ಸುದ್ದಿವಿಜಯ, ಜಗಳೂರು: ಜಾಗತೀಕ ಮಟ್ಟದಲ್ಲಿ ಭಾರತವನ್ನು ವಿಶ್ವದ ಇತರೆ ರಾಷ್ಟ್ರಿಗಳು ನೋಡುವ ದೃಷ್ಟಿಕೋನ ಬದಲಾಗಿರುವುದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಮಾಜಿ ಶಾಸಕ
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನ ಅಂಗವಾಗಿ ರೋಗಿಗಳಿಗೆ ಹಣ್ಣು, ಬಿಸ್ಕೇಟ್, ಬ್ರೆಡ್ ನೀಡಿ ಮಾತನಾಡಿದರು.
ಮೋದಿಜೀ ಅವರ ಪ್ರಗತಿಪರ ಯೋಜನೆ, ಯೋಚನೆ ಪ್ರಾಮಾಣಿಕ ಚಿಂತನೆ, ಖಡಕ್ ತೀರ್ಮಾನಗಳು ಜಾಗತೀಕ ಮಟ್ಟದಲ್ಲಿ ಶಾಂತಿ ಕುರಿತ ಕಾಳಜಿ ವಿಶ್ವಕ್ಕೆ ಮಾದರಿ ಪ್ರಧಾನಿಯಾಗಿದಾರೆ.ಅವರನ್ನು ವಿಶ್ವ ನಾಯಕ ಎಂದು ಕರೆಯಲು ಹೆಮ್ಮೆಯಾಗುತ್ತದೆ ಎಂದರು.ಜಗಳೂರು ತಾಲೂಕು ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬರಗಾಲ ಘೋಷಣೆ ಸಂಬಂಧದ ಮಾನದಂಡಗಳ ಪರಿಷ್ಕರಣೆ ಕೋರಿಕೆಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿರುವುದು ಸರಿಯಲ್ಲ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರಕಾರ ಸಾಕಷ್ಟು ಕೊಡುಗೆ ನೀಡಿದೆ ಎಂದರು.
ಈ ವೇಳೆ ಬಿಜೆಪಿ ಮಂಡಲ್ ಅಧ್ಯಕ್ಷರಾದ ಪಲ್ಲಾಗಟ್ಟೆ ಮಹೇಶ್, ಮಾಜಿ ಅಧ್ಯಕ್ಷ ಹಾಗೂ ವಕೀಲರಾದ ಡಿ.ವಿ.ನಾಗಪ್ಪ, ಬಿದರಕೆರೆ ರವಿಕುಮಾರ್, ಪಪಂ ಸದಸ್ಯ ಪಾಪಲಿಂಗಪ್ಪ, ದೇವರಾಜ್, ಪೂಜಾರ್ ಸಿದ್ದಪ್ಪ, ಹನುಮಂತಪ್ಪ, ನವೀನ್, ಓಬಳೇಶ್, ಪಲ್ಲಾಗಟ್ಟೆ ರೇವಣ್ಣ, ಸತೀಶ್, ಪ್ರವೀಣ್, ಕುಬೇಂದ್ರಪ್ಪ ಸೇರಿದಂತೆ ಅನೇಕರು ಇದ್ದರು.
ಶಾಸಕ ಬಿ.ದೇವೇಂದ್ರಪ್ಪ ಜೊತೆ ಚರ್ಚೆ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮತ್ತು ಆಂಬುಲೆನ್ಸ್ ಚಾಲಕರ ಕೊರತೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಎಸ್‍ವಿಆರ್, ಆಸ್ಪತ್ರೆಯ ಮೂಲ ಸೌಕರ್ಯ ಕೊರತೆಗಳ ಬಗ್ಗೆ ಶಾಸಕ ಬಿ.ದೇವೇಂದ್ರಪ್ಪ ಜೊತೆ ಚರ್ಚೆ ಮಾಡುತ್ತೇನೆ. ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ನನ್ನ ಅವದಿಯಲ್ಲಿ ತೀರ್ಮಾನವಾಗಿತ್ತು. ತಕ್ಷಣವೇ ಶಾಸಕರು ಆಸ್ಪತ್ರೆ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಬೇಕು ಎಂದರು.