ಸುದ್ದಿವಿಜಯ, ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಸೋಮವಾರ ಮತ್ತು ಮಂಗಳವಾರ ಅದ್ಧೂರಿಯಾಗಿ ನೆರವೇರಿತು.
ಐತಿಹಾಸಿ ಹಿನ್ನೆಲೆಯುಳ್ಳ ಶ್ರೀ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವಕ್ಕೆ ಜಗಳೂರು ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಂದ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಸೋಮವಾರ ರಾತ್ರಿ ದೇವರ ಮುಖಪದ್ಮವನ್ನು ದೇವಸ್ಥಾನದ ಆವರಣದಲ್ಲಿ ಇರಿಸಿ ಕಡ್ಲೆ ಕಟ್ಟುವ ಮೂಲಕ ರಾತ್ರಿಯಿಡೀ ಪೂಜೆ ಸಲ್ಲಿಸಲಾಯಿತು.
ಹರಕೆ ಹೊತ್ತ ಭಕ್ತರು ಎಲೆ ಪೂಜೆ ನೆರವೇರಿಸಿದರು. ಬೆಳಗಿನ ಜಾವ ನಾಲ್ಕು ಗಂಟೆಗೆ ಬ್ರಾಹ್ಮಿ ಮೂರ್ತದಲ್ಲಿ ಬಸವೇಶ್ವರ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮಂಗಳವಾರ ಬೆಳಿಗ್ಗೆ ಶೃಂಗಾರಗೊಂಡ ಕಿರು ತೇರಿಗೆ ಬಾಳೆಹಣ್ಣು, ಅನ್ನಂತರ್ಪಣೆ ಎಡೆ ಹಾಕಿದ ಹೆಂಚಿನ ಮನೆ ಮನೆತವರಿಂದ ಪೂಜೆ ನೆರವೇರಿಸಿದರು.
ನಂತರ ಪಲ್ಲಕ್ಕಿಯಕಲ್ಲಿ ಗಂಗಾಪೂಜೆ ಮುತ್ತೈದೆಯರು ನೆರವೇರಿಸಿದರು. ನಂತರ ಜಾನಪದ ಕಲಾಪ್ರಕಾರಗಳಾದ ನಂದಿಧ್ವಜ ಕುಣಿತ, ಸಮಾಳ, ವಾದ್ಯವೃಂದಗಳ ಮೂಲಕ ಕಿರುತೇರಿನಲ್ಲಿ ಪಾದಗಟ್ಟೆಯವರೆಗೆ ನೂರಾರು ಭಕ್ತರು ಕರೆತಂದು ಅಲ್ಲಿ ಪೂಜೆ ನೆರವೇರಿಸಿದರು.
ಈ ವೇಳೆ ಪೂಜಾರ್ ವಂಶಸ್ಥರು, ಸಾವಜ್ಜಿ ವಂಶಸ್ಥರು, ಮುರುಡಪ್ಳರ ವಂಶಸ್ಥರು, ಹೆಬ್ಬಾಳ್ ವಂಶಸ್ಥರು, ನಾಗಪ್ಳರ ವಂಶಸ್ಥರು, ಗೌಡ್ರು ವಂಶಸ್ಥರು ಗ್ರಾಮದ ಎಲ್ಲ ಸಮುದಾಯದ ಮುಖಂಡರು ಪೂಜಾವಿಧಿವಿಧಾನದಲ್ಲಿ ಭಾಗವಹಿಸಿದ್ದರು.