರೆಯಿಂದ ಜಗಳೂರಿಗೆ ಕಾರ್ಯನಿರ್ವಹಿಸಲು ಆಗಮಿಸುತ್ತಿದ್ದರು.
ಅವರ ಸಾವಿಗೆ ಜಿಲ್ಲಾಪಂಚಾಯಿತಿ ದಾವಣಗೆರೆ ಮತ್ತು ಜಗಳೂರು ತಾಲೂಕು ತಾಪಂ ಅಧಿಕಾರಿಗಳು ಸೇರಿದಂತೆ ನರೇಗಾರದಲ್ಲಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಅಪಘಾತ ಸಂಬಂಧ ಶಾಮನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಕ್ಕೆ ಶಾಂತಿ ಸಿಗಲಿ!
ಜಗಳೂರು ತಾಲೂಕಿನ ಅನೇಕ ಗ್ರಾಪಂಗಳಲ್ಲಿ ಹೊರಗುತ್ತಿಗೆ ಸಹಾಯಕ ತಾಂತ್ರಿಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಮಿಥುನ್ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದರು. ಅವರ ಈ ಅಕಾಲಿಕ ಸಾವಿನಿಂದ ಅಪಾರ ನೋವುಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
-ಚಂದ್ರಶೇಖರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಜಗಳೂರು