ಸುದ್ಜದಿವಿಜಯ,ಜಗಳೂರು: ಜಗಳೂರಿನ ದಿ. ಇಮಾಂ ಸಾಹೇಬ್ ಅವರ ಸಹೋದರ ಖಾಸೀಂ ಸಾಬ್ ಕಿರಿಯ ಪುತ್ರ ಖಾಸೀಂ ಅಲಿ ಸಾಬ್(80) ನಿಧನರಾಗಿದ್ದಾರೆ. ಭಾರತ ಚಿತ್ರಮಂದಿರದ ಮಾಲೀಕರಾಗಿದ್ದು, ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಮಂಗಳವಾರ ಮದ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರ ಜೂ.8ರಂದು ಬೆಳಗ್ಗೆ 10ಕ್ಕೆ ಜಗಳೂರಿನ ಖಬರಸ್ಥಾದಲ್ಲಿ ನೆರವೇರಲಿದೆ ಎಂದು ಕುಟುಂದ ಮೂಲಗಳು ತಿಳಿಸಿವೆ.