Suddivijayanews/12/5/2024
ವರದಿ: ಆರ್.ಎಲ್. ಜಗ ಜೀವನ್ ರಾಮ್, ಜಿಮ್ ಟ್ರೈನರ್
ಸುದ್ದಿವಿಜಯ, ವಿಶೇಷ;ಇತ್ತೀಚಿನ ದಿನಗಳಲ್ಲಿ ಮನುಷ್ಯ ತುಂಬಾ ಬ್ಯೂಸಿಯಾಗಿ ದೇಹಕ್ಕೆ ಕಸರತ್ತು ನೀಡದೆ ಅನೇಕ ಕಾಯಿಲೆಗಳನ್ನು ಎದುರಿಸುವಂತಹ ಸಂಭವ ಎದುರಾಗಿದೆ.
ಹೌದು, ಹಿಂದಿನ ಕಾಲದಲ್ಲಿ ಯಂತ್ರ ಉಪಕರಣಗಳು ಇಲ್ಲದ ಕಾರಣ ಮನುಷ್ಯನು ದೇಹವನ್ನು ದಂಡಿಸಿ ಕೆಲಸ ಮಾಡುತ್ತಿದ್ದ ಹಾಗೂ ಆರೋಗ್ಯವಂತನಾಗಿದ್ದ ಆದರೆ
ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣಗಳು ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿ ದೇಹವನ್ನು ದಂಡಿಸದೆ ಕೇವಲ ತೋರು ಬೆರಳಿನಲ್ಲಿ ಜಗತ್ತನ್ನೇ ನಡೆಸಬಲ್ಲಂತಹ ತಂತ್ರಜ್ಞಾನವನ್ನು ಕಂಡುಕೊಂಡ ಮೇಲೆ ಮನುಷ್ಯನ ದೇಹವು ಕೊಲೆಸ್ಟ್ರಾಲ್, ಸ್ತೂಲಕಾಯ, ಸಕ್ಕರೆ ಕಾಯಿಲೆ, ಅಧಿಕ ರಕ್ತದ ಒತ್ತಡ, ಇನ್ನು ಅನೇಕ ಕಾಯಿಲೆಗಳನ್ನು ಉದ್ಭವವಾಗಲು ನೇರ ಕಾರಣ ಅಧಿಕ ದೇಹದ ತೂಕವಾಗಿದೆ.
ನಮ್ಮ ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ನೀವು ಈ ಮೂರು ಸೂತ್ರಗಳನ್ನು ಪಾಲಿಸಿದರೆ ಸಾಧ್ಯವಾಗಬಹುದು, ಒಂದನೆಯದಾಗಿ ನಮಗೆ ಶಿಸ್ತು ಮತ್ತು ಸಮಯ ಪ್ರಜ್ಞೆ ಅತ್ಯವಶ್ಯಕ ಹೌದು ನಾವು ಯಾವುದೇ ಕೆಲಸವನ್ನು ಪ್ರಾರಂಭ ಮಾಡಲು ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು.
ಎರಡನೆಯದಾಗಿ ಆಹಾರ ನಿಯಂತ್ರಣ, ಇದು ದೇಹ ತೂಕ ಕಡಿಮೆ ಮಾಡಲು ಮುಖ್ಯವಾಗಿ ಬೇಕಾಗಿರುವಂತಹ ಅಂಶ. ಮನುಷ್ಯನಿಗೆ ದಿನಕ್ಕೆ ಸರಾಸರಿ 2000 ಕ್ಯಾಲೋರಿಸ್ ಬೇಕಾಗುತ್ತದೆ.
ಆದರೆ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಾಗ ದಿನಕ್ಕೆ 1200 ರಿಂದ 1400 ಕ್ಯಾಲೋರಿಸ್ ಮಿತಿಯೊಳಗೆ ಆಹಾರವನ್ನು ಸೇವಿಸಬೇಕಾಗುತ್ತದೆ.
ದೇಹಕ್ಕೆ ಕಡಿಮೆ ಕ್ಯಾಲೋರಿಸ್ ಕೊಡುವಾಗ ಮೊದಲು 10 ದಿನಗಳವರೆಗೆ ದೇಹಕ್ಕೆ ಸುಸ್ತು, ಆಯಾಸ, ಸ್ವಲ್ಪ ಮಟ್ಟಿಗೆ ತಲೆನೋವು ಕಾಣಿಸಿಕೊಳ್ಳಬಹುದು ಅದಕ್ಕೆ ಭಯಪಡುವ ಅವಶ್ಯಕತೆ ಇಲ್ಲ, ತುಂಬಾ ಹಸಿವು ಅನಿಸಿದಾಗ ಶುದ್ಧ ಹಣ್ಣಿನ ರಸವನ್ನು ಸೇವಿಸಬಹುದು.
ಯಾವ ಸಮಯದಲ್ಲಿ ಆಹಾರವನ್ನು ತೆಗೆದುಕೊಳ್ಳಬೇಕೆಂದರೆ ಬೆಳಿಗ್ಗೆ 9 ಗಂಟೆಗೆ ಆಹಾರ ಸೇವಿಸಿದರೆ ಮತ್ತೆ ರಾತ್ರಿ 8 ಗಂಟೆಯವರೆಗೆ ನೀರು, ಹಣ್ಣಿನ ರಸವನ್ನು ಹೊರತುಪಡಿಸಿ ಉಳಿದಂತೆ ಯಾವುದು ಹೊಟ್ಟೆಗೆ ನೀಡುವಂತಿಲ್ಲ, ಹಾಗೂ ಎಣ್ಣೆಯಲ್ಲಿ ಕರೆದ ಪದಾರ್ಥ, ಕೊಬ್ಬು ಹೆಚ್ಚು ಇರುವ ಪದಾರ್ಥ, ಸಕ್ಕರೆ ಪದಾರ್ಥ ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಾಗುತ್ತದೆ.
45 ದಿನಗಳ ಕಾಲ ಮಾಡಿ:
ದೇಹ ತೂಕ ಇಳಿಕೆಯ ಉತ್ತಮ ಫಲಿತಾಂಶಕ್ಕಾಗಿ ಬೆಳಗಿನ ಉಪಹಾರದಲ್ಲಿ ಹಾಗೂ ರಾತ್ರಿಯ ಊಟದಲ್ಲಿ ಒಮೇಗಾ 3 ಫಿಶ್ ಆಯಿಲ್ ಕ್ಯಾಪ್ಸೂಲನ್ನು ದಿನಕ್ಕೆ ಎರಡನ್ನು ಬಳಕೆ ಮಾಡಬಹುದಾಗಿದೆ.
ಹಾಗೂ ಬಾದಾಮಿ, ಪಿಸ್ತ, ಉತ್ತುತ್ತಿ, ಗೋಡಂಬಿಯನ್ನು ಮಿತವಾಗಿ ಸೇವಿಸಬಹುದಾಗಿದೆ.
ಮೂರನೆಯದಾಗಿ ವ್ಯಾಯಾಮ, ಪ್ರತಿನಿತ್ಯ ಬೆಳಗಿನ ಜಾವ 1ತಾಸಿನಲ್ಲಿ ಸರಿಸುಮಾರು 10000 ಹೆಜ್ಜೆಗಳ ನಡಿಗೆಯನ್ನು ಗುರಿಯಾಗಿಟ್ಟುಕೊಂಡು ನಡೆಯಬೇಕಾಗುತ್ತದೆ.
ವಾಕಿಂಗ್ ಮಾಡುವುದರಿಂದ ದೇಹಕ್ಕೆ ಲಘು ವ್ಯಾಯಾಮ ದೊರೆತು ಕ್ಯಾಲೋರಿಸ್ ಬರ್ನ್ ಆಗುವುದರೊಂದಿಗೆ ದೇಹದೊಳಗೆ ಇರುವ ಕೆಟ್ಟ ಕೊಲೆಸ್ಟ್ರಾಲ್ ಕರಗಲು ಸಹಾಯಮಾಡುತ್ತದೆ.
ದೇಹವು ಕೆಟ್ಟ ಕೊಲೆಸ್ಟ್ರಾಲನ್ನು ಆಹಾರ ರೂಪದಲ್ಲಿ ಪಡೆದುಕೊಂಡು ಹಸಿವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
10*3 ಪ್ರಕಾರದಲ್ಲಿ ಪುಶ್ ಅಪ್ ಮಾಡುವುದು ಹಾಗೂ 10*3 ಸ್ಕ್ವಾರ್ಟ್ (ಬಸಿಗೆ) ಮಾಡುವುದು ಮಾಂಸ ಖಂಡಗಳಿಗೆ ಬಲಪಡಿಸಿ ಕೊಬ್ಬು ಕರಗಲು ಸಹಾಯಮಾಡುತ್ತದೆ.
ಇನ್ನು ಸಂಜೆಯ ವ್ಯಾಯಾಮದ 30ನಿಮಿಷಗಳ ಪೂರ್ವದಲ್ಲಿ ಬಾಳೆಹಣ್ಣು ಅಥವಾ ಎರಡು ಮೊಟ್ಟೆಗಳನ್ನು ಸೇವಿಸುವುದು ಅವಶ್ಯಕವಾಗಿದೆ.
ನಂತರ ನಿಮ್ಮ ಹತ್ತಿರದ ಜಿಮ್ಗಳಿಗೆ ಹೋಗಬಹುದು ಇಲ್ಲವೇ ಮನೆಯಲ್ಲಿಯೇ ಹೊಟ್ಟೆಯನ್ನು ಕರಗಿಸುವ ವ್ಯಾಯಾಮವನ್ನು ಕನಿಷ್ಠ ಒಂದು ತಾಸು ಮಾಡುವುದು ಅವಶ್ಯಕವಾಗಿದೆ.
ಹೊಟ್ಟೆ ಕರಗಿಸುವ ವ್ಯಾಯಾಮಗಳಿಗಾಗಿ ಯೌಟ್ಯೂಬ್ ವೀಕ್ಷಿಸಿ. ಮುಖ್ಯವಾಗಿ ಜಿಮ್ಗಳಿಗೆ ಹೋಗುವುದರಿಂದ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ.
ಈ ಮೂರು ಸೂತ್ರಗಳನ್ನು ಪ್ರತಿದಿನ ಕಟ್ಟುನಿಟ್ಟಾಗಿ ಪಾಲಿಸಿದರೆ ವಾರಕ್ಕೆ ಕನಿಷ್ಠ 1.5 ರಿಂದ 2ಕೆಜಿ ಯವರೆಗೆ ದೇಹದ ತೂಕವನ್ನು ಕಳೆದುಕೊಳ್ಳಬಹುದಾಗಿದೆ.
No pain, No gain
ಮುಂದಿನ ಸಂಚಿಕೆಯಲ್ಲಿ ದೇಹ ತೂಕದ ಹೆಚ್ಚಳಕ್ಕಾಗಿ ವೀಕ್ಷಿಸಿ