ಫೆ.25ಕ್ಕೆ ಕಸಾಪ ತಾಲೂಕು ಸಮ್ಮೇಳನ ಅದ್ಧೂರಿಯಾಗಿ ಆಚರಿಸಲು ತೀರ್ಮಾನ

Suddivijaya
Suddivijaya February 10, 2023
Updated 2023/02/10 at 12:33 PM

ಸುದ್ದಿವಿಜಯ, ಜಗಳೂರು: ಇದೇ ಫೆ. ೨೫ಕ್ಕೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಇಲ್ಲಿನ ತಾಲೂಕು ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಲೂಕಿನ ಪಲ್ಲಾಗಟ್ಟೆಯಲ್ಲಿ 2003 ರ ವೇಳೆ ಮೊದಲ ಸಾಹಿತ್ಯ ಸಮ್ಮೇಳವನ್ನು ನಡೆಸಲಾಗಿತ್ತು. ಇದೀಗ 20 ವರ್ಷಗಳ ನಂತರ ಎರಡನೇ ಸಮ್ಮೇಳನ ನಡೆಸಲಾಗುತ್ತಿದ್ದು ಕನ್ನಡ ತೇರನ್ನು ಎಳೆಯಲು ಎಲ್ಲರು ಕೈಜೋಡಿಸಬೇಕು ಎಂದರು.

ತಾಲೂಕು ಅಭಿವೃದ್ದಿಯಲ್ಲಿ ಹಿಂದುಳಿದಿರಬಹುದು ಆದರೆ ಸಾಹಿತ್ಯ, ಸಾಂಸ್ಕೃತಿ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ರಾಜ್ಯದ ಗಮನ ಸೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತಿಗಳು, ಚುಟುಕು ಸಾಹಿತಿಗಳು, ಕವಿಗಳು, ಲೇಖಕರಿದ್ದಾರೆ. ಆದರೆ ಅವರುಗಳನ್ನು ಗುರುತಿಸಿ ಪ್ರತಿಭೆಗಳನ್ನು ಹೊರ ತರಲು ಸಾದ್ಯವಾಗಿಲ್ಲ. ಇನ್ನು ಮುಂದಾದರೂ ಕನ್ನಡದ ಬಗ್ಗೆ ಆಸಕ್ತಿ ತೋರಿಸಿ ಕನ್ನಡ ನಾಡು, ನುಡಿ, ಜಲ ರಕ್ಷಣೆಗೆ ಒಂದಾಗಿ ಹೋರಾಡಬೇಕು ಎಂದರು.

ಸಾಹಿತ್ಯ ಸಮ್ಮೇಳನಕ್ಕೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಬಗ್ಗೆ ಸಮಿತಿ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು, ಸಮ್ಮೇಳನಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಗಳೂರಿನ ತಾಲೂಕು ಕಚೇರಿಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಸಾಪ ಅಧ್ಯಕ್ಷೆ ಸುಜಾತ,ನಿವೃತ್ತ ಪ್ರಾಂಶುಪಾಲ ಪ್ರಭಾಕರ್ ಲಕ್ಕೋಳ್,ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಾಹಿತಿ ಎನ್.ಟಿ ಎರ್ರಿಸ್ವಾಮಿ ಇದ್ದರು.
ಜಗಳೂರಿನ ತಾಲೂಕು ಕಚೇರಿಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಸಾಪ ಅಧ್ಯಕ್ಷೆ ಸುಜಾತ,ನಿವೃತ್ತ ಪ್ರಾಂಶುಪಾಲ ಪ್ರಭಾಕರ್ ಲಕ್ಕೋಳ್,ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಾಹಿತಿ ಎನ್.ಟಿ ಎರ್ರಿಸ್ವಾಮಿ ಇದ್ದರು.

ನಿವೃತ್ತ ಪ್ರಾಂಶುಪಾಲ ಪ್ರಭಾಕರ್ ಲಕ್ಕೋಳ್ ಮಾತನಾಡಿ, ಕಾರ್ಯಕ್ರಮ ಯಶಸ್ವಿಗೆ ಹಣ, ವಯಸ್ಸು, ಅಧಿಕಾರ ಮುಖ್ಯವಲ್ಲಾ, ಅನುಭವಿಗಳು ಬಹು ಮುಖ್ಯವಾಗಿರುತ್ತದೆ. ಪ್ರತಿಷ್ಠೆ ಎಂದುಕೊಳ್ಳದೇ ಕನ್ನಡ ಭಾಷೆ, ಉಳಿವಿಗಾಗಿ ಮುನ್ನೆಲೆಗೆ ಬರಬೇಕು. ಉತ್ಸುಕತೆಯಿಂದ ಕೆಲಸ ಮಾಡಿ ಸಾಹಿತ್ಯ ಸಮ್ಮೇಳನ ಯಶಸ್ವಿಗಳಿಸಬೇಕು ಎಂದರು.

ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಾಹಿತಿ ಎನ್.ಟಿ ಎರ್ರಿಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯದ ಬಗ್ಗೆ ಅಪಾರವಾದ ಗೌರವಿದೆ. ನಿವೃತ್ತಿ ಜೀವನದ ನಂತರ ಹೆಚ್ಚು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದೇನೆ. ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಯುವಕರು ಹೆಚ್ಚಿನ ಸಹಕಾರ ನೀಡಬೇಕು ಎಂದರು.

ಕಸಾಪ ಸದಸ್ಯ ರಮೇಶ್, ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ಸಿ. ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ ಬಾಲರಾಜ್, ಅರಣ್ಯಾಧಿಕಾರಿ ಚೇತನ್, ಬಡಪ್ಪ ತೋರಣಗಟ್ಟೆ, ಪ್ರಾಂಶುಪಾಲ ನಾಗಲಿಂಗಪ್ಪ , ದಸಂಸ ಸಂಚಾಲಕ ಸತೀಶ್, ನಿವೃತ್ತ ಶಿಕ್ಷಕರಾದ ರವಿಕುಮಾರ್, ಡಿ.ಸಿ ಮಲ್ಲಿಕಾರ್ಜುನ, ನಿವೃತ್ತ
ಮುಖ್ಯ ಶಿಕ್ಷಕಿ ಎಚ್.ಎಸ್ ಶಿವಮ್ಮ, ಕಸಾಪ ಕಾರ್ಯದರ್ಶಿ ಗೀತಾ ಮಂಜು, ಸಂಘಟನಾ ಕಾರ್ಯದರ್ಶಿ ಕೃಷ್ಣಮೂವರ್ತಿ, ವಕೀಲ ಆರ್. ಓಬಳೇಶ್., ಗೌರಿಪುರ ಸತ್ಯಮೂರ್ತಿ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!