ಸುದ್ದಿವಿಜಯ,ಜಗಳೂರು: ಮನೆಯಲ್ಲೇ ಕುಳಿತು ಹಣ ಸಂಪಾದನೆಗೆ ಸ್ವಸಾಯ ಸಂಘಗಳ ಮಹಿಳೆಯರಿಗೆ ಫ್ಯಾಷನ್ ಡಿಸೈನಿಂಗ್ ಪೂರಕವಾಗಿದೆ ಎಂದು ನಬಾರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕಿ ರಶ್ಮಿರೇಖಾ ಸಲಹೆ ನೀಡಿದರು.
ಪಟ್ಟಣದ ಔಷಧಭವನದಲ್ಲಿ ಶುಕ್ರವಾರ ಕಾವೇರಿ ಸಮುದಾಯ ನಿರ್ವಾತ ಸಂನ್ಮೂಲ ಸಂಸ್ಥೆವತಿಂದ 15 ದಿನದ ಫ್ಯಾಷನ್ ಡಿಸೈನಿಂಗ್ ಕಾರ್ಯಕ್ರಮ ಮುಕ್ತಾಯದ ನಂತರ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ಫ್ಯಾಷನ್ ಡಿಸೈನಿಂಗ್, ಎಂಬ್ರಾಯಿಡಿಂಗ್, ಜಿಗ್‍ಜಾಗ್ ಮುಂತಾದ ಕುಶಲತೆಗಳನ್ನು ಮೈಗೂಡಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಲು ಕಾವೇರಿ ಸಮುದಾಯ ನಿರ್ವಾತ ಕೇಂದ್ರ ಸಹಕಾರಿಯಾಗಿದೆ.
ಮನೆಯಲ್ಲೇ ಹೊಲಿಗೆ ಯಂತಗಳ ಮೂಲಕ ಕೆಲಸ ಮಾಡುವುದರಿಂದ ಕುಟುಂಬ ನಿರ್ವಹಣೆ ಮತ್ತು ವೃದ್ಧಿಯಾಗುತ್ತದೆ. ಕೇವಲ ಅಷ್ಟಕ್ಕೆ ಸೀಮಿತವಾಗದೇ ನಿಮ್ಮದೇ ಸ್ವಂತ ಉದ್ಯೋಗ ಸೃಷ್ಟಿಸಿಕೊಳ್ಳಬೇಕಾದರೆ ಕಲಿತ ವಿದ್ಯೆಗೆ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆದಾಯ ಹೆಚ್ಚಾದರೆ ಮಾತ್ರ ಮನೆಯಲ್ಲಿ ಮಹಿಳೆಯರಿಗೆ ಸ್ಥಾನ, ಗೌರವ ಹೆಚ್ಚಾಗುತ್ತದೆ.ಈಚೆಗೆ ತಾಂತ್ರಿಕತೆ ವೃದ್ದಿಯಾಗಿದೆ. ಫ್ಯಾಷನ್ ಡಿಸೈನಿಂಗ್ ಎಂಬುದು ಕೇವಲ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಸಣ್ಣಪುಟ್ಟ ನಗರಗಳು, ಪೇಟೆ ಪಟ್ಟಣಗಳಲ್ಲಿ ವಿಸ್ತಾರವಾಗಿದ್ದು ಇದರಿಂದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬೆಗೆ ಸಹಕಾರಿಯಾಗಿದೆ ಎಂದರು.
ಕೆನರಾ ಬ್ಯಾಂಕ್ ಮ್ಯಾನೇಜರ್ ಬಿ.ಬಿ.ಕುಲಕರಣಿ ಮಾತನಾಡಿ, ಮಹಿಳೆಯರು ಸ್ವಾವಲಂಬನೆ ಜೊತೆಗೆ ಆರ್ಥಿಕ ಚಟುವಟಿಕೆ ವೃದ್ಧಿಗೆ ಕೆನರಾ ಬ್ಯಾಂಕ್ ಸದಾ ಸಿದ್ಧವಿದೆ. ಸಾಲ ಪಡೆದು ಡಿಫಾಲ್ಟರ್ ಆಗದೇ ಅದನ್ನು ಕಾಲ ಕಾಲಕ್ಕೆ ಕಟ್ಟಿಕೊಂಡು ಹೋದರೆ ನಿಮಗೆ ಹೆಚ್ಚಿನ ಸಾಲಸೌಲಭ್ಯ ಸಿಗುತ್ತವೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ವಿ.ಶಾಂತಮ್ಮ ಮಾನತಾಡಿ, ಕೇವಲ 15 ದಿನಗಳಲ್ಲಿ ಇಷ್ಟೊಂದು ಆಸಕ್ತಿದಾಯಕವಾಗಿ ಕೌಶಲ ತರಬೇತಿ ಕಲಿತಿರುವುದು ಹೆಮ್ಮೆಯ ವಿಷಯ. ಕಲಿಕೆಯ ಬುನಾಧಿ ಚನ್ನಾಗಿದೆ.
ಕಸೂತಿ ಕೆಲಸಗಳಿಗೆ ಈ ಕಾರ್ಯಾಗಾರ ನೆರವಾಗಿರುವುದು ಸಂತೋಷದಾಯಕ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ 5 ರಿಂದ 15 ಲಕ್ಷದ ವರೆಗೆ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ 40ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಕಾವೇರಿ ಸಮುದಾಯ ಸಂಪನ್ಮೂಲ ವ್ಯವಸ್ಥಾಪಕ ನವೀನ್ ಕುಮಾರ್, ತರಬೇತುದಾರರಾದ ದಿವ್ಯ, ಸಮುದಾಯ ಸಿಬ್ಬಂದಿ ವರ್ಗದ ತಿಮ್ಮಕ್ಕ, ಶರೀಫಾ, ರವಿಕುಮಾರ್, ರಾಜು, ವಾಮದೇವ್ ಕಾರ್ಯಕ್ರಮದಲ್ಲಿ ಇದ್ದರು.