Suddivijaya/ kannadanews 13/4/2023
ಸುದ್ದಿವಿಜಯ, ಜಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ 2021-22ನೇ ಸಾಲಿನಲ್ಲಿ ತಿರಸ್ಕೃತಗೊಂಡ ರೈತರ ಮರು ಪ್ರಸ್ತಾವನೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ಹಂಗಾಮುಗಳಲ್ಲಿ ರೈತರು ಸಲ್ಲಿಸಿದ್ದ ಪ್ರಸ್ತಾವನೆಗಳು ಹಾಗೂ ಬೆಳೆ ಸಮೀಕ್ಷೆಯ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ ತಾಳೆ ನೋಡಲಾಗಿದೆ.
ವಿಮಾ ಸಂಸ್ಥೆಯವರು ಪ್ರಸ್ತಾವನೆಗಳನ್ನು ಪರಿಶೀಲಿಸಿ ಜಗಳೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನ 138 ರೈತರ ಮತ್ತು ಹಿಂಗಾರು ಹಂಗಾಮಿನ 31 ರೈತರ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದಾರೆ.
ಹೀಗಾಗಿ ತಿರಸ್ಕೃತಗೊಂಡಿರುವ ರೈತರ ಅರ್ಜಿಗಳ ಮಾಹಿತಿಗಳನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಆದುದರಿಂದ 2021-22ನೇ ಸಾಲಿನ ಮೂರು ಹಂಗಾಮುಗಳಲ್ಲಿ ವಿಮೆ ಮಾಡಿಸಿರುವ ರೈತರು ತಮ್ಮ ಮರು ಆಕ್ಷೇಪಣಾ ಅರ್ಜಿಗಳನ್ನು ಅವಕಾಶ ಕಲ್ಪಿಸಲಾಗಿದೆ.
ತಮ್ಮ ಸಮೀಪದ ರೈತ ಸಂಪರ್ಕ್ ಕಚೇರಿಗಳಿಗೆ ಭೇಟಿ ನೀಡಿ ಏ.29ರ ಒಳಗೆ ಕಲ್ಪಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ರೈತ ಸಂಪರ್ಕ್ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಸಿ ಎಂದು ಮಾಹಿತಿ ನೀಡಿದರು.