Suddivijayanews16/8/2024
ಸುದ್ದಿವಿಜಯ,ಜಗಳೂರು: ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಕೆರೆಗೆ ಕೋಡಿ ಬಿದ್ದ ಹಿನ್ನೆಲೆ ಶುಕ್ರವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಬಾಗಿನ ಅರ್ಪಿಸಿದರು.
ಚಿಕ್ಕಮ್ಮನಹಟ್ಟಿ ಗ್ರಾಮಕ್ಕೆ ಆಗಮಿಸಿದ ಸಂಸದೆ ಹಾಗೂ ಶಾಸಕರನ್ನು ಮಹಿಳೆಯರು ಆರತಿ ಬೆಳಗಿದರೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ನಂತರ ಎತ್ತಿನಗಾಡಿಯಲ್ಲಿ ಕೆರೆಯವರೆಗೂ ಮೆರವಣಿಗೆ ನಡೆಸಲಾಯಿತು. ಮೆರವಣಿಯುದ್ದಕ್ಕೂ ಬಾರಿಸಿದ ಡ್ರಮ್‍ಸೆಟ್ ಶಬ್ದಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.
ಒಮ್ಮೆ ಕೆರೆಯ ವೀಕ್ಷಿಸಿ ಸಂಸದರು ಮಾಹಿತಿ ಪಡೆದರು. ಕೆರೆಯ ದಡದಲ್ಲಿ ಪೂಜೆ ಸಲ್ಲಿಸಿ ಕೊನೆಗೆ ನೀರಿಗೆ ಬಾಗಿನ ಸಮರ್ಪಿಸಿದರು.
ನಂತರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಕೆರೆಗಳು ರೈತರ ಜೀವನಾಡಿಯಾಗಿವೆ.
ಕೆರೆಗಳಿಂದ ಅಂತರ್ಜಲ ವೃದ್ದಿಗೊಂಡು ಕೃಷಿ ಪಂಪ್‍ಸೆಟ್ ಗಳು ಮರುಪೂರಣಗೊಳ್ಳುತ್ತವೆ. ಹಾಗಾಗಿ ಕೆರೆಗಳ ಉಳಿವಿಗಾಗಿ ಗಮಹರಿಸಬೇಕು ಎಂದರು.
ಶಾಸಕ ಚಿಕ್ಕಮ್ಮಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ಚಿಕ್ಕಮ್ಮನಹಟ್ಟಿ ಕುಗ್ರಾಮವಾಗಿದ್ದು, ನಾಉ ಹುಟ್ಟಿದ ಊರಲ್ಲಿ ಕೆರೆ ನಿರ್ಮಿಸಬೇಕು ಎನ್ನುವ ಉದ್ದೇಶದಿಂದ ಶ್ರಿ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸಹಕಾರದಿಂದ ಸುಮಾರು 4ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ.
ಸುತ್ತಲು ವಾಕ್ ಪಾಥ್, ಆಸನಗಳನ್ನು ಅಳವಡಿಸಲಾಗುವುದು, ಮುಂಜಾನೆ ಮತ್ತು ಸಂಜೆಯಲ್ಲಿ ವಾಯುವಿಹಾರ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್,
ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮದ್, ಮಂಜುನಾಥ್, ಮುಖಂಡ ಮಧಸೂದನ್,
ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ, ಕೆಚ್ಚೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಟಿ. ಲಕ್ಷ್ಮಮ್ಮ ಮಾರಪ್ಪ, ಬಂಗಾರಪ್ಪ, ಗಾದ್ರಪ್ಪ, ಕಾಟಪ್ಪ ಸೇರಿದಂತೆ ಮತ್ತಿತರರಿದ್ದರು.